Advertisement

ಭಾರತದಲ್ಲಿ ಬಡವರಿಗೂ ಕೈಗೆಟುಕುವ ದರದಲ್ಲಿ ವ್ಯಾಕ್ಸಿನ್ ಲಭ್ಯ: ಕೆ.ಎಸ್.ಈಶ್ವರಪ್ಪ

12:06 PM Jan 16, 2021 | Mithun PG |

ಶಿವಮೊಗ್ಗ: ಕೋವಿಡ್ ಗೆ ಇದೀಗ ದೇಸಿಯ ಲಸಿಕೆಯೇ ಬಂದಿದೆ. ಪ್ರತಿಯೊಬ್ಬರೂ ಲಸಿಕೆಯನ್ನು ಪಡೆಯಬೇಕು. ಲಸಿಕೆ ಪಡೆಯುವುದರಲ್ಲಿ ಯಾವುದೇ ಗೊಂದಲ ಬೇಡ ಎಂದು ಶಿವಮೊಗ್ಗದಲ್ಲಿ ಜಿಲ್ಲಾ ಉಸ್ತುವಾರಿ‌ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.

Advertisement

ಬಡವರಿಗೂ ಅನುಕೂಲವಾಗುವಂತೆ ಕೋವಿಡ್ ವ್ಯಾಕ್ಸಿನ್ ಬಂದಿದೆ.ಬೇರೆ ದೇಶಗಳಲ್ಲಿ ದುಬಾರಿ ದರ ನೀಡಿ ವ್ಯಾಕ್ಸಿನ್ ಪಡೆಯಬೇಕಾಗಿದೆ. ಆದರೆ ಭಾರತದಲ್ಲಿ ಬಡವರಿಗೂ ಕೈಗೆಟುಕುವ ದರದಲ್ಲಿ ವ್ಯಾಕ್ಸಿನ್ ಲಭ್ಯವಿದೆ ಎಂದರು.

ವಿದೇಶಗಳಲ್ಲಿ ಕೋವಿಡ್  ವ್ಯಾಕ್ಸಿನ್ ನನ್ನು ಮೈನಸ್ 80 ಡಿಗ್ರಿಯಲ್ಲಿ ಸಂಗ್ರಹಿಸಬೇಕಾಗಿದೆ. ಆದರೆ ಭಾರತದಲ್ಲಿ ಈ ಸಮಸ್ಯೆ ಇಲ್ಲ ಎಂದು ಈ ಸಂದರ್ಭದಲ್ಲಿ ಕೆ.ಎಸ್.ಈಶ್ವರಪ್ಪ   ತಿಳಿಸಿದರು.

ಇದನ್ನೂ ಓದಿ:  LIVE Update: ರಾಜ್ಯಾದ್ಯಂತ ಕೋವಿಡ್ ಲಸಿಕೆ ವಿತರಣೆ ಅಭಿಯಾನಕ್ಕೆ ಚಾಲನೆ

Advertisement

Udayavani is now on Telegram. Click here to join our channel and stay updated with the latest news.

Next