Advertisement

ಪಾಡ್‌ಕಾಸ್ಟ್‌ನ ನವಯುಗ ಇಲ್ಲಿಂದ ಆರಂಭ…!

01:38 PM Oct 10, 2021 | Team Udayavani |

ಅರ್ಧ ಶತಮಾನಗಳಿಂದ ಜನ ದನಿಯಾಗಿ ಮನೆ-ಮನದ ಮಾತಾಗಿ ಪತ್ರಿಕಾಲೋಕದಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿರುವ ವಾರ್ತಾ ಪತ್ರಿಕೆ ಉದಯವಾಣಿ. ಅಸಂಖ್ಯರ ಬದುಕಲ್ಲಿ ಸಾಧನೆಯ ಸಂತೋಷವಾಗಿ, ದುಃಖಗಳಿಗೆ ಪರಿಹಾರವಾಗಿ, ಬರಹಗಳ ಭರಪೂರ ಕೊಡುಗೆ ನೀಡಿದ ಉದಯವಾಣಿ ಆಧುನಿಕತೆಗೆ ಒಗ್ಗಿಕೊಂಡು ಹೊಸ ವಾಣಿಯಾಗಿ, ಸಂಧ್ಯಾವಾಣಿಯ ಉದಯವಾಯಿತು.

Advertisement

ಹೊಸ ಉದಯ: ಸಂಧ್ಯಾವಾಣಿ

ತರಂಗ ವಾರಪತ್ರಿಕೆಯಲ್ಲಿ ತನ್ನ ವೈವಿಧ್ಯಮಯ ಬರಹಗಳ ಮೂಲಕ ಮುದ್ದು ಮಕ್ಕಳ ನೆಚ್ಚಿನ ಸಂಧ್ಯಾ ಮಾಮಿಯ ಕಥೆ, ಬರಹಗಳಿಗೆ ಪಾಡ್‌ಕಾಸ್ಟ್‌ ಎಂಬ ಆಧುನಿಕ ವೇದಿಕೆ ಅವರ ಸ್ವರದಲ್ಲೇ ಮನೆ- ಮನಗಳನ್ನು ತಲುಪುವಂತೆ ಮಾಡಿವೆ. ಅರಿವೇ ಗುರು ಗುರುವೇ ದೇವರು ಅಂತಾರೆ, ಅಂತಹ ಅರಿವಿಗೆ ಗುರುವಾಗಿ ಕನ್ನಡ ಮಾಧ್ಯಮ ಲೋಕದ ವರವಾಗಿ ಈ ಸಂಧ್ಯಾವಾಣಿ ಎಂಬ ಕಿರೀಟಕ್ಕೆ ಮತ್ತೊಂದು ಗರಿ ಸೇರುವ ಸಮಯ ಬಂದಿದೆ. ಈ ಪಯಣದಲ್ಲಿ ಮಕ್ಕಳ ಕಥೆಗಳು, ನೀತಿ ಕಥೆಗಳು, ಜೀವನ ಶೈಲಿಗೆ ಸಂಬಂಧಿಸಿದ ವಿಷಯ ವಿಚಾರಗಳು, ಆರೋಗ್ಯ, ರಾಮಾಯಣದ ಕೆಲ ಆಯ್ದ ಕಥೆಗಳು ಸಂಧ್ಯಾವಾಣಿ ಪಾಡ್‌ಕಾಸ್ಟ್‌ನಲ್ಲಿ‌ ಡಾ. ಸಂಧ್ಯಾ ಎಸ್ ಪೈ ಅವರ ಧ್ವನಿಯಿಂದ ಮೂಡಿ ಬರುತ್ತಿದ್ದ ಉದಯ ಕಿರಣಗಳು.

ದೇಶ ವಿದೇಶದಲ್ಲೂ ಕೇಳುಗರು; ಕಥೆಗಳಿಗೆ ಹೊಸ ಆಯಾಮ ನೀಡಿದ ಡಾ. ಸಂಧ್ಯಾ ಎಸ್ ಪೈ

Advertisement

ಜೀವನ ಹೇಗಿರಬೇಕು, ಜೀವನದಲ್ಲಿ ನಾವು ಹೇಗಿರಬೇಕು, ವ್ಯಥೆ ಮರೆಸುವ ಮದ್ದಾಗಿ, ಮುದ್ದು ಮಕ್ಕಳಿಗೆ ನೀತಿ ಪಾಠವಾಗಿ, ಕೇಳುಗರ ಬದುಕನ್ನು ಭವ್ಯತೆಯೆಡೆಗೆ, ದಿವ್ಯಾನುಭವಗಳ ಕಡೆಗೆ ಸಾಗುವಂತೆ ಮಾಡುತ್ತಿರುವ ಕೀರ್ತಿ ಸಂಧ್ಯಾವಾಣಿಯದ್ದು. ಆಳವಾದ ಅರ್ಥಗರ್ಭಿತ ವಿಷಯಗಳನ್ನು, ಕ್ಲಿಷ್ಟಕರ ಬದುಕಿನ ಸೂತ್ರಗಳನ್ನು ಸೂಕ್ಷ್ಮವಾಗಿ ಕಥೆಗಳ ರೂಪದಲ್ಲಿ ಬಿತ್ತರ ಪಡಿಸುವ ಈ ವೇದಿಕೆ ನಮ್ಮೊಳಗಿನ ಅರಿವನ್ನು ಜಾಗೃತಗೊಳಿಸಿ ಮನದ ಅಂಧಕಾರಕ್ಕೆ ದಿವ್ಯ ದೇವವಾಣಿಯಂತೆ ಕಾರ್ಯನಿರ್ವಹಿಸುತ್ತಿದೆ.

ಡಾ. ಸಂಧ್ಯಾ ಎಸ್ ಪೈಯವರ ಧ್ವನಿಯಲ್ಲಿರುವ ಈ ಪಾಡ್‌ಕಾಸ್ಟ್ ಪ್ರಾದೇಶಿಕ ಮಿತಿಗಳ ಹಂಗಿಲ್ಲದೆ ಸತತ ಒಂದುವರೆ ವರ್ಷದಿಂದ ದೇಶ ವಿದೇಶಗಳಲ್ಲೂ ತನ್ನ ಅಭಿಮಾನಿ ಬಳಗಗಳನ್ನು ಹೊಂದಿದೆ ಮತ್ತು ಇನ್ನಷ್ಟು ವಿಸ್ತಾರವಾಗುತ್ತಿದೆ.

ʼರೀಚಾರ್ಜ್‌ ಆಂಡ್‌ ರಿಲಾಕ್ಸ್” ಪಾಡ್‌ಕಾಸ್ಟ್

ಸಂಧ್ಯಾವಾಣಿಯ ಸತತ ಯಶಸ್ಸಿನ ಬೆನ್ನಲ್ಲೇ ಹೊಸದೊಂದು ಅಧ್ಯಾಯಕ್ಕೆ ಮುನ್ನುಡಿ ಬರೆಯುತ್ತಿದೆ. ಈ ವೇದಿಕೆಯ ಮೂಲಕ ಕನ್ನಡದ ಚಿರ ಪರಿಚಿತ ಹಿನ್ನಲೆ ಧ್ವನಿ, ಹಲವು ಪ್ರಖ್ಯಾತ ಟಿವಿ ಶೋಗಳ ಧ್ವನಿಯಾಗಿ ಜನ ಮಾನಸದಲ್ಲಿ ಮಾತಾಗಿರುವ ಬಡೆಕ್ಕಿಲ ಪ್ರದೀಪ್‌ ಈ ಹೊಸ ಅಧ್ಯಾಯದ ಉದಯಕ್ಕೆ ವಾಣಿಯಾಗಿ ನಿಮ್ಮನ್ನು ರಂಜಿಸಲಿದ್ದಾರೆ. ಪ್ರಖ್ಯಾತ ಟಿವಿ ಶೋ ಬಿಗ್‌ಬಾಸ್‌ನ ಹಿನ್ನೆಲೆ ಧ್ವನಿಯಾಗಿ ಬಿಗ್‌ಬಾಸ್‌ ಮನೆಯಿಂದ ಮನ ತಲುಪುತ್ತಿದ್ದ ಇವರು ಇನ್ನು ಮುಂದೆ ಉದಯವಾಣಿಯ ಮೂಲಕ ಪಾಡ್‌ಕಾಸ್ಟ್‌ ರೂಪದಲ್ಲಿ ಕಾರ್ಯಕ್ರಮ ನೀಡಲಿದ್ದಾರೆ. ಈ ನವ ಉದಯದ ಹೆಸರೇ ‌ʼರೀಚಾರ್ಜ್‌ ಆಂಡ್‌ ರಿಲಾಕ್ಸ್”.

ಬಡೆಕ್ಕಿಲ ಪ್ರದೀಪ್‌:

ಕಲಾವಿದನಾಗಿ ಮಿಂಚುತ್ತಿರೋ ಈ ಪ್ರದೀಪ್‌ ಬಡೆಕ್ಕಿಲ ಒಬ್ಬ ಬರಹಗಾರನಾಗಿ, ವರದಿಗಾರನಾಗಿ, ಮೋಡೆಲ್ ಆಗಿ, ರೇಡಿಯೋ ಜಾಕಿಯಾಗಿ, ಸುಮಾರು 30,000 ಕಾರ್ಯಕ್ರಮಗಳಿಗೆ ಹಿನ್ನೆಲೆ ಧ್ವನಿ  ಕಲಾವಿದನಾಗಿರುವ ಈ ಕುವರ ಕಡಲ ತಡಿಯ ಮಂಗಳೂರಿನ ಕಲಾವಿದ. ‌

ವೇದಿಕೆ:

ಈ ಜಂಜಾಟದ ಬದುಕಿನಲ್ಲಿ ಹಲವು ಸನ್ನಿವೇಶಗಳನ್ನು ಸಮಸ್ಯೆಗಳಾಗಿ ಕಾಣುವ ಈ ಕಾಲದಲ್ಲಿ, ಸನ್ನಿವೇಶಗಳನ್ನು ಅವಕಾಶಗಳಾಗಿ ಕಾಣುವ ಸಾಧ್ಯತೆಗಳನ್ನು ತೆರೆದಿಡಲಿದೆ ಈ ವೇದಿಕೆ. ಆಧುನಿಕತೆಯ ವೇಗ ಜೀವನದಲ್ಲಿ ಎಲ್ಲೋ ಕಳೆದು ಹೋಗಿರುವ ಜನತೆಗೆ ʼದಿನದ ಆರಂಭಕ್ಕೆ – ದಿನವಿಡೀ ಹುರುಪಿಗೆ ರೀಚಾರ್ಜ್.‌ ಸೂರ್ಯ ಮುಳುಗಿದನೆಂದು ತಲೆಗೆ ಕೈ ಹೊತ್ತು ಕೂರುವ ಬದಲು ನಕ್ಷತ್ರಗಳ ಬೆಳಕನ್ನು ಕಾಣುವ ಗುಣಬೇಕು ಎಂಬಂತೆ ನಾಳಿನ ಹೊಸ ಸೂರ್ಯೋದಯಕ್ಕೆ ಹುರುಪಿನಿಂದ ತಯಾರಾಗಬೇಕು. ಆದರೆ,  ದಣಿವಾದಾಗ ಮನಸ್ಸು ಮತ್ತು ದೇಹಕ್ಕೆ ಸಾಂತ್ವನ ಹೇಳಲು ರೆಲಾಕ್ಸ್ ಎಂಬ ಪರಿಕಲ್ಪನೆಯಲ್ಲಿ ಆರಂಭವಾಗುತ್ತಿರುವ ಈ ಪಾಡ್‌ಕಾಸ್ಟ್‌ ಹೊಸ ಉದಯದ ನಿರೀಕ್ಷೆಯಲ್ಲಿರುವಂತೆ ಜನತೆಯನ್ನು ಮಾಡುವುದರಲ್ಲಿ ಅನುಮಾನವಿಲ್ಲ.

ಉದಯವಾಣಿ ಅರ್ಪಿಸುತ್ತಿದೆ UVlisten.com: ಏನಿದು?

ಉದಯವಾಣಿ ಅರ್ಪಿಸುತ್ತಿರುವ ಈ ಹೊಸ ವೇದಿಕೆಯಲ್ಲಿ (website) ಈ ವರೆಗೆ ಮೂಡಿ ಬಂದಿರುವ ಡಾ.ಸಂಧ್ಯಾ.ಎಸ್‌ ಪೈಯವರ ಧ್ವನಿ ಸಾಂಧ್ರಿಕೆಗಳು ಮತ್ತು ಇಂದಿನಿಂದ (ಅಕ್ಟೋಬರ್‌ 10)  ಆರಂಭವಾಗುವ ಬಡೆಕ್ಕಿಲ ಪ್ರದೀಪ್‌ ಅವರ ಪಾಡ್ ಕಾಸ್ಟ್‌ಗಳನ್ನು ನೀವು ಸುಲಭವಾಗಿ ಕೇಳಬಹುದು.

ಕಂಪ್ಯೂಟರ್‌, ಲ್ಯಾಪ್ ಟಾಪ್ ಅಥವಾ ಮೊಬೈಲ್‌ನಿಂದ WWW.UVlisten.com ಅಂತ ಟೈಪ್‌ ಮಾಡಿ ಆಲಿಸಿ.

ನಮ್ಮ ಪಾಡ್‌ಕಾಸ್ಟಗಳು ಈ ವೇದಿಕೆಗಳಲ್ಲೂ ಲಭ್ಯ;

Advertisement

Udayavani is now on Telegram. Click here to join our channel and stay updated with the latest news.

Next