Advertisement
ಕೆಲವು ಬಾರಿ ತುರ್ತು ಸಂದರ್ಭಗಳಲ್ಲಿ ಯಾರಿಗಾದರೂ ರಕ್ತ ಬೇಕಾದರೆ “ದಯಮಾಡಿ ದಾನಿಗಳು ರಕ್ತ ನೀಡಿ’ ಎಂಬ ಸಂದೇಶಗಳು ವಾಟ್ಸಾéಪ್ ಗ್ರೂಪ್‌ಗ್ಳಲ್ಲಿ ಸಾಕಷ್ಟು ಬರುತ್ತಿರುತ್ತವೆ. ಹೀಗೆ ಒಂದು ದಿನ ಮಧ್ಯಾಹ್ನ ಒಂದು ಸಂದೇಶ ಬಂತು.
ಇದನ್ನು ಓದಿದ ಮೇಲೆ ಮನಸ್ಸಿಗೆ ಏನೋ ಕಸಿವಿಸಿಯ ಭಾವ. ಸಂದೇಶ ಬಂದಿರುವ ನಂಬರಿಗೆ ಮತ್ತೆ ಕರೆ ಮಾಡಿ ಆಸ್ಪತ್ರೆಗೆ ಹೋಗಿ ರಕ್ತದಾನ ಮಾಡಿದೆ. ಬರುವಾಗ ಆ ಮಗುವಿನ ತಾಯಿ ನನ್ನ ಕೈ ಹಿಡಿದು “ನೀವು ರಕ್ತ ಕೊಡದೆ ಇದ್ದರೆ ನನ್ನ ಕೂಸು ಬದುಕುತ್ತಿರಲಿಲ್ಲ’ ಎಂದು ಕಣ್ಣೀರು ಹಾಕಿದರು. ನನಗೆ ಆ ಸಮಯಕ್ಕೆ ಆದ ಸಂತೋಷ ಹಿಂದೆಲ್ಲೂ ಲಭಿಸಿರಲಿಲ್ಲ. ವಿದ್ಯಾದಾನ, ಅನ್ನದಾನ ಮತ್ತು ರಕ್ತದಾನ ಇವುಗಳಲ್ಲಿ ಅತ್ಯಂತ ಶ್ರೇಷ್ಠವಾದ ದಾನಗಳು ಎಂಬುದನ್ನು ಕೇಳಿದ್ದೆ. ಅಂದು ಅದು ಸತ್ಯ ವಾಗಿ ಕಂಡಿತು. ರಕ್ತ ಸಂಜೀವಿನಿ ಇದ್ದಂತೆ. ಅದಕ್ಕೆ ಪರ್ಯಾಯ ವಸ್ತುವಿಲ್ಲ. ವಿಶ್ವದಲ್ಲಿ ಪ್ರತೀ ಕ್ಷಣ ಕ್ಕೊಮ್ಮೆ ಯಾರಿಗಾದರೂ ರಕ್ತದ ಅಗತ್ಯ ವಿರುತ್ತದೆ. ಅದಕ್ಕೆ ಹೇಳುವುದು ದೇಹದಲ್ಲಿ ರಕ್ತವಿದ್ದರೆ ಸಾಲದು, ರಕ್ತದಾನ ಮಾಡಿ ಜೀವ ಉಳಿಸಬಲ್ಲ ಉದಾರ ಮನಸ್ಸು ಪ್ರತಿಯೊಬ್ಬರಿಗೂ ಬೇಕು. ನಾವೆಲ್ಲ ಒಂದೇ ಎಂದು ತಿಳಿದು ರಕ್ತದಾನ ಮಾಡಿದಾಗ ಮಾತ್ರ ನಮ್ಮಿಂದ ಜೀವ ಉಳಿಯಲು ಸಾಧ್ಯ.
Related Articles
Advertisement