Advertisement
ನಗರ ವ್ಯಾಪ್ತಿಯಲ್ಲಿ ಎರಡೂ ಡೋಸ್ ಲಸಿಕೆಗಳ ನಡುವೆ ಸರ್ಕಾರ ಮತ್ತು ತಜ್ಞರು ನಿಗದಿಪಡಿಸಿರುವ 84 ದಿನಗಳ ಅವಧಿ ಮೀರಿದವರು ಇನ್ನೂ ಸುಮಾರು ಹತ್ತು ಲಕ್ಷ ಜನರಿದ್ದು, ಇವರಲ್ಲಿ ಬಹುತೇಕರು ಬಿಬಿ ಎಂಪಿ ಕೈಗೆ ಸಿಗುತ್ತಲೇ ಇಲ್ಲ. ಪಾಲಿಕೆ ಆರೋಗ್ಯ ಇಲಾಖೆ ಸಿಬ್ಬಂದಿ ನಿರಂತರವಾಗಿ ಕರೆ ಮಾಡಿ ಆಮಂ ತ್ರಣ ನೀಡಿದ್ದಾಯಿತು.
Related Articles
Advertisement
ಸಿಕ್ಕವರೂ ನಾಳೆ ಬರುತ್ತೇವೆ ಎಂದು ಹೇಳಿಹೋಗುತ್ತಾರೆ. ಈ ಕಣ್ಣಾಮುಚ್ಚಾಲೆ ಆಟ ಬಿಬಿಎಂಪಿ ನಿದ್ದೆಗೆಡಿಸಿದೆ’ ಎಂದು ಹೆಸರು ಹೇಳ ಲಿಚ್ಛಿಸದ ಬಿಬಿಎಂಪಿ ಆರೋಗ್ಯ ವಿಭಾಗದ ಸಿಬ್ಬಂದಿ ಯೊಬ್ಬರು ಅಲವತ್ತುಕೊಂಡರು. “ಇತ್ತೀಚೆಗೆ ನಡೆದ ಒಮಿಕ್ರಾನ್ ಪ್ರಕರಣಗಳ ಪತ್ತೆ ಹಾಗೂ ಸೋಂಕು ಪ್ರಕರಣ ಹೆಚ್ಚಳವಾಗಿದ್ದರಿಂದ ಲಸಿಕೆ ಪ್ರಮಾಣ ದಲ್ಲಿ ಏರಿಕೆ ಕಂಡುಬಂದಿದೆ. ನಿತ್ಯ ಸರಾಸರಿ 35 ಸಾವಿರ ಲಸಿಕೆ ಹಾಕಲಾಗುತ್ತಿತ್ತು.
ಇದನ್ನೂ ಓದಿ;- ಶ್ರೀರಂಗಪಟ್ಟಣ: ಗೂಡ್ಸ್ ವಾಹನ ಚಾಲಕನ ಬರ್ಬರ ಹತ್ಯೆ
ಈಗ ಒಂದು ವಾರ ದಿಂದ ಈಚೆಗೆ 65-70 ಸಾವಿ ರಕ್ಕೆ ತಲುಪಿದೆ. ಆದರೆ, ಇನ್ನೂ 30-35 ಲಕ್ಷ ಮಂದಿ ಲಸಿಕೆಯಿಂದ ಹೊರಗುಳಿದಿದ್ದು, ಪ್ರತಿದಿನ ಕನಿಷ್ಠ ಒಂದು ಲಕ್ಷ ಲಸಿಕೆ ನೀಡಿದರೂ, 2ನೇ ಡೋಸ್ ಶೇಕಡ ನೂರರ ಗುರಿ ತಲುಪಲು ಇನ್ನೂ ಒಂದೂವರೆ ತಿಂಗಳು ಹಿಡಿಯು ತ್ತದೆ’ ಎಂದು ಹೇಳಿದರು.
“ಅವಧಿ ಮೀರಿದರೂ ಲಸಿಕೆ ಪಡೆಯದಿರುವುದು ತಪ್ಪು’ ಒಟ್ಟಾರೆ ಲಸಿಕೆ ಪಡೆದ 1.43 ಕೋಟಿ ಜನರಲ್ಲಿ ಕೊವ್ಯಾಕ್ಸಿನ್ ಪಡೆದವರು 19.47 ಲಕ್ಷ ಇದ್ದರೆ, ಕೊವಿಶೀಲ್ಡ್ ಪಡೆದವರು 1.22 ಕೋಟಿ ಹಾಗೂ ಸು#ಟ್ನಿಕ್ ಲಸಿಕೆ ಪೆಡದವರು 67,809. ಕೊವ್ಯಾಕ್ಸಿನ್ ಎರಡನೇ ಡೋಸ್‌ಗೆ 28 ದಿನ ಹಾಗೂ ಕೊವಿಶೀಲ್ಡ್‌ಗೆ 84 ದಿನಗಳು ಅಂತರ ಇರಬೇಕು ಎಂದು ಸರ್ಕಾರ ಸೂಚಿಸಿದೆ. ಅವಧಿ ಮೀರಿದರೆ ಲಸಿಕೆ ಸಾಮರ್ಥ್ಯ ಕಡಿಮೆ ಆಗುತ್ತದೆಯೇ ಎಂಬುದರ ಬಗ್ಗೆ ಯಾವುದೇ ಅಧ್ಯಯನ ಆಗಿಲ್ಲ. ಹಾಗಂತ, ಲಸಿಕೆಯಿಂದ ದೂರ ಉಳಿಯುವುದು ಕೂಡ ತಪ್ಪು ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.
ನಿಗದಿಪಡಿಸಿದ ಅವಧಿಯಲ್ಲಿ ಲಸಿಕೆ ಪಡೆಯಿರಿ
“ಮೊದಲ ಮತ್ತು ಎರಡನೇ ಡೋಸ್ ನಡುವೆ ಗರಿಷ್ಠ ಎಷ್ಟು ವಿಳಂಬವಾಗಬಹುದು? ಗರಿಷ್ಠ ವಿಳಂಬದಿಂದ ಆ ಲಸಿಕೆ ಸಾಮರ್ಥ್ಯ ಕುಗ್ಗುತ್ತದೆಯೇ ಅಥವಾ ಇಲ್ಲವೇ? ಇದರ ಬಗ್ಗೆ ನಿರ್ದಿಷ್ಟವಾಗಿ ಹೇಳಲಾಗದು. ಯಾಕೆಂದರೆ, ಈ ನಿಟ್ಟಿನಲ್ಲಿ ಅಧ್ಯಯನಗಳು ನಡೆದಿಲ್ಲ. ಆದರೆ, ಕೆಲವು ಸಲ ಮೊದಲ ಡೋಸ್ ತೆಗೆದುಕೊಂಡ ವ್ಯಕ್ತಿಯು ಎರಡನೇ ಡೋಸ್ ಸಮಯದಲ್ಲಿ ಶೀತ ಅಥವಾ ಜ್ವರ ಮತ್ತಿತರ ಕಾರಣಗಳಿಗೆ ನಾವೇ (ವೈದ್ಯರು) ತಿಂಗಳ ಮಟ್ಟಿಗೆ ಮುಂದೂಡಿರುತ್ತೇವೆ. ಅದೇನೇ ಇರಲಿ, ನಿಗದಿಪಡಿಸಿದ ಅವಧಿಯಲ್ಲಿ ಜನ ಲಸಿಕೆ ಪಡೆಯುವುದು ಸೂಕ್ತ’ ಎಂದು ಮಣಿಪಾಲ್ ಆಸ್ಪತ್ರೆಗಳ ಅಧ್ಯಕ್ಷ ಡಾ.ಸುದರ್ಶನ್ ಬಲ್ಲಾಳ್ ತಿಳಿಸುತ್ತಾರೆ.
– ವಿಜಯಕುಮಾರ್ ಚಂದರಗಿ