Advertisement

ಮುಂದಿನ ಗಂಡಾಂತರ ತಪ್ಪಿಸಲು ಮರಾಠ ಪ್ರಾಧಿಕಾರ :ಸರಕಾರದ ನಿಲುವು ಸಮರ್ಥಿಸಿದ ಸಚಿವ ವಿ.ಸೋಮಣ್ಣ

04:35 PM Nov 18, 2020 | sudhir |

ರಾಯಚೂರು: ರಾಜ್ಯದಲ್ಲಿ ಸಮಾಜಿಕವಾಗಿ ಹಿಂದುಳಿದ ಹಾಗೂ ಗಡಿಭಾಗದಲ್ಲಿ ಸಂಘರ್ಷಕ್ಕೆ ಕಾರಣವಾಗಿದ್ದ ಮರಾಠ ಸಮುದಾಯದ ಒಳಿತಿಗಾಗಿ ಹಾಗೂ ರಾಜ್ಯದಲ್ಲಿ ಮುಂದೊಂದು ದಿನ ನಡೆಯುವ ಗಂಡಾಂತರ ತಪ್ಪಿಸುವುದಕ್ಕಾಗಿಯೇ ಮರಾಠ ಪ್ರಾಧಿಕಾರ ರಚಿಸಲಾಗಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ಮತ್ತೊಮ್ಮೆ ಸರ್ಕಾರದ ನಿಲುವು ಸಮರ್ಥಿಸಿಕೊಂಡರು.

Advertisement

ಮಸ್ಕಿ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಇಂದು ಟೀಕಿಸುವವರು ಮುಂದಿನ 10 ವರ್ಷದ ಬಳಿಕ ಕೊಂಡಾಡಲಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಈ ಆಲೋಚನೆ ಬಹು ದೂರದೃಷ್ಠಿಯಿಂದ ಕೂಡಿದೆ. ಬೆಳಗಾವಿಯ ಗಡಿಭಾಗ ಸೇರಿ ರಾಜ್ಯದ ಇತರೆ ಭಾಗದಲ್ಲಿರುವ ಮರಾಠ ಸಮಾಜ ಮುಖ್ಯವಾಹಿನಿಯಿಂದ ದೂರ ಉಳಿದಿದೆ. ಅವರನ್ನು ಸಾಮಾಜಿಕವಾಗಿ ಮುಖ್ಯವಾಹಿನಿಗೆ ತುರುವುದರ ಜತೆಗೆ ಬೆಳಗಾವಿ ಭಾಗದಲ್ಲಿ ಉಂಟಾಗುವ ಉದ್ವಿಗ್ನತೆ, ಸಂಘರ್ಷಗಳನ್ನು ತಪ್ಪಿಸಲು ಈ ಪ್ರಾಧಿಕಾರ ರಚನೆ ಉತ್ತಮವಾಗಿದೆ.

ಇದನ್ನೂ ಓದಿ:ಯೋಧರಿಗಾಗಿ ಸ್ಮಾರ್ಟ್ ಕ್ಯಾಂಪ್ ನಿರ್ಮಿಸಿದ ಭಾರತೀಯ ಸೇನೆ: ಇದರ ವಿಶೇಷತೆಗಳೇನು ಗೊತ್ತಾ ?

ಬಂದ್ ಮತ್ತೊಂದು ನಡೆಯುವುದು ಸಾಮಾನ್ಯ. ಇವೆಲ್ಲವನ್ನು ಸರಕಾರ ಸಮರ್ಥವಾಗಿ ನಿಭಾಯಿಸಲಿದೆ. ಮಹಾರಾಷ್ಟ್ರ ಸರ್ಕಾರಕ್ಕೆ ಖ್ಯಾತೆ ತೆಗೆಯುವುದೇ ಕೆಲಸವಾಗಿದೆ. ಇದಕ್ಕೆಲ್ಲ ಸರ್ಕಾರ ಬಗ್ಗುವುದಿಲ್ಲ. ಇಲ್ಲಿನ ಯಾವ ಪ್ರದೇಶವನ್ನೂ ಕೇಳಿದರೂ ನಾವು ಬಿಟ್ಟು ಕೊಡುವುದಿಲ್ಲ. ಇಂತಹ ಖ್ಯಾತೆಗಳ ನಿವಾರಣೆಗಾಗಿಯೇ ಈ ಪ್ರಾಧಿಕಾರ ಮದ್ದಾಗಲಿದೆ. ಆದರೆ ಕೆಲವರಿಗೆ ಇದು ಬಿಸಿ ತುಪ್ಪವಾಗಿದೆ ಎಂದರು.

ರಾಜ್ಯ ಕಾಂಗ್ರೆಸ್ ಒಡೆದ ಮನೆಯಾಗಿದ್ದು ಅಲ್ಲಿನ ವರಿಷ್ಠರಲ್ಲಿಯೇ ಭಿನ್ನಾಭಿಪ್ರಾಯಗಳಿವೆ. ಇಂತಹ ಪಕ್ಷಕ್ಕೆ ಆರ್.ಬಸನಗೌಡ ತುರುವಿಹಾಳ ಸೇರಿದ್ದಾರೆ. ಅವರಿಗೆ ರಾಜಕೀಯವಾಗಿ ಭವಿಷ್ಯವಿಲ್ಲ ಎಂದರು.

Advertisement

ಇದನ್ನೂ ಓದಿ:ನ.23 ರಿಂದ ಚಂದನ ವಾಹಿನಿಯಲ್ಲಿ 5-7ನೇ ತರಗತಿಗೆ ಸಂವೇದಾ ಇ-ಕ್ಲಾಸ್ ಆರಂಭ : ಸುರೇಶ್ ಕುಮಾರ್

ಆರ್.ಆರ್.ನಗರ, ಶಿರಾ ಉಪಚುನಾವಣೆಯಲ್ಲಿ ಏನಾಯಿತು ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಇಲ್ಲಿ ಕೂಡ ಅದೇ ಪರಿಸ್ಥಿತಿ ಪುನರಾವರ್ತನೆಯಾಗಲಿದೆ. ಬಿಜೆಪಿ ಸರ್ಕಾರ ರಚನೆಗೆ ಕಾರಣವಾದ ಪ್ರತಾಪಗೌಡ ಪಾಟೀಲ್ ಗೆಲುವು ನಿಶ್ಚಿತವಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next