ಬೀದರ: ಜಿಲ್ಲೆಯಲ್ಲಿ ಅ.2ರಿಂದ ಮೊದಲನೇ ಸುತ್ತಿನ ಕಾಲುಬಾಯಿ ಜ್ವರ ರೋಗದ ಲಸಿಕಾ ಕಾರ್ಯಕ್ರಮ ಪ್ರಾರಂಭವಾಗಬೇಕಿತ್ತು. ಆದರೆ, ಜಿಲ್ಲೆಯಲ್ಲಿ ಜಾನುವಾರುಗಳಿಗೆ ಚರ್ಮ ಗಂಟು ರೋಗ ಇರುವ ಪ್ರಯುಕ್ತ ಅ.20ರಿಂದ ಕಾಲುಬಾಯಿ ಜ್ವರ ರೋಗದ ಲಸಿಕಾ ಕಾರ್ಯಕ್ರಮ ಪ್ರಾರಂಭಿಸಲಾಗತ್ತಿದೆ ಎಂದು ಜಿಲ್ಲಾಧಿಕಾರಿ ಆರ್. ರಾಮಚಂದ್ರನ್ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ರಾಷ್ಟ್ರೀಯ ಜಾನುವಾರು ರೋಗಗಳ ನಿಯಂತ್ರಣ ಕಾರ್ಯಕ್ರಮದಡಿ ಮೊದಲನೇ ಸುತ್ತಿನ ಕಾಲುಬಾಯಿಜ್ವರ ರೋಗ ಲಸಿಕಾ ಕಾರ್ಯಕ್ರಮದಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯ ರೈತರು ತಪ್ಪದೇ ತಮ್ಮ ಜಾನುವಾರುಗಳಿಗೆಲಸಿಕೆ ಹಾಕಿಸಿ ಯೋಜನೆಯ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ವಿನಂತಿಸಿದರು.
ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗ್ಯಾನೇಂದ್ರಕುಮಾರ ಗಂಗವಾರ ಮಾತನಾಡಿ, ಪಶು ಸಂಗೋಪನೆಯು ರೈತರ ಆರ್ಥಿಕ ಸ್ಥಿತಿ ಸುಧಾರಿಸಲು ಇರುವ ಉತ್ತಮವಾದ ಕಸುಬಾಗಿದೆ. ಈ ನಿಟ್ಟಿನಲ್ಲಿ ಪ್ರತಿತಾಲೂಕಿನಿಂದ 3 ರಿಂದ 4 ರೈತರನ್ನು ಆಯ್ಕೆ ಮಾಡಿ ಪಶು ಸಂಗೋಪನಾ ಉದ್ಯಮದಲ್ಲಿ ತೊಡಗಿಸಿಕೊಳ್ಳುವಂತೆಪ್ರೇರೇಪಿಸಿ ಅವರ ಆರ್ಥಿಕ ಸ್ಥಿತಿ ಉತ್ತಮಗೊಳಿಸಲು ಹಾಗೂ ಅವರ ಯಶೋಗಾಥೆಗಳನ್ನು ಮಾಧ್ಯಮದಲ್ಲಿ ಪ್ರಚುರಪಡಿಸಿ ಇತರ ರೈತರಿಗೆ ಮಾದರಿಯಾಗುವಂತೆ ಗುರಿ ನಿಗದಿಪಡಿಸಿಕೊಳ್ಳಲು ಸೂಚಿಸಿದರು.
ಪಶು ಪಾಲನಾ ಇಲಾಖೆ ಉಪ ನಿರ್ದೇಶಕ ಡಾ| ಮಲ್ಲಿಕಾರ್ಜುನ ಹಂಚನಾಳ ಮಾತನಾಡಿ, ಪ್ರಸಕ್ತ ಸುತ್ತಿನಲ್ಲಿ ಜಿಲ್ಲೆಯಲ್ಲಿ 2,99,144 ಜಾನುವಾರುಗಳಿಗೆ ಕಾಲು ಬಾಯಿ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ಈಗಾಗಲೇ ಜಿಲ್ಲೆಗೆ ಲಸಿಕೆ ಹಾಗೂಸಿರಿಂಜ್ ಮತ್ತು ಅವಶ್ಯಕ ಸಲಕರಣೆಗಳುಸರಬರಾಜಾಗಿದ್ದು, ಅ. 20 ರಿಂದಜಿಲ್ಲಾದ್ಯಂತ ಇಲಾಖೆಯ ಸಿಬ್ಬಂದಿಉಚಿತವಾಗಿ ರೈತರ ಜಾನುವಾರುಗಳಿಗೆ ಲಸಿಕೆ ಹಾಕಲಿದ್ದಾರೆ. ಕೋವಿಡ್ ಇರುವ ಹಿನ್ನೆಲೆಯಲ್ಲಿ ಲಸಿಕಾ ಸಿಬ್ಬಂದಿ ಸುರಕ್ಷತೆಗಾಗಿ ಮಾಸ್ಕ್, ಸ್ಯಾನಿಟೈಜರ್ ಹಾಗೂ ಫೇಸ್ ಶೀಲ್ಡ್‌ಗಳನ್ನು ಸರಬಾರಾಜು ಮಾಡಲಾಗುವುದು.ಲಸಿಕೆಯೊಂದಿಗೆ ಜಾನುವಾರುಗಳಿಗೆಕಿವಿ ಓಲೆ ಅಳವಡಿಸುವ ಕಾರ್ಯ ಕೂಡ ಚಾಲ್ತಿಯಲ್ಲಿದ್ದು, ರೈತರು ತಮ್ಮ ಜಾನುವಾರುಗಳಿಗೆ ತಪ್ಪದೇ ಕಿವಿ ಓಲೆ ಹಾಗೂ ಲಸಿಕೆ ಹಾಕಿಸಿಕೊಳ್ಳುವಂತೆ ವಿನಂತಿಸಿದರು.
ಜಿಲ್ಲಾ ಸಮನ್ವಯ ಅಧಿಕಾರಿ ಡಾ| ರವೀಂದ್ರಕುಮಾರ ಭೂರೆ, ಡಾ| ಗೌತಮ ಅರಳಿ ಸೇರಿದಂತೆ ಇಲಾಖೆ ಅಧಿಕಾರಿಗಳು ಹಾಗೂ ಜಿಲ್ಲಾ ನಿರ್ವಹಣಾ ಸಮಿತಿ ಸದಸ್ಯರು ಹಾಜರಿದ್ದರು.¬