Advertisement

ಸರ್ವರಿಗೂ ಸೂರು ನೀಡುವುದೇ ಪ್ರಧಾನಮಂತ್ರಿ ಆವಾಸ್ ಯೋಜನೆಯ ಗುರಿ : ವಿ. ಸೋಮಣ್ಣ

09:35 PM Mar 22, 2022 | Team Udayavani |

ಬೆಂಗಳೂರು : ಪ್ರಧಾನಮಂತ್ರಿ ಆವಾಸ್ ಯೋಜನೆಯು ಬಡತನದಲ್ಲಿರುವ ಸರ್ವರಿಗೂ ವಸತಿ ಕಲ್ಪಿಸಿಕೊಡುವ ಒಂದು ಅತ್ಯುತ್ತಮ ಯೋಜನೆಯಾಗಿದೆ ಎಂದು ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರಾದ ವಿ ಸೋಮಣ್ಣ ಅವರು ತಿಳಿಸಿದರು.

Advertisement

ಅವರು ಇಂದು ಬೆಂಗಳೂರು ನಗರ ಜಿಲ್ಲೆಯ ಪೂರ್ವ ತಾಲ್ಲೂಕಿನ ಭೋಗನಹಳ್ಳಿಯಲ್ಲಿ ಮಹದೇವಪುರ ಕ್ಷೇತ್ರದ ಕೊಳಗೇರಿಗಳಲ್ಲಿ ವಾಸಿಸುವ ನಿವಾಸಿಗಳಿಗೆ ಹಕ್ಕುಪತ್ರ ವಿತರಣೆ ಕಾರ್ಯಕ್ರಮ ಹಾಗೂ ಪ್ರಧಾನ ಮಂತ್ರಿ ಸರ್ವರಿಗೂ ಸೂರು ಯೋಜನೆ ಅಡಿಯಲ್ಲಿ ವಿವಿಧ ಕೊಳಗೇರಿ ಪ್ರದೇಶಗಳಲ್ಲಿ 1000 (ಜಿ) ಮನೆಗಳ ನಿರ್ಮಾಣ ಕಾಮಗಾರಿಯ ಶಂಕುಸ್ಥಾಪನೆ ಸಮಾರಂಭ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಹದೇವಪುರ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಮಾತನಾಡಿದ ಅವರು 6 ಲಕ್ಷ ಮತದಾರರ ಇರುವ ಈ ಕ್ಷೇತ್ರ ಸಾಕಷ್ಟು ಅಭಿವೃದ್ಧಿ ಆಗಲು ಕ್ಷೇತ್ರದ ಶಾಸಕರಾದ ಅರವಿಂದ ಲಿಂಬಾವಳಿ ಅವರ ಅವಿರತ ಶ್ರಮವೇ ಕಾರಣ ಎಂದರು. ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳಲ್ಲಿ ಮುಂದಿನ ದಿನಗಳಲ್ಲಿ ಅಭಿವೃದ್ದಿಯಲ್ಲಿ ಇದು ಅಗ್ರ ಸ್ಥಾನ ಪಡೆಯಲಿದೆ ಎಂದರು.

ಮಾಜಿ ಸಚುವ ಹಾಗೂ ಮಹದೇವಪುರ ಕ್ಷೇತ್ರದ ಶಾಸಕ ಅರವಿಂದ್ ಲಿಂಬಾವಳಿ ಅವರು ಮಾತನಾಡಿ ಯಾವುದೇ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಸ್ಥಳೀಯ ಶಾಸಕರ ಶ್ರಮ ಮಾತ್ರವಲ್ಲ ಆಯಾ ಕ್ಷೇತ್ರದ ಸಚಿವರುಗಳ ಬೆಂಬಲ ಅತ್ಯಗತ್ಯ ಎಂದರು. ಈ ನಿಟ್ಟಿನಲ್ಲಿ ಕ್ಷೇತ್ರದ ಜನರಿಗೆ ಮೂಲ ಸೌಲಭ್ಯ ಹಾಗೂ ವಸತಿ ಕಲ್ಪಿಸುವಲ್ಲಿ ಸಚುವ ಸೋಮಣ್ಣ ಅವರು ತುಂಬುಮನಸ್ಸಿನಿಂದ ಬೆಂಬಲ ನೀಡಿ ಕ್ಷೇತ್ರದ ಅಭಿವೃದ್ಧಿಗೆ ಕಾರಣರಾಗಿದ್ದಾರೆ ಎಂದರು.

ಇದನ್ನೂ ಓದಿ : ಹುಣಸೂರು ಪ್ರಾದೇಶಿಕ ಅರಣ್ಯ ವಿಭಾಗದ ಡಿಸಿಎಫ್‌ ಆಗಿ ಪಿ.ಎ.ಸೀಮಾ ಅಧಿಕಾರ ಸ್ವೀಕಾರ

Advertisement

ಸರ್ಕಾರಿ ಜಾಗದಲ್ಲಿ ಮನೆಗಳನ್ನು, ಆರೋಗ್ಯ ಕೇಂದ್ರ, ಗ್ರೌಂಡ್ ನಿರ್ಮಿಸಿ ಕೊಡುತ್ತಿರುವುದು ಜನರಿಗೆ ಸಹಕಾರಿಯಾಗುತ್ತಿದೆ. ಇನ್ನು ಅಗತ್ಯವಿರುವ ಮನೆಗಳ ಬಗ್ಗೆ ಸರ್ವೇ ಮಾಡಿಸಿ ಅಧಿಕಾರಿಗಳಿಂದ ಪರಿಶೀಲನೆ ನಡೆಸಿ ಫಲಾನುಭವಿಗಳಿಗೆ ನೀಡುವ ಕಾರ್ಯ ಅಗಲಿದೆ ಎಂದವರು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಅಥಣಿ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಶ್ರೀ ಮಹೇಶ್ ಈರನ ಗೌಡ ಕುಮಠಳ್ಳಿ, ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಉಪ ಆಯುಕ್ತರಾದ ಬಿ ವೆಂಕಟೇಶ್, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಸದಸ್ಯರಾದ ಕೆ ಎಸ್ ಗೀತಾ ರವೀಂದ್ರ ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next