Advertisement
ಕೋವ್ಯಾಕ್ಸಿನ್ ಲಸಿಕೆ ನೋಂದಣಿಗೆ ವಿದ್ಯಾರ್ಥಿಗಳಿಗೆ ಪೋಷಕರ ಮೊಬೈಲ್ ನಂಬರ್ ಬಳಿಸಿಕೊಂಡು ಅವರ ಅಕೌಂಟ್ ಮೂಲಕ ವಿದ್ಯಾರ್ಥಿಗಳ ನೊಂದಣಿ ಮಾಡಲಾಗುತ್ತಿದೆ. ಈ ವ್ಯವಸ್ಥೆ ಸಾಧ್ಯವಾಗದ ಕಡೆಯಲ್ಲಿ ಶಾಲೆ ಮುಖ್ಯೋಪಾಧ್ಯಾಯರ ದೂರವಾಣಿಯ ಮೂಲಕ ನೋಂದಣಿ ಮಾಡಿಕೊಳ್ಳಲಾಗಿದೆ. ಶಾಲೆಯ ಗುರುತಿನ ಚೀಟಿ ಹಾಗೂ ಆಧಾರ್ ಕಾರ್ಡ್ ಬಳಸಿಕೊಂಡು ಫೋಟೋ ಐಡಿಯನ್ನು ಕೋವಿನ್ ಪೋರ್ಟಲ್ ಮೂಲಕ ದಾಖಲಿಸಲಾಗಿದೆ.
Related Articles
Advertisement
ವಾಹನ, ತಿಂಡಿ ವ್ಯವಸ್ಥೆರಾಜ್ಯದಲ್ಲಿ ಕೆಲ ಜಿಲ್ಲೆಗಳಲ್ಲಿ ಶಿಕ್ಷಣ ಇಲಾಖೆ, ದಾನಿ, ಶಾಲೆಗಳ ಸಹಯೋಗದಲ್ಲಿ ಮಕ್ಕಳಿಗೆ ಉಪಹಾರ, ಊಟದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಲಸಿಕೀಕರಣಕ್ಕೆ ಅಗತ್ಯವಿರುವ ವಾಹನ ವ್ಯವಸ್ಥೆಯನ್ನು ಶಾಲೆಗಳಲ್ಲಿ ಮಾಡಿಕೊಳ್ಳಲಾಗಿದೆ. ರಾಜ್ಯದಲ್ಲಿ 15-18 ವರ್ಷದೊಳಗಿನ ಅತ್ಯಧಿಕ ವಿದ್ಯಾರ್ಥಿಗಳನ್ನು ಹೊಂದಿರುವ ಪಟ್ಟಿಯಲ್ಲಿ ಬಿಬಿಎಂಪಿ ಮೊದಲ ಸ್ಥಾನದಲ್ಲಿದ್ದು 4.42 ಲಕ್ಷ ವಿದ್ಯಾರ್ಥಿಗಳನ್ನು ಹೊಂದಿದೆ. ಬೆಳಗಾವಿ 2.47 ಲಕ್ಷ, ಬಳ್ಳಾರಿ 1.64 ಲಕ್ಷ, ಕಲಬುರಗಿ 1.59 ಲಕ್ಷ, ಮೈಸೂರು 1.47 ಲಕ್ಷ, ವಿಜಯಪುರ 1.23 ಲಕ್ಷ, ತುಮಕೂರು 1.22 ಲಕ್ಷ, ರಾಯಚೂರು 1.14, ಬೀದರ್ 1.5 ಲಕ್ಷ, ದ.ಕ. 1.1 ಲಕ್ಷ, ಬಾಗಲಕೋಟೆಯಲ್ಲಿ 1 ಲಕ್ಷ ವಿದ್ಯಾರ್ಥಿಗಳಿಗೆ ಲಸಿಕೆ ಹಾಕಲು ಎರಡೂ ಇಲಾಖೆ ಸಜ್ಜಾಗಿದೆ. ದಾವಣಗೆರೆ, ಉಡುಪಿ, ಉತ್ತರ ಕನ್ನಡ, ಯಾದಗಿರಿ ಸೇರಿದಂತೆ ಉಳಿದ ಜಿಲ್ಲೆಯಲ್ಲಿ 40,000ದಿಂದ 88,000 ಫಲಾನುಭವಿಗಳಿದ್ದಾರೆ. 2007ರಲ್ಲಿ ಜನಿಸಿದ 15 ವರ್ಷ ಮೇಲ್ಪಟ್ಟ ಮಕ್ಕಳು ಕೋವ್ಯಾಕ್ಸಿನ್ ಲಸಿಕೆ ಪಡೆಯುವ ಅರ್ಹತೆಯನ್ನು ಪಡೆದುಕೊಂಡಿದ್ದು ಈಗಾಗಲೇ ಶಿಕ್ಷಣ ಹಾಗೂ ಆರೋಗ್ಯ ಇಲಾಖೆ ಲಸಿಕಾಕರಣಕ್ಕೆ ಮುನ್ನ ಮಕ್ಕಳ ಪೋಷಕರೊಂದಿಗೆ ವಿಶೇಷ ಜಾಗೃತಿ ಸಭೆಯನ್ನು ಏರ್ಪಡಿಸಿ, ಲಸಿಕೀಕರಣದ ಮಹತ್ವ ಹಾಗೂ ಆವಶ್ಯಕತೆ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಗಿದೆ.