– ಭಾಷೆ- ಮಲಯಾಳಂ
– ಸಮಯ- 125 ನಿಮಿಷ
– ಎಲ್ಲಿ ಸಿಗುತ್ತದೆ?- ನೆಟ್‌ಫಿಕ್ಸ್
Advertisement
2019ರಲ್ಲಿ ಬಿಡುಗಡೆಯಾಗಿ, ಅಪಾರ ಜನಮೆಚ್ಚುಗೆ ಪಡೆದ ಚಿತ್ರ ಉಯರೇ. ಮೇಲ್ನೋಟಕ್ಕೆ ಇದು ಆ್ಯಸಿಡ್ ಸಂತ್ರಸ್ತೆಯೊಬ್ಬಳ ಯಶೋಗಾಥೆ. ಆದರೆ, ಈ ಸಿನಿಮಾ ಅಷ್ಟನ್ನು ಮಾತ್ರ ಹೇಳುವುದಿಲ್ಲ. ನಮ್ಮ ಸಮಾಜದಲ್ಲಿ ಹಾಸುಹೊಕ್ಕಾಗಿರುವ ಪುರುಷ ಪ್ರಧಾನ ಸಂಸ್ಕೃತಿಯ ದರ್ಪ, ಹೆಣ್ಣು ಸದಾ ತನ್ನ ಅಧೀನದಲ್ಲಿ ಇರಬೇಕು ಎಂದು ಬಯಸುವ ಗಂಡು, ಅದನ್ನು ಸಮರ್ಥಿಸಿಕೊಳ್ಳುವ ಬಗೆ, ನ್ಯಾಯಾಂಗ ವ್ಯವಸ್ಥೆಯಲ್ಲಿ ಇರುವ ದೌರ್ಬಲ್ಯ, ಒಂದು ಯಶಸ್ಸಿನ ಹಿಂದೆ ಹೊರಟಾಗ ಎದುರಾಗುವ ಅಡ್ಡಿ- ಆತಂಕಗಳು… ಇದನ್ನೆಲ್ಲಾ ಈ ಚಿತ್ರ ವಿವರವಾಗಿ ತೆರೆದಿಡುತ್ತದೆ. ಪೈಲಟ್ ಆಗಬೇಕು ಎಂಬ ಸದಾಶಯದ ನಾಯಕಿ ಇರುತ್ತಾಳೆ. ಅವಳಿಗೆ ಒಬ್ಬ ಬಾಯ್‌ಫ್ರೆಂಡ್. ಇವಳು ಪೈಲಟ್ ತರಬೇತಿಗೆ ಸೇರುತ್ತಾಳೆ.
ಸಂತ್ರಸ್ತೆಯಾಗಿ ಬದಲಾಗುತ್ತಾಳೆ. ತನ್ನ ಭವಿಷ್ಯವನ್ನೇ ಹಾಳು ಮಾಡಿದವನಿಗೆ ಶಿಕ್ಷೆಯಾಗಬೇಕೆಂದು ಒತ್ತಾಯಿಸಿ, ನಾಯಕಿ ಕೋರ್ಟ್ ಮೊರೆ ಹೋಗುತ್ತಾಳೆ. ಆದರೆ, ಸಾಕ್ಷ್ಯಾಧಾರದ ಕೊರತೆಯಿಂದ ಅಲ್ಲಿ ಕೇಸ್ ಬಿದ್ದು ಹೋಗುತ್ತದೆ. ಆನಂತರ ಏನಾಗುತ್ತದೆ? ನಾಯಕಿ ಪೈಲಟ್ ಆಗುತ್ತಾಳಾ? ಆ್ಯಸಿಡ್ ಎರಚಿದವನಿಗೆ ಶಿಕ್ಷೆ ಆಗುತ್ತದಾ?- ಈ ಪ್ರಶ್ನೆಗಳಿಗೆ ಉತ್ತರಬೇಕೆಂದರೆ, ಉಯರೇ ಚಿತ್ರವನ್ನು ತಪ್ಪದೇ ನೋಡಬೇಕು. ಸಂಶಯವೇ ಬೇಡ. ಇದು ಕುಟುಂಬದವರೆಲ್ಲಾ ಕೂತು ನೋಡಬಹುದಾದ ಅತ್ಯುತ್ತಮ ಚಿತ್ರ. ಮನೆಯೊಳಗೆ ತಂದೆ- ಮಗಳ ಸಂಬಂಧ ಹೇಗಿರಬೇಕು? ಮಕ್ಕಳ ವಿಷಯದಲ್ಲಿ ಪೋಷಕರು ಏನೆಲ್ಲಾ ಎಚ್ಚರ ವಹಿಸಬೇಕು? ಎಲ್ಲಾ ವಿಚಾರಗಳನ್ನೂ ತಂದೆಯೊಂದಿಗೆ ಹೇಳಲು ಆಗದೇ ಹೋದಾಗ ಹೆಣ್ಣು ಮಕ್ಕಳು ಹೇಗೆ ಒದ್ದಾಡುತ್ತಾರೆ? ತಮ್ಮ ಸಮಸ್ಯೆಯನ್ನು
ಯಾರೊಂದಿಗೆ ಹೇಳಿಕೊಳ್ಳುತ್ತಾರೆ? ಒಂದು ಸಾಧನೆಯ ಹಿಂದೆ ಹೊರಟಾಗ, ಅಡೆತಡೆಗಳು ಹೇಗೆಲ್ಲಾ ನಮ್ಮನ್ನು ಬೇಟೆಯಾಡುತ್ತವೆ? ನಮ್ಮ ನ್ಯಾಯಾಂಗ ವ್ಯವಸ್ಥೆ ದುರ್ಬಲ ಅನಿಸುವುದು ಯಾವಾಗ?- ಇಂಥವೇ ಹಲವು ಪ್ರಶ್ನೆಗಳಿಗೂ ಇಲ್ಲಿ ಉತ್ತರವಿದೆ. ಪಾರ್ವತೀ ಮೆನನ್ ಅವರ ಸಂಯಮದ ಅಭಿನಯ ಇಡೀ ಚಿತ್ರದ ಹೈಲೈಟ್.
Related Articles
Advertisement