Advertisement
ಈಜು ತರುವ ಅಪಾಯಗ್ರಾಮೀಣ ಪ್ರದೇಶದ ಅಪ್ರಾಪ್ತ ಮಕ್ಕಳು, ಯುವಕರು ಈಜಲು ಹಾಗೂ ಈಜು ಕಲಿಯಲು ನದಿಗಳತ್ತ ತೆರಳುತ್ತಿದ್ದು, ಸೂಕ್ತ ರಕ್ಷಣಾ ವ್ಯವಸ್ಥೆಯಿಲ್ಲದೆ ಈಜು ಬಾರದವರು ಜತೆಗಾರರಿಂದ ಪ್ರೇರಣೆಗೊಂಡು ನೀರಿಗೆ ಧುಮುಕುತ್ತಿದ್ದು, ಅಪಾಯವನ್ನು ಮೈಮೇಲೆ ಎಳೆದುಕೊಳ್ಳುವ ಸಾಧ್ಯತೆ ಇದೆ.
ಈ ಸಮಯದಲ್ಲಿ ನದಿಗಳಲ್ಲಿ ನೀರಿರುವು ದರಿಂದ ಹೆಚ್ಚಿನ ಜನರು ನದಿ ಕಡೆಗಳಿಗೆ ಬರುತ್ತಿದ್ದಾರೆ. ನದಿಯ ಮಧ್ಯದಲ್ಲಿ ಕೆಸರು ಗುಂಡಿ ಸಿಗುತ್ತಿವೆ. ಹೀಗಾಗಿ ಈಜು ತಿಳಿದವರೂ ಕೆಸರಿನಲ್ಲಿ ಕಾಲು ಸಿಕ್ಕಿಸಿಕೊಂಡು ಅಪಾಯ ಎದುರಿಸುತ್ತಿದ್ದಾರೆ. ಕೆಲವೆಡೆ ನದಿಯ ಆಳವೂ ಹೆಚ್ಚಾಗಿದ್ದು, ಅದು ತಿಳಿ ಯದೇ ಆಪಾಯ ಸಂಭವಿಸುವ ಸಾಧ್ಯತೆ ಹೆಚ್ಚಿದೆ. ನೀರಿನಾಟದಿಂದ ಹಲವೆಡೆ ಜೀವಕ್ಕೆ ಅಪಾಯವಾದ ಘಟನೆ ನಡೆದಿದ್ದು, ನದಿಗಳಿಗೆ ಈಜಲು ತೆರಳುವವರು ಜಾಗ್ರತೆ ವಹಿಸಬೇಕಿದೆ. ಪೋಷಕರು ಮಕ್ಕಳ ನೀರಿನಾಟದ ಬಗ್ಗೆ ಸಾಧ್ಯವಾದಷ್ಟು ನಿಗಾ ವಹಿಸಬೇಕಿದ್ದು, ಅನಾಹುತ ಸಂಭವಿಸುವುದಕ್ಕೂ ಮೊದಲೇ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕಿದೆ.
Related Articles
– ಉತ್ತಮ ಈಜು ಬಲ್ಲವರನ್ನು ಮೊದಲು ನೀರಿಗಿಳಿಸಿ ಆಳ ತಿಳಿಯಿರಿ.
– ಈಜಲು ತೆರಳುವ ಮುನ್ನ ಮನೆಯವರಿಗೆ ಮಾಹಿತಿ ನೀಡಿ.
– ಮಕ್ಕಳನ್ನು ನದಿ ತಟಕ್ಕೆ ಕರೆದೊಯ್ಯುವ ವೇಳೆ ಜಾಗ್ರತೆ ವಹಿಸಿ.
– ಈಜು ಬಾರದವರನ್ನು ಬಲವಂತವಾಗಿ ನೀರಿಗೆ ಇಳಿಸದಿರಿ.
– ಈಜು ಕಲಿಸುವಾಗ ಅವರ ಎತ್ತರಕ್ಕಿಂತ ಆಳಕ್ಕೆ ಕರೆದೊಯ್ಯದಿರಿ.
– ಪೋಷಕರ ಕಣ್ಣು ತಪ್ಪಿಸಿ ನೀರಿಗೆ ಮಕ್ಕಳು ಇಳಿಯಬಾರದು.
Advertisement
– ಪ್ರವೀಣ್ ಚೆನ್ನಾವರ