ಪಣಜಿ : ಕೋವಿಡ್-19 ಸೋಂಕು ಹರಡುವುದನ್ನು ಸಂಪೂರ್ಣ ನಿಯಂತ್ರಿಸಲು ವ್ಯಾಕ್ಸಿನೇಶನ್ ಏಕೈಕ ಮಾರ್ಗವಾಗಿದೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ತಿಳಿಸಿದ್ದಾರೆ.
ಜುಲೈ 30 ರ ಒಳಗೆ ರಾಜ್ಯಾದ್ಯಂತ ಮೊದಲ ಡೋಸ್ ನನ್ನು ಶೇಕಡಾ. 100 ರಷ್ಟು ಪೂರ್ಣಗೊಳಿಸುವುದು ನಮ್ಮ ಸರ್ಕಾರದ ಮುಖ್ಯ ಗುರಿಯಾಗಿದೆ. ಆ ಕುರಿತಾಗಿ ಸರ್ಕಾರ ಕಾರ್ಯ ನಿರ್ವಹಿಸುತ್ತದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ : ಒಪ್ಪೋ ಎ54: ಒಪ್ಪೋ ಬಿಡುಗಡೆ ಮಾಡಿದ ಹೊಸ ಮೊಬೈಲ್ ಹೇಗಿದೆ? ದರ ಎಷ್ಟು?
ಪಣಜಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜುಲೈ 30 ರ ಒಳಗೆ ರಾಜ್ಯದಲ್ಲಿ ಶೇ 100 ರಷ್ಟು ವ್ಯಾಕ್ಸಿನೇಶನ್ ಪೂರ್ಣಗೊಳಿಸುವುದು ನಮ್ಮ ಗುರಿಯಾಗಿದೆ. ಕೋವಿಡ್ ಸೋಂಕನ್ನು ನಿವಾರಣೆ ಮಾಡಲು ವ್ಯಾಕ್ಸಿನೇಶನ್ ಒಂದೇ ಅಸ್ತ್ರವಾಗಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇನ್ನು, ಈಗಾಗಲೇ ರಾಜ್ಯಾದ್ಯಂತ ಪಂಚಾಯತ್ ಹಾಗೂ ಪುರಸಭೆಗಳಲ್ಲಿ ಲಸಿಕಾ ಉತ್ಸವ 3.0 ಆರಂಭಿಸಲಾಗಿದೆ. ರಾಜ್ಯದ ಜನತೆ ಎಲ್ಲರೂ ಕಡ್ಡಾಯವಾಗಿ ತಮ್ಮ ಹತ್ತಿರದ ಲಸಿಕಾ ಕೇಂದ್ರಕ್ಕೆ ತೆರಳಿ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಅವರು ರಾಜ್ಯದ ನಾಗರಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ : ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ ಅವರಿಂದ 500 ಕುಟುಂಬಗಳಿಗೆ ಪಡಿತರ ಕಿಟ್ ವಿತರಣೆ