Advertisement

ಶಾಲೆಗಳಿಗೆ ರಜೆ: ಜಿಲ್ಲಾಧಿಕಾರಿ ಜತೆ ಚರ್ಚೆ

09:30 PM Jan 13, 2022 | Team Udayavani |

ಪಾಂಡವಪುರ: ಇತ್ತೀಚಿನ ದಿನಗಳಲ್ಲಿ ಶಾಲಾ ಮಕ್ಕಳಿಗೆ ಹೆಚ್ಚು ಕೋವಿಡ್‌ ತಗುಲುತ್ತಿರುವ ಹಿನ್ನೆಲೆಯಲ್ಲಿ ಶಾಲೆಗಳಿಗೆ ರಜೆ ಘೋಷಿಸುವ ಸಂಬಂಧ ಜಿಲ್ಲಾಧಿ ಕಾರಿಗಳೊಂದಿಗೆ ಚರ್ಚಿಸಲಾಗಿದೆ ಎಂದು ಎಂದು ಶಾಸಕ ಸಿ.ಎಸ್‌.ಪುಟ್ಟ ರಾಜು ತಿಳಿಸಿದರು. ಪಟ್ಟಣದ ತಾಪಂ ಸಭಾಂಗಣದಲ್ಲಿ ಕೋವಿಡ್‌ ಸಂಬಂಧ ಅಧಿಕಾರಿ ಗಳೊಂ ದಿಗೆ ಚರ್ಚಿಸಿ, ನಂತರ ಸುದ್ದಿಗಾರ ರೊಂದಿಗೆ ಅವರು ಮಾತನಾಡಿದರು.

Advertisement

ತಾಲೂಕಿನಲ್ಲಿ ಈವರೆಗೆ ಮಕ್ಕಳು ಸೇರಿದಂತೆ 187 ಮಂದಿಗೆ ಕೋವಿಡ್‌ ಸೋಂಕು ತಗುಲಿದ್ದು, ಕೋವಿಡ್‌ ಕೇರ್‌ ಸೆಂಟರ್‌ನಲ್ಲಿ 63, ಸಾರ್ವಜನಿಕ ಆಸ್ಪತ್ರೆ ಯಲ್ಲಿ 4, ಉಳಿದ ಮಂದಿ ಹೋಂ ಐಸೋಲೇಷನ್‌ನಲ್ಲಿ ಚಿಕಿತ್ಸೆ ಪಡೆದು ಕೊಳ್ಳುತ್ತಿದ್ದಾರೆ. ಕೋವಿಡ್‌ ಸೋಂಕು ಅತಿ ವೇಗದಲ್ಲಿ ಹರಡುತ್ತಿದೆ. ಅದೃಷ್ಟವ ಶಾತ್‌ ಈವರೆಗೂ ಯಾವುದೇ ಆಕ್ಸಿಜನ್‌ ಸಮಸ್ಯೆ ಉಂಟಾಗಿಲ್ಲ, ಎರಡನೇ ಅಲೆ ಯಷ್ಟು ಪರಿಣಾಮವನ್ನು ಸಹ ಬೀರುತ್ತಿಲ್ಲ ಎಂದು ಹೇಳಿದರು. ನಾರಾಯಣಪುರ ಸರ್ಕಾರಿ ಶಾಲೆಗಳಲ್ಲಿ 9 ಮಕ್ಕಳು, ಇಬ್ಬರು ಶಿಕ್ಷಕರಿಗೆ ಸೋಂಕು ಕಾಣಿಸಿಕೊಂಡಿದ್ದು, ಶಾಲೆಗೆ ರಜೆ ಘೋಷಿಸಲಾಗಿದೆ. ಎಸ್‌ಟಿಜಿ ಶಾಲೆಯ ಮಕ್ಕಳಿಗೂ ಕೋವಿಡ್‌ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕಾಲೇಜಿಗೂ ರಜೆ ಘೋಷಣೆ ಮಾಡಲಾಗಿದೆ ಎಂದು ತಿಳಿಸಿದರು. ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿರು ವುದರಿಂದ ಜಿಲ್ಲಾಧಿಕಾರಿಗಳು ಹಲವು ಮಾರ್ಗಸೂಚಿಗಳನ್ನು ಜಾರಿಗೊಳಿಸಿ ದ್ದಾರೆ. ಹಬ್ಬ, ಜಾತ್ರಾ ಮಹೋತ್ಸವ, ಶುಭಾ ಸಮಾರಂಭಗಳಿಗೆ ಬ್ರೇಕ್‌ ಹಾಕಿ ದ್ದಾರೆ.

ಹಾಗೆಯೇ ಸಂಕ್ರಾಂತಿ ಹಬ್ಬವನ್ನು ಕೋವಿಡ್‌ ಇರುವುದರಿಂದ ಸರಳವಾಗಿ ಆಚರಣೆ ಮಾಡಬೇಕು. ಹಬ್ಬದ ಅಂಗ ವಾಗಿ ಹಸು, ದನ ಸೇರಿದಂತೆ ಜಾನು ವಾರುಗಳನ್ನು ಬೆಂಕಿಯಲ್ಲಿ ಕಿಚ್ಚು ಹಾಯಿಸುವುದನ್ನು ಜಿಲ್ಲಾಡಳಿತ ನಿಷೇಧಿಸಿದೆ ಎಂದು ಪೊಲೀಸ್‌ ಸರ್ಕಲ್‌ ಇನ್ಸ್‌ಪೆಕ್ಟರ್‌ ಕೆ.ಪ್ರಭಾಕರ್‌ ತಿಳಿಸಿದರು. ಸಭೆಯಲ್ಲಿ ತಾಪಂ ಇಒ ಆರ್‌ .ಪಿ.ಮಹೇಶ್‌, ಬಿಇಒ ಲೋಕೇಶ್‌, ಸರ್ಕಲ್‌ ಇನ್ಸ್‌ಪೆಕ್ಟರ್‌ ಕೆ.ಪ್ರಭಾಕರ್‌, ಟಿಎಚ್‌ಒ ಡಾ.ಸಿ.ಎ.ಅರವಿಂದ್‌, ಸಾರ್ವಜನಿಕ ಆಸ್ಪತ್ರೆಯ ಮುಖ್ಯವೈದ್ಯಾಧಿಕಾರಿ ಡಾ.ಎಚ್‌. ಕುಮಾರ್‌ ಇದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next