Advertisement

“ಖಾತೆ ನಿರ್ವಹಣೆ ಬಿಟ್ಟು ಸಮಾಜ ಒಡೆಯಬೇಡ’

07:05 AM Sep 13, 2017 | Team Udayavani |

ಬೆಂಗಳೂರು: ಲಿಂಗಾಯತ ಪ್ರತ್ಯೇಕ ಧರ್ಮಕ್ಕಾಗಿ ಮುಂಚೂಣಿಯಲ್ಲಿ ನಿಂತು ಹೋರಾಟ ನಡೆಸುತ್ತಿರುವ ಜಲ ಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್‌ ಅವರನ್ನು ವಿಧಾನ ಪರಿಷತ್‌ ಸದಸ್ಯ ವಿ.ಸೋಮಣ್ಣ ಏಕವಚನ ಮತ್ತು ಕಟು ಶಬ್ದಗಳಿಂದ ತರಾಟೆಗೆ ತೆಗೆದುಕೊಂಡಿದ್ದಾರೆ.

Advertisement

ಈ ಹಿಂದೆ ತಮ್ಮ ಬಗ್ಗೆ ಮಾತನಾಡಿದ್ದ ಸೋಮಣ್ಣ ಅವರನ್ನು ಎಂ.ಬಿ.ಪಾಟೀಲ್‌ ತರಾಟೆಗೆ ತೆಗೆದುಕೊಂಡಿದ್ದರು. ಈ ಬಗ್ಗೆ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯೆ ನೀಡಿದ ಸೋಮಣ್ಣ, “ಕೊಟ್ಟಿರುವ ಖಾತೆಯನ್ನು ನೆಟ್ಟಗೆ ನಿರ್ವಹಣೆ ಮಾಡುವುದು ಬಿಟ್ಟು ಸಮಾಜ ಒಡೆಯುವ ಕೆಲಸಕ್ಕೆ ಕೈಹಾಕಬೇಡ’ ಎಂದು ಎಂ.ಬಿ.ಪಾಟೀಲ್‌ ಹೇಳಿದರು. ಅವರ ವಿರುದ್ಧ ಏಕವಚನ ಮತ್ತು ಕಟುಮಾತುಗಳನ್ನೂ ಬಳಸಿದರು.

“ನಾಲ್ಕು ವರ್ಷ ಇಲ್ಲದ ಲಿಂಗಾಯತ ಧರ್ಮ ವಿಚಾರ ಈಗೇಕೆ ಬಂತು? ಬಿ.ಎಸ್‌.ಯಡಿಯೂರಪ್ಪ ಅವರನ್ನು ನಾವು (ಬಿಜೆಪಿ) ಮುಖ್ಯಮಂತ್ರಿ ಅಭ್ಯರ್ಥಿ ಎಂದು ಹೇಳುತ್ತಿದ್ದಂತೆ ಸಮಾಜ ಒಡೆಯುವ ಕೆಲಸಕ್ಕೆ ಕೈಹಾಕಿದ್ದೀಯಾ? ನಿನ್ನ ತಂದೆ ಎಷ್ಟು ಗೌರವಸ್ಥರು, ನಿನ್ನ ಕುಟುಂಬ ಎಂತಹ ಘನತೆ ಹೊಂದಿತ್ತು ಎಂಬುದು ನಿನಗೆ ಗೊತ್ತಿಲ್ಲವೇ? ಇನ್ನು ನಾಲ್ಕೈದು ತಿಂಗಳ ನಂತರ ನಿನ್ನ ಗತಿ ಏನಾಗುತ್ತದೆ ಎಂದು ತಿಳಿದುಕೋ…’ ಎಂದು ಸೋಮಣ್ಣ ಕಿಡಿ ಕಾರಿದರು.

Advertisement

Udayavani is now on Telegram. Click here to join our channel and stay updated with the latest news.

Next