Advertisement

ಎರಡು ತಿಂಗಳ ಬಳಿಕವೂ ಲಸಿಕೆ ಕೊಡಬಹುದು: ವೈದ್ಯರು

10:28 PM Apr 19, 2020 | Sriram |

ಉಡುಪಿ: ಕೋವಿಡ್ 19 ಭೀತಿಯಿಂದ ಕಳೆದ ಒಂದು ತಿಂಗಳಿನಿಂದ ಮಕ್ಕಳಿಗೆ ನೀಡಬೇಕಾದ ವಿವಿಧ ಲಸಿಕೆಗಳು ಸ್ಥಗಿತಗೊಂಡಿದೆ. ಇದೀಗ ಮಕ್ಕಳ ಲಸಿಕೆ ಅವಧಿ ಮುಕ್ತಾಯಗೊಂಡಿರುವುದು ಹೆತ್ತವರನ್ನು ಆತಂಕಕ್ಕೀಡು ಮಾಡಿದೆ.

Advertisement

ಮಕ್ಕಳಿಗೆ ಲಸಿಕೆ ಯಾಕೆ?
ಹುಟ್ಟಿದ ಮಕ್ಕಳಲ್ಲಿ ಸ್ವಲ್ಪ ರೋಗ ನಿರೋಧಕ ಶಕ್ತಿ ತಾಯಿಯ ಹಾಲಿನಿಂದ ಶಿಶುವಿಗೆ ಸಿಗುತ್ತದೆ. ಆದರೆ ಇದು ಕ್ರಮೇಣ ಕಡಿಮೆಯಾಗುತ್ತದೆ. ಇದರಿಂದ ಮಕ್ಕಳು ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುವ ಸಾಧ್ಯತೆ ಹೆಚ್ಚು. ಆದ್ದರಿಂದ ಸರಿಯಾದ ಸಮಯದಲ್ಲಿ ಲಸಿಕೆ ನೀಡಬೇಕು. ಆಗ ಮಕ್ಕಳಲ್ಲಿ ಆಂಟಿಬಾಡೀಸ್‌ ಉತ್ಪತ್ತಿಯಾಗಿ ರೋಗಾಣುವಿನೊಂದಿಗೆ ಹೋರಾಡಿ ರೋಗ ಬಾರದಂತೆ ತಡೆಗಟ್ಟುತ್ತದೆ.

ಪ್ರತಿ ಗುರುವಾರ
ಭಾರತ ಸರಕಾರ ರೋಗ ಪ್ರತಿಬಂಧಿತ ಲಸಿಕಾ ಕಾರ್ಯಕ್ರಮವನ್ನು ಜಾರಿಗೊಳಿಸಿದೆ. ಈ ಕಾರ್ಯಕ್ರಮದಲ್ಲಿ ಹಾಕುವ ಲಸಿಕೆಗಳು ಇಡೀ ಸಮಾಜದ ಮಕ್ಕಳ ರಕ್ಷಣೆಗೆ ಅನಿವಾರ್ಯವಾಗಿದೆ. ಆದ್ದರಿಂದ ಸರಕಾರಿ ಆಸ್ಪತ್ರೆ ಯಲ್ಲಿ ಪ್ರತಿ ಗುರುವಾರ ಲಸಿಕೆಗಳನ್ನು ನೀಡಲಾಗುತ್ತಿದೆ. ಇನ್ನು ಖಾಸಗಿ ಆಸ್ಪತ್ರೆಯಲ್ಲಿ ಜನರ ಲಭ್ಯತೆ ಆಧಾರದಲ್ಲಿ ಆಯಾ ದಿನ ನೀಡಲಾಗುತ್ತಿತ್ತು.

ಯಾವ ಲಸಿಕೆ, ಯಾವಾಗ ನೀಡಬೇಕು?
ಮಗು ಜನಿಸಿದ ತ್‌ತ್‌ಕ್ಷಣ ಬಿಸಿಜಿ, ಒಪಿವಿ-, ಹೆಪೆಟೈಟಿಸ್‌-ಬಿ ಲಸಿಕೆ ನೀಡಲಾಗುತ್ತದೆ.

6ನೇ ವಾರದ ಮಗುವಿಗೆ ಒಪಿವಿ-1, ಪೆಂಟಾವಲೆಂಟ್‌-1, ರೊಟಾ-1, ಐಪಿವಿ-1, 10ನೇ ವಾರದ ಮಗುವಿಗೆ ಓಪಿವಿ-2, ಪೆಂಟಾವಲೆಂಟ್‌-2ರೊಟಾ-2, 14ನೇ ವಾರದ ಮಗುವಿಗೆ ಓಪಿವಿ-3 ಪೆಂಟಾವಲೆಂಟ್‌-3 ರೊಟಾ-3 ಐಪಿವಿ-3, 9ನೇ ತಿಂಗಳ ಮಗುವಿಗೆ ಎಂ.ಆರ್‌-1, ಜೆಇ1, 16ರಿಂದ 23ನೇ ತಿಂಗಳ ಮಗುವಿಗೆ ಎಂ.ಆರ್‌.-2, ಜೆ.ಇ- 2, ಓಪಿವಿ ವರ್ಧಕ, ಡಿಟಿಪಿ ವರ್ಧಕ-1, 5ರಿಂದ 6ನೇ ವರ್ಷದ ಮಗುವಿಗೆ ಡಿಪಿಟಿ ವರ್ಧಕ-2, 10ಹಾಗೂ 16 ವರ್ಷದ ಮಗುವಿಗೆ ಟಿ.ಡಿ. ಲಸಿಕೆ ನೀಡಲಾಗುತ್ತದೆ.

Advertisement

ಭಯ ಪಡುವ ಅಗತ್ಯವಿಲ್ಲ
ಯುಕೆ, ಯುಎಸ್‌ಎಗಳಲ್ಲಿ ಮಕ್ಕಳಿಗೆ 2 ರಿಂದ 4 ತಿಂಗಳ ಅಂತರದಲ್ಲಿ ಲಸಿಕೆಯನ್ನು ನೀಡಲಾಗುತ್ತಿದೆ. ಇದರಿಂದಾಗಿ ಮಕ್ಕಳಲ್ಲಿ ಕಾಯಿಲೆಗಳನ್ನು ತಡೆಗಟ್ಟುವ ಸಾಮರ್ಥ್ಯ ಹೆಚ್ಚಾಗುತ್ತದೆ. ಮಕ್ಕಳು ಮನೆಯಿಂದ ಹೊರಗಡೆ ಬಂದು ಆಹಾರ ಸೇವಿಸಿದಾಗ ಹಾಗೂ ಜನಸಮೂಹವನ್ನು ಸಂಪರ್ಕಿಸಿದಾಗ ಅತಿಸಾರ, ದಡಾರ, ರುಬೆಲ್ಲಾ, ನಾಯಿ ಕೆಮ್ಮು ಸೇರಿದಂತೆ ಇತರೆ ಸೋಂಕುಗಳಿಗೆ ತುತ್ತಾಗುತ್ತಾರೆ. ಮನೆಯಲ್ಲಿ ಇರುವುದರಿಂದ ಯಾವುದೇ ಸಮಸ್ಯೆ ಇರದು. ಆದ್ದರಿಂದ ಹೆತ್ತವರು ಭಯ ಪಡುವ ಅಗತ್ಯವಿಲ್ಲ ಎಂದು ವೈದ್ಯರು ಹೇಳುತ್ತಾರೆ.

ಆತಂಕ ಬೇಡ
ಪೋಷಕರು ಹೆದರುವ ಅಗತ್ಯವಿಲ್ಲ. ಲಸಿಕೆಯ ಅವಧಿಯನ್ನು ಎರಡು ತಿಂಗಳ ಮಟ್ಟಿಗೆ ಮುಂದೆ ಹಾಕಬಹುದಾಗಿದೆ. ಲಾಕ್‌ಡೌನ್‌ ತೆರವಾದ ತ್‌ತ್‌ಕ್ಷಣ ಮಕ್ಕಳಿಗೆ ಲಸಿಕೆಯನ್ನು ಹಾಕಿಸಬಹುದಾಗಿದೆ.
-ಡಾ| ಮಹಾಬಲ ಕೆ.ಎಸ್‌.,ಮಕ್ಕಳ ವೈದ್ಯ, ಸಮುದಾಯ ಆರೋಗ್ಯ ಕೇಂದ್ರ,ಬ್ರಹ್ಮಾವರ.

ಲಸಿಕೆಗೂ ಕೋವಿಡ್ 19 ಭೀತಿ
ಎಲ್ಲೆಡೆ ಕೋವಿಡ್ 19 ಭೀತಿ ಇರುವುದರಿಂದ ಮಕ್ಕಳನ್ನು ಮನೆಯಿಂದ ಹೊರ ಕರೆ ತರದಂತೆ ಸರಕಾರ ಆದೇಶ ನೀಡಿದೆ. ಮಗು ಜನಿಸಿದ ತ್‌ತ್‌ಕ್ಷಣ ನೀಡಲಾಗುವ ಲಸಿಕೆಯನ್ನು ಮಾತ್ರ ನೀಡಲಾಗುತ್ತಿದೆ. ಉಳಿದಂತೆ ಲಸಿಕೆ ಹಾಕುವುದನ್ನು ಸರಕಾರ ತಡೆ ಹಿಡಿದಿದೆ.

Advertisement

Udayavani is now on Telegram. Click here to join our channel and stay updated with the latest news.

Next