ಬೆಂಗಳೂರು: ಮೂರನೇ ಹಂತದ ವ್ಯಾಕ್ಸಿನೇಷನ್ ಆರಂಭವಾಗಲಿದೆ. ಅಕ್ಟೋಬರ್ ತಿಂಗಳಲ್ಲಿ ಮಕ್ಕಳಿಗೂ ಲಸಿಕೆ ಬರಲಿದೆ. ಕೇಂದ್ರ ದರ ನಿಗದಿಪಡಿಸಲಿದೆ. ದರ ನಿಗದಿ ಬಳಿಕ ಅಂತಿಮವಾಗಿ ತೀರ್ಮಾನವಾಗಲಿದೆ ಎಂದು ಆರೋಗ್ಯ ಸಚಿವ ಸುಧಾಕರ್ ಹೇಳಿದರು.
ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ನನಗೆ ಅಚ್ಚರಿ ಇಲ್ಲ, ಮಕ್ಕಳಿಗೆ ಲಸಿಕೆ ನೀಡುವ ಬಗ್ಗೆ ಕೇಂದ್ರ ಯಾವಾಗ ಬೇಕಾದರೂ ಘೋಷಣೆ ಮಾಡಬಹುದು ಎಂದರು.
ಮಾರ್ಗಸೂಚಿ ಅನ್ವಯ ಈಗ ಶಾಲೆ ಆರಂಭವಾಗುತ್ತಿದೆ. ಶೇ.10 ರಷ್ಟು ಮಕ್ಕಳಿಗೆ ಟೆಸ್ಟ್ ಮಾಡಬೇಕೆಂದು ಸೂಚಿಸಿದ್ದೇನೆ. ಶಾಲೆಗಳಲ್ಲಿ ಹೋದಾಗ, ಬೇರೆ ಸಂದರ್ಭದಲ್ಲಿ ಎಚ್ಚರ ಅಗತ್ಯ ಎಂದರು.
ಇದನ್ನೂ ಓದಿ: ಐಸ್ ಕ್ರೀಮ್ ಮಾದರಿಯ ಇಡ್ಲಿ!: ಇದ್ಯಾವುದು ಹೊಸ ಖಾದ್ಯ
ಸಿನಿಮಾ ಮಂದಿರಗಳಿಗೆ 100ರಷ್ಟು ಅವಕಾಶ ನೀಡಲಾಗಿದೆ. ಅದನ್ನು ಹೊರತುಪಡಿಸಿದರೆ ಕೆಲವು ನಿರ್ಬಂಧ ಮಾತ್ರ ಇದೆ. ಎರಡು ಡೋಸ್ ಸಂಪೂರ್ಣವಾಗಿ ಕೊಡುವವರೆಗೂ ಯಾವುದೇ ರೀತಿಯ ಸಮಾರಂಭ ಮಾಡಲು ಅವಕಾಶ ಇಲ್ಲ. ಈಜುಕೊಳಕ್ಕೂ ಕೂಡ ಸದ್ಯ ಅನುಮತಿ ಕೊಡುವುದಿಲ್ಲ ಎಂದು ಸಚಿವರು ಹೇಳಿದರು.
ಕೇರಳ ಮಹಾರಾಷ್ಟ್ರ ರಾಜ್ಯದಲ್ಲಿ ಹೆಚ್ಚು ಸೋಂಕಿದೆ. ಹಾಗಾಗಿ ಎರಡು ಗಡಿಯಲ್ಲಿ ಆರ್ ಟಿಪಿಸಿಆರ್ ಟೆಸ್ಟ್ ತರುವುದು ಕಡ್ಡಾಯ ಮಾಡಲಾಗಿದೆ. ರಾಜ್ಯ ಪ್ರವೇಶಿಸುವ 48 ಗಂಟೆ ಮೊದಲು ತಪಾಸಣೆ ಮಾಡಿಸಿರಬೇಕು ಎಂದು ಸಚಿವ ಸುಧಾಕರ್ ಹೇಳಿದರು.