ಆ ದೊಡ್ಡದಾದ ಆಲದ ಮರ. ಅದರಲ್ಲಿ ತೂಗು ಹಾಕಿದ ಉಯ್ಯಾಲೆ. ಅಂದು ನಾನೇ ಮೊದಲು ಇರ್ಬೇಕು ಅಂತ ಓಡೋಡಿ ಬಂದೆ. ಆದ್ರೆ ನಾನು ಬರುವುದಕ್ಕಿಂತ ಮೊದಲೆ ಉಯ್ಯಾಲೆ ತೂಗ್ತಾ ಇತ್ತು.
“”ಅದು ಹ್ಯಾಗೋ ನನಗಿಂತ ಮೊದಲು ಬರಿ¤àಯಾ? ಒಂದು ಸಲನಾದ್ರೂ ತಡವಾಗಿ ಬಾರೋ. ಯಾವಾಗ್ಲೂ ನಾನೇ ಸೋಲೋದು, ಒಂದ್ಸಲನಾದ್ರೂ ಗೆಲೆºàಕು ಕಣೋ” ಅಂದೆ.
ಹಾಗೆ ಅವನಿಷ್ಟದ ಹಳದಿ ಚೂಡಿದಾರದ ಗುಲಾಲಿ ಶಾಲನ್ನು ಸರಿ ಮಾಡುತ್ತಾ ನನಗೋಸ್ಕರ ತೂಗುತ್ತಿದ್ದ ಉಯ್ಯಾಲೆಯಲ್ಲಿ ಕುಳಿತಕೊಂಡೆ. ಕುಳಿತುಕೊಳ್ಳುತ್ತಿದ್ದಂತೆ ಶುರುಮಾಡಿದೆ, “”ಹೀಗೆ ಉಯ್ಯಾಲೆ ತೂಗ್ತಾ ಇರೋ ಹಾಗೇ ಈ ಉಯ್ಯಾಲೇಲಿ ಜೀವನ ಇಡಿ ನಿನ್ನ ಜೊತೆ ಕಳೆದುಬಿಡ್ತೀನಿ” ಅಂತ ನಗ್ತಾ ಇದ್ದೆ. “”ಅಲ್ಲ ಕಣೋ ಒಂದಿನ ಈ ಉಯ್ಯಾಲೆ ನೆನಪು ಬರೀ ನೆನಪಾಗಿ ಕಾಡ್ತದಲ್ವ , ನಮ್ಮ ಜೀವನದ ಪಯಣ ಬೇರೆ ರೀತಿ ಶುರುವಾಗ್ತದಲ್ವ . ಈ ಸುಂದರ ಕ್ಷಣಗಳು ಬರೀ ನೆನಪಲ್ವೆನೋ” ಅಂತ ಮೌನವಾದೆ.
ಹಾಗೆ ತೂಗೋ ಉಯ್ಯಾಲೇನ ನೋಡ್ತಾ ಇದ್ದೆ. “”ಅರೆ ಇಲ್ಲೂ ಇಬ್ರು ಪ್ರೀತ್ಸೋರು ಇದ್ದಾರೆ ಕಣೋ” ಅಂದೆ. ಜೋಕಾಲಿಯನ್ನು ತೂಗು ಹಾಕಿದ ಎರಡು ಹಗ್ಗ ಎರಡು ಹೃದಯದಂತೆ ಅನ್ನಿಸ್ತಾ ಇತ್ತು. ಆದ್ರೆ ಇವರಿಬ್ಬರು ಯಾಕೆ ದೂರ ಇದ್ದಾರೆ? ಅಂತ ಗೊತ್ತಾಗ್ಲೆà ಇಲ್ಲ ಅನ್ನುತ್ತಾ ಕೈ ನೋಡಿದ್ರೆ ಗಂಟೆ ಆರೂವರೆ ಆಗಿತ್ತು. “”ಅಯ್ಯೋ ಲೇಟಾಯ್ತು ಕಣೋ, ನಾನು ಇಷ್ಟು ವಟವಟ ಅಂದ್ರೂ ನೀನು ಒಂದು ಮಾತೂ ಅಂದಿಲ್ಲ . ಯಾಕೋ? ಏನಾಯೊ¤à?” ಎಂದು ಹಿಂತಿರುಗಿದೆ. ಆದರೆ ಅಲ್ಲಿ ಯಾರು ಇರಲಿಲ್ಲ. “”ಅಯ್ಯೋ ಇದೊಂದು ಹುಚ್ಚು ಮನಸ್ಸು. ಮರೆತುಬಿಡು ಅಂದವ ಮರಳಿ ಬರಲು ಸಾಧ್ಯವೇ?” ಹಾಗಾದರೆ ಈ ಉಯ್ಯಾಲೆ ದಾರಗಳಲ್ಲೂ, ಅಲ್ಲಲ್ಲ ಪ್ರೀತಿಸುವ ಹೃದಯಗಳಲ್ಲೂ ಯಾರೋ ಒಬ್ರು ಮರೆತುಬಿಡು ಅಂದಿರಬೇಕು. ಅದಕ್ಕೆ ಇಬ್ಬರೂ ದೂರ ಇದ್ದಾರೆ ಅಂದುಕೊಂಡು ಇಬ್ಬರನ್ನು ಒಂದು ಮಾಡಲು ಪ್ರಯತ್ನಿಸುತ್ತಾ ಇದ್ದೆ. ಆದ್ರೆ ಆಗಲೇ ಇಲ್ಲ. “”ಹಾಗಾದರೆ ನಾವು ಹೀಗೇನಾ? ಒಂದಾಗೋದೇ ಇಲ್ವ? ಒಂದಿನ ನೆನಪಾಗಿ ಕಾಡ್ತದಲ್ವೇನೋ?” ಅಂದಿದ್ದ ಹಾಗೇನೇ ನೆನಪಾಗಿಯೇ ಕಾಡ್ತಾನಾ? ಹಾಗಾದ್ರೆ ಇನ್ಮುಂದೆ ಯಾರು ಜೋಕಾಲಿ ತೂಗ್ತಾರೆ? ಇನ್ಮುಂದೆ ಯಾರಿಗೋಸ್ಕರ ಹಳದಿ ಚೂಡಿದಾರ ಹಾಕ್ಲಿ?” ಅಂತ ನನ್ನಲ್ಲೇ ನಾನು ಪ್ರಶ್ನೆ ಕೇಳ್ತಾ ಇದ್ದೆ. ಆದರೆ ಉತ್ತರ ಮಾತ್ರ ಸಿಗ್ಲೆà ಇಲ್ಲ. ನೊಂದ ಮನಸ್ಸು ಉಸಿರುಗಟ್ಟಿತ್ತು. ಜೀವನಪೂರ್ತಿ ಈ ಜೋಕಾಲಿಯಲ್ಲೇ ನಿನ್ನ ಜೊತೆ ಇರ್ತೀನಿ ಅಂದೋಳು, ಜೀವನಪೂರ್ತಿ ಹೀಗೆ ನಿನ್ನ ನೆನಪಲ್ಲೇ ಈ ಜೋಕಾಲಿಯೊಟ್ಟಿಗೆ, ಅದರಲ್ಲಿ ಇರುವ ಎರಡು ಪ್ರೀತಿಸುವ ಜೀವಿಗಳ ಜೊತೆ ಕಳೆದುಬಿಡ್ತೀನಿ ಅಂತ ಮನಸ್ಸಿನ ಜೊತೆ ಮಾತಾಡಿ ಅಲ್ಲಿಂದ ಹೊರಟುನಿಂತೆ.
– ಶ್ರುತಿ ಶೆಟ್ಟಿ , ಕುಂಟಾಡಿ