Advertisement

 #UVMUDDUKRISHNA; ಮುದ್ದುಕೃಷ್ಣ ಫೋಟೋ ಸ್ಪರ್ಧೆ;ನೀವೂ ಪಾಲ್ಗೊಳ್ಳಿ

06:13 PM Sep 05, 2018 | Sharanya Alva |

ಉಡುಪಿ: ಈ ಬಾರಿ ಕೃಷ್ಣ ಜನ್ಮಾಷ್ಟಮಿಯ ಮುದ್ದು ಕೃಷ್ಣ ಸ್ಪರ್ಧೆಯಲ್ಲಿ ನಿಮ್ಮ ಮಗು ಭಾಗವಹಿಸಿದ್ದರೆ, ಉದಯವಾಣಿ ಡಾಟ್ ಕಾಮ್ ಹಾಗೂ ಏಕಂ ಸಂಸ್ಥೆ ಜಂಟಿಯಾಗಿ ಪೋಟೋ ಸ್ಪರ್ಧೆಯನ್ನು ಆಯೋಜಿಸಿದೆ. ನಿಮ್ಮ ಮುದ್ದು ಕೃಷ್ಣನ ನಗು ಜಗವೆಲ್ಲಾ ಹರಡಲಿ ಎಂಬ ಉದ್ದೇಶದಿಂದ #UVMudduKrishna ಫೋಟೋ ಸ್ಪರ್ಧೆಯಲ್ಲಿ ಭಾಗವಹಿಸಿ, ಇದರಲ್ಲಿ ಗೆದ್ದ ಮುದ್ದು ಕೃಷ್ಣನಿಗೆ ಏಕಂ ಸಂಸ್ಥೆಯಿಂದ ಆಕರ್ಷಕ ಬಹುಮಾನವಿದೆ.

Advertisement

ನಿಮ್ಮ ಮುದ್ದು ಕೃಷ್ಣನ ಫೋಟೋವನ್ನು  #UVMudduKrishna ಹ್ಯಾಶ್ ಟ್ಯಾಗ್ ಜೊತೆಯಲ್ಲಿ ಸಾಮಾಜಿಕ ಜಾಲತಾಣ(ಫೇಸ್ ಬುಕ್, ಟ್ವೀಟರ್)ದಲ್ಲಿ ಅಪ್ ಲೋಡ್ ಮಾಡಿ. ಇವುಗಳಲ್ಲಿ ಆಯ್ದ ಹತ್ತು ಮುದ್ದಾದ ಫೋಟೋಗಳನ್ನು ಸುಮಾರು 13 ಲಕ್ಷ ಫಾಲೋವರ್ಸ್ ಅನ್ನು ಹೊಂದಿರುವ ಉದಯವಾಣಿ ಫೇಸ್ ಬುಕ್ ಪೇಜ್ ನಲ್ಲಿ ಪ್ರಕಟಿಸಲಾಗುವುದು. ಅಲ್ಲದೇ ಆಯ್ದ ಮೂರು ಸುಂದರ ಮಗುವಿನ ಫೋಟೋಗೆ ಏಕಂನಿಂದ ಆಕರ್ಷಕ ಬಹುಮಾನ ಕೂಡಾ ಇದೆ. ಸೆಪ್ಟೆಂಬರ್ 8 ಫೋಟೋ ಅಪ್ ಲೋಡ್ ಮಾಡಲು ಕೊನೆಯ ದಿನಾಂಕವಾಗಿದೆ.

ಸ್ಪರ್ಧೆಯ ನಿಯಮ:

1)ಮುದ್ದು ಕೃಷ್ಣನ ವೇಷದ ನಿಮ್ಮ ಮಗುವಿನ ಫೋಟೋ ತೆಗೆಯಿರಿ

2)ಈ ಫೋಟೋವನ್ನು ಫೇಸ್ ಬುಕ್, ಟ್ವೀಟರ್ ಅಥವಾ ಇನ್ ಸ್ಟಾಗ್ರಾಮ್ ನಲ್ಲಿ ಅಪ್ ಲೋಡ್ ಮಾಡಿ

Advertisement

3)ಫೋಟೋ ಅನ್ನು #UVMudduKrishna ಹ್ಯಾಶ್ ಟ್ಯಾಗ್ ಜೊತೆ ಹೆಸರು, ವಿವರ ಬರೆದು ಅಪ್ ಲೋಡ್ ಮಾಡಿ

4)ವಿವಿಧ ಭಂಗಿಯ ಫೋಟೋವನ್ನು(ಸೆಟ್ಟಿಂಗ್ ನಲ್ಲಿ ಪಬ್ಲಿಕ್ ಆಯ್ಕೆ) ಅಪ್ ಲೋಡ್ ಮಾಡಿ

ಏಕಂ ಸಂಸ್ಥೆ ಬಗ್ಗೆ:

ಪ್ರೀಮಿಯರ್‌ ಲಕ್ಷುರಿ ಬ್ರಾಂಡ್‌ ಏಕಂ 2014ರಿಂದಲೂ ನಿಮಗೆ  ಸುಗಂಧದ ವಿಶೇಷಾನುಭವ ನೀಡುವಲ್ಲಿ ಮಗುವಿನ ಹೆಜ್ಜೆಯನ್ನು ಇಡುತ್ತಾ ಬಂದಿದೆ. ಕಲೆ ಮತ್ತು ಅಭಿವ್ಯಕ್ತಿ ಹದವಾಗಿ ಸಮ್ಮಿಲಿತವಾಗಿರುವ ವಿಶಿಷ್ಟ ಉತ್ಪನ್ನಗಳ ಮೂಲಕ ಏಕಂ ತನ್ನ ಬಳಕೆದಾರರಿಗೆ ಹೊಸ ಅನುಭೂತಿಯನ್ನು ನೀಡುವ ನಿಟ್ಟಿನಲ್ಲಿ  ಸದಾ ನವೋನ್ಮೆàಷತೆಯನ್ನು ಸಾಧಿಸುತ್ತಾ ಬಂದಿದೆ.

ಗೃಹ ಮತ್ತು ಸರ್ವಾಂಗ ಸುವಾಸನೆಯನ್ನು ಅಸ್ವಾದಿಸುವ ವಿಶಿಷ್ಟ ಅನುಭವವನ್ನು ಏಕಂ ಮಳಿಗೆಗಳು ತನ್ನ ಗ್ರಾಹಕರಿಗೆ ಪರಿಚಯಿಸುತ್ತಿವೆ. ಏಕಂ ವಿಶಾಲ ವ್ಯಾಪ್ತಿಯ ಸುಗಂಧಗಳನ್ನು, ವಿಶೇಷವಾಗಿ ಬಾಡಿ ಕೇರ್‌, ಹೋಮ್‌ ಫ್ರ್ಯಾಗ್ರೆನ್ಸ್‌, ಹ್ಯಾಂಡ್‌ ಸೋಪ್‌, ಸ್ಯಾನಿಟೈಸರ್ ಮತ್ತು ಆರೋಮಾ ಥೆರಪಿ (ಸುವಾಸನಾ ಚಿಕಿತ್ಸೆ) ಉತ್ಪನ್ನಗಳನ್ನು ಏಕಂ ಉತ್ಪಾದಿಸುತ್ತಿದ್ದು ಇವು ಎಲ್ಲೆಡೆಯ ಗ್ರಾಹಕರಲ್ಲಿ ಜನಪ್ರಿಯವಾಗಿವೆ. ಹಬ್ಬಗಳ ಈ ಋತುವಿನಲ್ಲಿ ಏಕಂ ಹೊಸ ಬಗೆಯ ಸುಗಂಧದ್ರವ್ಯಗಳನ್ನು, ಗಿಫ್ಟ್ ಬಾಕ್ಸ್‌ಗಳನ್ನು ಪರಿಚಯಿಸುತ್ತಿದೆ.

ಏಕಂ ಬ್ರಾಂಡ್‌ ಉತ್ಪನ್ನಗಳು ಪ್ರಕೃತ ದೇಶಧ 13 ರಾಜ್ಯಗಳಲ್ಲಿ ಹರಡಿಕೊಂಡಿರುವ 250 ರಿಟೇಲ್‌ ಮಳಿಗೆಗಳಲ್ಲಿ ಲಭ್ಯವಿವೆ. ಪರಿಮಳಯುಕ್ತ ಈ ವಸ್ತುಗಳು ಆನ್ ಲೈನ್ www.ekamonline.com  ಹಾಗೂ ಇ ಕಾಮರ್ಸ್ ವೆಬ್ ಸೈಟ್ ಮೂಲಕವೂ ಖರೀದಿಸಬಹುದಾಗಿದೆ.

ಆರಂಭದಲ್ಲಿ ಏಕಂ ತನ್ನ ಆನ್‌ಲೈನ್‌ ಪ್ಲಾಟ್‌ಫಾರ್ಮ್ ಮೂಲಕ ತನ್ನ ಉತ್ಪನ್ನಗಳನ್ನು ಗ್ರಾಹಕರಿಗೆ ಪೂರೈಸುತ್ತಿತ್ತು. 2016ರ ಬಳಿಕ ಏಕಂ ದೇಶಾದ್ಯಂತ ತನ್ನ ಮಳಿಗೆಗಳನ್ನು ತೆರೆಯಲು ಆರಂಭಿಸಿತು.

ಪ್ರಕೃತ ಕರ್ನಾಕದಲ್ಲಿ ಏಕಂ ನ ಎರಡು ಮಳಿಗೆಗಳಿವೆ : 1. ಬೆಂಗಳೂರಿನ ಫೀನಿಕ್ಸ್‌ ಮಾರ್ಕೆಟ್‌ ಸಿಟಿ ಯಲ್ಲಿ ,  2. ಮಂಗಳೂರಿನ ಸಿಟಿ ಸೆಂಟ್ರಲ್‌ ಮಾಲ್‌ ನಲ್ಲಿ.

ಇದೇ ಸೆಪ್ಟಂಬರ್‌ ನಲ್ಲಿ ಗುಜರಾತ್‌ ನ ಅಹ್ಮದಾಬಾದ್‌ನಲ್ಲಿ ಏಕಂ ಮಳಿಗೆ ಆರಂಭವಾಗಲಿದೆ. ಅದನ್ನು ಅನುಸರಿಸಿ ಹೈದರಾಬಾದ್‌ ಮತ್ತು ಚಂಡೀಗಢದಲ್ಲೂ ಏಕಂ ಮಳಿಗೆ ಆರಂಭಗೊಳ್ಳಲಿವೆ.

Advertisement

Udayavani is now on Telegram. Click here to join our channel and stay updated with the latest news.

Next