ಹುಣಸೂರು: ಸಾರ್ವಜನಿಕ ಶಿಕ್ಷಣ ಇಲಾಖೆವತಿಯಿಂದ ನಗರದ ಗುರುಭವನದಲ್ಲಿ ಶಿಕ್ಷಕರಿಗೆ ಲಸಿಕಾ ಅಭಿಯಾನ ಶನಿವಾರ ಆಯೋಜಿಸಲಾಗಿತ್ತು.
ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ್ ರವರು ಚಾಲನೆ ನೀಡಿದ ನಂತರ ಹೊರಟು ಹೋಗುತ್ತಿದ್ದಂತೆ ನನಗೆ ಮೊದಲು ಲಸಿಕೆ ನೀಡಿ ಎಂದು ದುಂಬಾಲು ಬೀಳುತ್ತಿದ್ದುದ್ದು ಕಂಡು ಬಂತು.ಇಲ್ಲಿ ಯಾವುದೇ ಸಾಮಾಜಿಕ ಅಂತರವೂ ಇಲ್ಲದೆ . ಆರೋಗ್ಯ ಇಲಾಖೆ ಸಿಬ್ಬಂದಿಗಳ ಎಚ್ಚರಿಕೆಯೂ ಇಲ್ಲದೆ . ಮುಗಿ ಬೀಳುತ್ತಿದ್ದುದ್ದನ್ನು ಕಂಡ ಸಾರ್ವಜನಿಕರೇ ವಿರೋಧ ವ್ಯಕ್ತಪಡಿಸಿದರು.
ಮಕ್ಕಳಿಗೆ ತಿಳಿ ಹೇಳಲು, ಅರಿವು ಮೂಡಿಸಲು ಶಿಕ್ಷಕರನ್ನು ಎಲ್ಲಾ ಸಮಯದಲ್ಲೂ ಶಿಕ್ಷಕರ ಸೇವೆಯನ್ನು ಬಳಸಿಕೊಳ್ಳಲಾಗುತ್ತಿದೆ. ಆದರೆ ಲಸಿಕೆ ಪಡೆಯಲು ಮುಗಿ ಬೀಳುತ್ತಿದ್ದುದ್ದು ನೋಡಿದವರಿಗೆ ಎಷ್ಟರ ಮಟ್ಟಿಗೆ ಸೇವೆ ನೀಡುವರೆಂಬುದೇ ಸಾರ್ವಜನಿಕ ವಲಯದಲ್ಲಿ ಚರ್ಚಾಗ್ರಾಸವಾಗಿದೆ.
ಸಮರ್ಥನೆ: ತಾಲೂಕಿನಲ್ಲಿ 32 ಇಲಾಖೆಗಳು ಕಾರ್ಯನಿರ್ವಹಿಸುತ್ತಿದ್ದು. ಎಲ್ಲರೂ ಕೋವಿಡ್ ಟೆಸ್ಟ್ ಮಾಡಿಸಿಕೊಂಡಿದ್ದಾರೆ. ಯಾರಿಗೂ ಸೊಂಕು ಹರಡುವುದಿಲ್ಲ. ಆತಂಕಬೇಡ ಲಸಿಕಾ ಅಭಿಯಾನಕ್ಕೆ ಸಹಕಾರ ನೀಡುವಂತೆ ಸಾಮಾಜಿಕ ಅಂತರ ಕಾಪಾಡದ ಬಗ್ಗೆ ಆಕ್ಷೇಪಕ್ಕೆ ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಗೋವಿಂದೇಗೌಡ ಸಮರ್ಥಿಸಿಕೊಂಡರು. ತಮ್ಮ ತಪ್ಪನ ಅರಿವಾಗಿ ಕೊನೆಗೆ ತಾವೇ ಮುಂದೆ ಎಲ್ಲರೂ ಸಾಮಾಜಿಕ ಅಂತರ ಕಾಪಾಡಲು ಮನವಿ ಮಾಡಿದರು.