ದಾವಣಗೆರೆ: ವಿಧಾನ ಪರಿಷತ್ ಸದಸ್ಯ ಸಿ.ಎಂ. ಇಬ್ರಾಹಿಂ ಅವರು ಈವರೆಗೆ ಗಳಿಸಿರುವ ಆಸ್ತಿಯ ತನಿಖೆಗೆ ಸಿದ್ದವಿದ್ದಾರಾ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ವಿ.ಎಸ್. ಉಗ್ರಪ್ಪ ಸವಾಲು ಹಾಕಿದರು.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ವೆಂಕಟಮ್ಮನ ಹಳ್ಳಿಯಿಂದ ಪಾರ್ಲಿಮೆಂಟ್ ವರೆಗೆ ಹಾರಿಕೊಂಡು ಹೋದವನಲ್ಲ. ತೆವಳಿಕೊಂಡು ಹೋದವನು. ನಾನು ನನ್ನ ಆಸ್ತಿಯ ತನಿಖೆಗೆ ಸಿದ್ದ, ಆದರೆ ಇಬ್ರಾಹಿಂ ಸಿದ್ದವೇ ಎಂದು ಪ್ರಶ್ನಿಸಿದರು.
ನಾನು ಅವರ ವಕೀಲನಾಗಿ ಕೆಲವಾರು ಕೇಸ್ ಗೆದ್ದುಕೊಟ್ಟಿರುವೆ. ಅವುಗಳ ಬಗ್ಗೆ ಹೇಳಲಿಕ್ಕೆ ಹೋಗುವುದಿಲ್ಲ. ವಕೀಲರಿಗೆ ಏಕ ವಚನದಲ್ಲಿ ಮಾತನಾಡುವುದು ಸರಿ ಅಲ್ಲ. ಇಬ್ರಾಹಿಂ ಅವರಿಗೆ ಪರಿಷತ್ ಸದಸ್ಯರಾಗಿ ಮಾಡಿರುವ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಮತ್ತು ಪಕ್ಷಕ್ಕೆ ಬದ್ದವಾಗಿರಬೇಕು. ಅವರೇ ಹೇಳುವಂತೆ ನಾಯಿನಿಷ್ಠೆ ಹೊಂದಿರಬೇಕು ಎಂದು ತಾಕೀತು ಮಾಡಿದರು.
ಇದನ್ನೂ ಓದಿ:ದೇಶದಲ್ಲಿ ಅಭಿವೃದ್ಧಿ ಪರ್ವ ಆರಂಭಿಸಿದ್ದು ಕಾಂಗ್ರೆಸ್
ಸಿ.ಎಂ. ಇಬ್ರಾಹಿಂ ನನ್ನ ಬಗ್ಗೆ ಮಾತನಾಡಿದ್ದಕ್ಕೆ ನಾನೂ ಮಾತನಾಡಬೇಕಾಯಿತು. ಇಬ್ರಾಹಿಂ ಯಾಕೆ ನನ್ನ ಹೆಸರು ಪ್ರಸ್ತಾಪ ಮಾಡಿದರೋ ಗೊತ್ತಿಲ್ಲ. ಈಗಲೂ ಅನೇಕರು ಇಬ್ರಾಹಿಂ ಅವರ ಆಸ್ತಿಗಳ ದಾಖಲೆ ತಂದು ಕೊಡುತ್ತಿದ್ದಾರೆ. ನಾನು ಅವುಗಳ ಮುಟ್ಟುತ್ತಿಲ್ಲ. ಮಾತನಾಡಲಿಕ್ಕೂ ಹೋಗುವುದಿಲ್ಲ. ರಾಜಕಾರಣಿಗಳಿಗೂ ನಿಷ್ಠೆ, ಬದ್ಧತೆ ಇರಬೇಕು. ಇಬ್ರಾಹಿಂ ಅವರಂತೆ ಮನ ಬಂದಂತೆ ಮಾಡುವುದು ಸರಿಯಲ್ಲ ಎಂದರು.