Advertisement

ವ್ಯಾಕ್ಸಿನ್‌ ಚಾಲೆಂಜ್‌: ಜಿ.ಪಂ.ನಿಂದ 50 ಲಕ್ಷ ರೂ. ದೇಣಿಗೆ

10:35 PM Apr 29, 2021 | Team Udayavani |

ಕಾಸರಗೋಡು: ವ್ಯಾಕ್ಸಿನ್‌ ಚಾಲೆಂಜ್‌ ಅಂಗವಾಗಿ ಕಾಸರಗೋಡು ಜಿಲ್ಲಾ ಪಂಚಾಯತ್‌ನಿಂದ ಮುಖ್ಯಮಂತ್ರಿ ದುರಂತ ಪರಿಹಾರ ನಿಧಿಗೆ 50 ಲಕ್ಷ ರೂ. ದೇಣಿಗೆ ನೀಡಲು ಜಿಲ್ಲಾ ಪಂಚಾಯತ್‌ ಸಭೆ ತೀರ್ಮಾನಿಸಿದೆ.

Advertisement

ಬುಧವಾರ ನಡೆದ ಸಭೆಯಲ್ಲಿ ಜಿ.ಪಂ. ಅಧ್ಯಕ್ಷೆ ಬೇಬಿ ಬಾಲಕೃಷ್ಣನ್‌ ಅವರ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ. ಸದಸ್ಯರು ತಮ್ಮ ಒಂದು ತಿಂಗಳ ಗೌರವ ಧನವನ್ನು ಈ ನಿಟ್ಟಿನಲ್ಲಿ ವ್ಯಾಕ್ಸಿನ್‌ ಚಾಲೆಂಜ್‌ಗೆ ನೀಡಲಿದ್ದಾರೆ.

ಚಟ್ಟಂಚಾಲಿನ ಉದ್ದಿಮೆ ಉದ್ಯಾನದಲ್ಲಿ ತ್ರಿಸ್ತರ ಪಂಚಾಯತ್‌ಗಳು ಮತ್ತು ನಗರ ಸಭೆಗಳು ಜಂಟಿ ವತಿಯಿಂದ ಆಕ್ಸಿಜನ್‌ ಪ್ಲಾಂಟ್‌ ಸ್ಥಾಪಿಸಲಿವೆ. ಈ ನಿಟ್ಟಿನಲ್ಲಿ ಅಗತ್ಯ ವಿರುವ ಜಾಗ ಮತ್ತು 50 ಲಕ್ಷ ರೂ.ವನ್ನು ಜಿಲ್ಲಾ ಪಂಚಾಯತ್‌ ಮಂಜೂರು ಮಾಡಲಿದೆ ಎಂದು ಸಭೆ ತಿಳಿಸಿದೆ. ಗ್ರಾಮ ಪಂಚಾಯತ್‌ಗಳು ತಲಾ 3 ಲಕ್ಷ ರೂ., ಬ್ಲಾಕ್‌ ಪಂಚಾಯತ್‌ಗಳು ಮತ್ತು ನಗರಸಭೆಗಳು ತಲಾ 5 ಲಕ್ಷ ರೂ. ಈ ನಿಟ್ಟಿನಲ್ಲಿ ಮೀಸಲಿರಿಸಲಿವೆ. ಇದರಲ್ಲಿ ಜಿಲ್ಲಾ ಯೋಜನೆ ಸಮಿತಿಯ ತೀರ್ಮಾನ ಅಂತಿಮವಾಗಿರುವುದು.

ಮೇ 1ರಿಂದ ಹಾಸಿಗೆ ಹಿಡಿದಿರುವ ರೋಗಿಗಳಿಗೆ ಮನೆಗಳಿಗೆ ತೆರಳಿ ಕೋವಿಡ್‌ ವ್ಯಾಕ್ಸಿನ್‌ ನೀಡುವ ಯೋಜನೆಯನ್ನು ಜಿಲ್ಲಾ ಆರೋಗ್ಯ ವಿಭಾಗ, ರಾಷ್ಟ್ರೀಯ ಆರೋಗ್ಯ ದೌತ್ಯಗಳೊಂದಿಗೆ ಸೇರಿ ಜಿಲ್ಲಾ ಪಂಚಾಯತ್‌ ಜಾರಿಗೊಳಿಸಲಿದೆ. ತದನಂತರ ಅಂಗವಿಕಲರಿಗೆ ವ್ಯಾಕ್ಸಿನ್‌ ಸೌಲಭ್ಯ ಒದಗಿಸಲಾಗುವುದು ಎಂದು ಸಭೆ ತಿಳಿಸಿದೆ.

ಶುಕ್ರವಾರ ಪಾರೆಂಟಿಂಗ್‌ ಕ್ಲಿನಿಕ್‌ಗಳ ಸೇವೆ :

Advertisement

ವಾರಾಂತ್ಯ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಜಿಲ್ಲೆಯ 6 ಬ್ಲಾಕ್‌ಗಳ ಐ.ಸಿ.ಡಿ.ಎಸ್‌. ಕಚೇರಿ ಗಳಲ್ಲಿ ಪ್ರತಿ ಶನಿವಾರ ಬೆಳಗ್ಗೆ 9.30ರಿಂದ ಮಧ್ಯಾಹ್ನ 1.30 ವರೆಗೆ ನಡೆಸಲಾಗುತ್ತಿದ್ದ ಪಾರೆಂಟಿಂಗ್‌ ಕ್ಲಿನಿಕ್‌ಗಳ ಸೇವೆ ಈ ಬಾರಿ ಶುಕ್ರವಾರ ನಡೆಸಲಾಗುವುದು.

ಕೇರಳದಲ್ಲಿ  ಹೆಚ್ಚುತ್ತಿರುವ ಆಮ್ಲಜನಕ ಬೇಡಿಕೆ :

ಕೋವಿಡ್‌ ಹರಡುವಿಕೆ ತೀವ್ರಗೊಂಡಿರುವಾಗಲೇ ರಾಜ್ಯದಲ್ಲಿ ಆಮ್ಲಜನಕದ ಬೇಡಿಕೆ ಹೆಚ್ಚಿದೆ. ದಿನಂಪ್ರತಿ 2 ಟನ್‌ಗಳಷ್ಟು ಆಮ್ಲಜನಕವು ಹೆಚ್ಚುವರಿಯಾಗಿ ಬೇಕಾಗುತ್ತಿದೆ. ಒಂದು ವಾರದ ಹಿಂದಿನವರೆಗೆ ದಿನಂಪ್ರತಿ 76ರಿಂದ 86 ಟನ್‌ ಆಮ್ಲಜನಕ ಸಾಕಾಗುತ್ತಿತ್ತು. ಆದರೆ ಇದೀಗ ಅದರ ಬೇಡಿಕೆ 96 ಟನ್‌ಗೆàರಿದೆ. ಎಪ್ರಿಲ್‌ ತಿಂಗಳ ಕೊನೆಯ ವೇಳೆಗೆ 100 ಟನ್‌ಗಿಂತ ಹೆಚ್ಚು ಆಮ್ಲಜನಕ ಬೇಕಾಗಿ ಬರಬಹುದೆಂದು ಅಂದಾಜಿಸಲಾಗಿದೆ. ಆರಂಭದಲ್ಲಿ ಕೋವಿಡ್‌ ಸೋಂಕಿತರಿಗಾಗಿ ಪ್ರತೀ ದಿನ 30ರಿಂದ 35ಟನ್‌ ಆಮ್ಲಜನಕ ಬೇಕಾಗುತ್ತಿತ್ತು. ಕೋವಿಡೇತರ ಅಗತ್ಯಗಳಿಗೆ ದಿನಂಪ್ರತಿ 45 ಟನ್‌ ಆಮ್ಲಜನಕ ಬೇಕಾಗುತ್ತದೆ. ಎ. 24ರಿಂದ ಪ್ರತೀ ದಿನ 95 ಟನ್‌ ಆಮ್ಲಜನಕ ಬೇಕಾಗಿ ಬರುತ್ತಿದೆ. ಇದೇ ವೇಳೆ ದಿನಂಪ್ರತಿ 200 ಟನ್‌ಗಳಷ್ಟು ಆಮ್ಲಜನಕ ಉತ್ಪಾದಿಸುವ ಶಕ್ತಿ ಕೇರಳಕ್ಕಿದೆ.

ಶೀಘ್ರದಲ್ಲಿ  ಆಕ್ಸಿಜನ್‌ ಪ್ಲಾಂಟ್‌ ಸ್ಥಾಪನೆ  :

ಕಾಸರಗೋಡು ಜಿಲ್ಲೆಯಲ್ಲಿ ಶೀಘ್ರದಲ್ಲಿ ಆಕ್ಸಿಜನ್‌ ಪ್ಲಾಂಟ್‌ ಸ್ಥಾಪನೆಗೊಳ್ಳಲಿದೆ. ಜಿಲ್ಲಾ ಪಂಚಾಯತ್‌ ವ್ಯಾಪ್ತಿಯ ಚಟ್ಟಂಚಾಲ್‌ ಉದ್ದಿಮೆ ಉದ್ಯಾನದಲ್ಲಿ ಈ ಪ್ಲಾಂಟ್‌ ಸ್ಥಾಪನೆ ಗೊಳ್ಳಲಿದೆ. ಇದರ ಅಂಗವಾಗಿ ಜಿಲ್ಲಾ ಪಂಚಾಯತ್‌ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್‌, ಜಿಲ್ಲಾಧಿಕಾರಿ ಡಾ| ಡಿ. ಸಜಿತ್‌ ಬಾಬು, ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್‌ ವಿಶೇಷ ಅಧಿಕಾರಿ ಇ.ಪಿ. ರಾಜ್‌ ಮೋಹನ್‌, ಹಣಕಾಸು ಅಧಿಕಾರಿ ಸತೀಶನ್‌, ಉದ್ದಿಮೆ ಕೇಂದ್ರ ಪ್ರಬಂಧಕ ಸಜಿತ್‌ ಅವರ ನೇತೃತ್ವದ ತಂಡ ಸದ್ರಿ ಜಾಗವನ್ನು ಪರಿಶೀಲಿಸಿತು.

Advertisement

Udayavani is now on Telegram. Click here to join our channel and stay updated with the latest news.

Next