ಹೊಸದಿಲ್ಲಿ: ಕುಲಪತಿ ಹುದ್ದೆಗೆ ನೇಮಕ ವಾಗಲು ಪ್ರೊಫೆಸರ್ ಆಗಿ ಹತ್ತು ವರ್ಷಗಳ ಕೆಲಸದ ಅನುಭವ ಕಡ್ಡಾಯ ವಾಗಿ ಹೊಂದಬೇಕು.
ಜತೆಗೆ ನಿಗದಿತ ವ್ಯಕ್ತಿಯ ಹೆಸರನ್ನು ಶೋಧನಾ ಸಮಿತಿ ಅಥವಾ ಆಯ್ಕೆ ಸಮಿತಿ ಶಿಫಾರಸು ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪಿನಲ್ಲಿ ಹೇಳಿದೆ.
ನ್ಯಾ| ಎಂ.ಆರ್.ಶಾ ಮತ್ತು ನ್ಯಾ| ಎಂ. ಎಂ. ಸುಂದರೇಶ್ ಅವ ರ ನ್ನೊಳಗೊಂಡ ನ್ಯಾಯ ಪೀಠ 2019ರ ವಿಶ್ವವಿದ್ಯಾನಿ ಲಯಗಳ ಕಾಯ್ದೆಯ ಸೆಕ್ಷನ್ 10(3)ರ ಪ್ರಕಾರ ವಿ.ವಿ. ಕುಲಪತಿ ಹುದ್ದೆಗೆ ಅವರು ಹೊಂದಿರುವ ಶೈಕ್ಷಣಿಕ ಮತ್ತು ಅರ್ಹ ತೆಯ ಆಧಾರದ ಮೇಲೆ ಮೂರು ವ್ಯಕ್ತಿಗಳ ಹೆಸರಿನ ಪಟ್ಟಿ ಸಿದ್ಧಪಡಿಸಿ ಕೊಳ್ಳಬೇಕು ಎಂದು ಅಭಿಪ್ರಾಯಪಟ್ಟಿದೆ.
ಉತ್ತರಾಖಂಡದಲ್ಲಿ ಕಳೆದ ವರ್ಷ ಸೋಬನ್ ಸಿಂಗ್ ವಿವಿ ಹುದ್ದೆಗೆ ಪ್ರೊ. ನರೇಂದ್ರ ಸಿಂಗ್ ಭಂಡಾರಿ ಅವರನ್ನು ನೇಮಕ ಮಾಡಿದ ನಿರ್ಣಯವನ್ನು ಹೈಕೋರ್ಟ್ ರದ್ದುಪಡಿಸಿತ್ತು. ಆ ತೀರ್ಮಾನ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಕೆ ಮಾಡಲಾಗಿದ್ದ ಮೇಲ್ಮನವಿ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಕುಲ ಪತಿ ಹುದ್ದೆಗೆ ನೇಮಕ ಗೊಳ್ಳಲು ಹತ್ತು ವರ್ಷಗಳ ಸೇವಾನುಭವ ಕಡ್ಡಾಯ ಎಂದು ಹೇಳಿದೆ.
ಪ್ರೊ| ಭಂಡಾರಿ ಅವರು ಸೂಚಿತ ಅವಧಿಯ ಸೇವಾ ನು ಭವ ಹೊಂದಿಲ್ಲ ಎಂದು ಅರ್ಜಿದಾರರು ವಾದಿಸಿದ್ದರು. ಲೋಕ ಸೇವಾ ಆಯೋಗದ ಸದಸ್ಯರಾಗಿದ್ದ ವೇಳೆ ಪಿಎಚ್.ಡಿ. ವಿದ್ಯಾ ರ್ಥಿಗಳಿಗೆ ಸಲಹೆ ನೀಡುತ್ತಿದ್ದೆ. ಅದನ್ನು ಬೋಧನಾನುಭವಕ್ಕೆ ಸೇರ್ಪಡೆ ಮಾಡ ಬೇಕು ಎಂಬ ಪ್ರೊ| ಭಂಡಾರಿ ಯವರ ವಾದವನ್ನೂ ನ್ಯಾಯಪೀಠ ತಿರಸ್ಕರಿಸಿದೆ.