ಬೆಂಗಳೂರು: ರಜನಿಕಾಂತ್ ಅಭಿನಯದ ಕಾಲಾ ಚಿತ್ರದ ಬಿಡುಗಡೆ ವಿರೋಧಿಸಿ ಗುರುವಾರ ಚಿತ್ರ ಮಂದಿರಗಳು ಮತ್ತು ಮಾಲ್‌ಗಳ ಎದುರು ಪ್ರತಿಭಟನೆಗಿಳಿದಿದ್ದ ಕನ್ನಡ ಪರ ಹೋರಾಟಗಾರರನ್ನು ಪೊಲೀಸರು ಬಂಧಿಸಿದ್ದಾರೆ.
ಓರಯಾನ್ ಮಾಲ್ ಎದುರು ಚಿತ್ರದ ವಿರುದ್ಧ ಘೋಷಣೆ ಕೂಗುತ್ತಿದ್ದ ವಾಟಾಳ್ ನಾಗರಾಜ್ ಕರವೇ ಪ್ರವೀಣ್ ಶೆಟ್ಟಿ ಸೇರಿ 30 ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದರು.
ಕಿಡಿ ಕಾರಿದ ವಾಟಾಳ್
ಸುದ್ದಿಗಾರರೊಂದಿಗೆ ಮಾತನಾಡಿದ ವಾಟಾಳ್ ನಾಗರಾಜ್ ‘ಚಿತ್ರ ನಿಂತೋಗಿದೆ, ನಮ್ಮನ್ನು ಬಂಧನ ಮಾಡಿ ಆ ಮೇಲೆ ಚಿತ್ರ ಪ್ರದರ್ಶನ ಮಾಡಿದರೆ ಕರ್ನಾಟಕ ಬಂದ್ ಮಾಡುತ್ತೇವೆ’ ಎಂದು ಎಚ್ಚರಿಕೆ ನೀಡಿದ್ದಾರೆ.
‘ಕರ್ನಾಟಕದ ಪೊಲೀಸರು ಇರುವುದು ಕನ್ನಡಿಗರ ರಕ್ಷಣೆಗೆ.ರಜನಿಕಾಂತ್ ಚಿತ್ರದ ರಕ್ಷಣೆಗೆ ಅಲ್ಲ. ಅವರು ಕೋಟಿ ಕೋಟಿ ರೂಪಾಯಿ ಮಾಡ್ತಾರೆ. ಪೊಲೀಸ್ ಇಲಾಖೆಗೆ 25 ಕೋಟಿ ಕೊಟ್ಟಿದ್ದಾರಾ? 25 ಪೈಸೆ ಕೊಟ್ಟಿಲ್ಲ . ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕನ್ನಡಿಗರ ಪರ ಗಂಭೀರವಾಗಿ ಆಲೋಚನೆ ಮಾಡಬೇಕು’ ಎಂದರು.