Advertisement
ನಮ್ಮ ನಗುವಿಗೆ ಕಣ್ಣಿರಿಗೆ ಸಾಥಿಯಾಗಿ ನಮ್ಮೊಂದಿಗೆ ಬೆರೆಯುವ ಆ ಮತ್ತೂಂದು ಮನಸ್ಸಿನ ರೂಪವೇ ಸ್ನೇಹ. ಆ ಮನಸ್ಸಿನಿಂದ ಸಿಗುವ ಕಾಳಜಿ, ಆತ್ಮೀಯತೆ ಮತ್ತು ಸಂತೋಷವೇ ಗೆಳೆತನದ ಆಹ್ಲಾದಕ್ಕೆ ಸಾಕ್ಷಿ . ಪರಿಶುದ್ಧ , ನಿಸ್ವಾರ್ಥ ತ್ಯಾಗದಿಂದ ಕೂಡಿದ ನಿಷ್ಕಲ್ಮಶವಾದ ಸ್ನೇಹ ಸಮಾಜಕ್ಕೂ ಒಳಿತನ್ನು ಮಾಡುತ್ತದೆ. ಸ್ನೇಹದಲ್ಲಿ ಅಹಂ ಆಗಲಿ ದ್ವೇಷವಾಗಲಿ ಸುಳಿಯಲೇ ಬಾರದು ನಮ್ಮ ಸ್ನೇಹ ಸರಿಯಾದ ಮಾರ್ಗದಲ್ಲಿ ನಡೆಯಲು ಸಹಕಾರಿ ಯಾಗಬೇಕು. ನಾವು ನಮ್ಮ ವ್ಯಕ್ತಿತ್ವವನ್ನು ಉತ್ತಮಪಡಿಸಿಕೊಳ್ಳುವಂತಿದ್ದು ನಾವು ಮಾಡುವ ಸ್ನೇಹ ಕೂಡ ನಮಗೆ ದಾರಿದೀಪವಾಗಬೇಕು. ನಮ್ಮನ್ನು ಕತ್ತಲಿನಿಂದ ಬೆಳಕಿನೆಡೆಗೆ ಕರೆದೊಯ್ಯುವಂತಿರಬೇಕು .
Related Articles
Advertisement
ಬಾಲ್ಯದ ಗೆಳೆತನ, ಉದ್ಯೋಗ ಸ್ಥಳದಲ್ಲಿನ ಸ್ನೇಹಿತರು. ಹೊಸ ಹೊಸ ಮಿತ್ರರು ಇವರೆಲ್ಲರ ಆತ್ಮೀಯಗೆಳೆತನ ಉಳಿಸಿಕೊಂಡು ಹೋಗುವುದು ಕೆಲವೊಮ್ಮೆ ಸಾಧ್ಯವಾಗದೇ ಇರಬಹುದು ಆದರೆ ನಂಬಿಕೆಯಿಟ್ಟ ಸ್ನೇಹಿತನಿಗೆ ಎರಡುಬಗೆಯದೇ ಸದಾ ನಾನು ನಿನ್ನೊಂದಿಗೆದ್ದೇನೆ ಎಂಬ ಆತ್ಮವಿಶ್ವಾಸವನ್ನು ತುಂಬುವ ಗುಣ ಸ್ನೇಹದಲ್ಲಿರಬೇಕು. ಆತಂಹ ಗುಣವುಳ್ಳವರನ್ನು ಸ್ನೇಹಿತರನ್ನಾಗಿಸಿಕೊಳ್ಳಬೇಕು . ಸ್ನೇಹದಲ್ಲಿ ಇರಬೇಕಾದದ್ದು ಒಂದೇ ಅದೇ ವಿಶ್ವಾಸ , ಆದರೆ ಪ್ರೀತಿಯಲ್ಲಿ ಮಾತ್ರ ಸ್ನೇಹ ಹಾಗೂ ವಿಶ್ವಾಸ ಎರಡೂ ಇರಬೇಕಾಗುತ್ತದೆ . ಸ್ನೇಹ ನಿಜಕ್ಕೂ ನವಿರಾದ ಸಂಬಂಧ , ಸಾವಿರ ಜನರು ನಮ್ಮ ವಿರುದ್ಧ ನಿಂತಾಗ ನಮ್ಮ ಪರವಾಗಿ ಒಬ್ಬಳು ನಿಂತಿರುತ್ತಾಳಾ ಅವಳೇ ನಿಜವಾದ ಸ್ನೇಹಿತೇ ಅದೇ ನೈಜ ಸ್ನೇಹ ಹೀಗೆ ಸ್ನೇಹಕ್ಕೆ ನಾನಾ ಕವಿಗಳು ನಾನಾ ರೀತಿಯ ಭಾಷ್ಯ ಬರೆದಿದ್ದಾರೆ . ಸ್ನೇಹ ಯಾವಾಗ , ಎಲ್ಲಿ ಬೇಕಾದರೂ ಮೂಡಬಹುದು . ನೋಡ ನೋಡುತ್ತಿದ್ದಂತೆಯೇ ಬೆಳೆದು ಹೆಮ್ಮರವಾಗಬಹುದು , ಆದರೆ ಅದೇ ಸ್ನೇಹ ನಮ್ಮ ಬೆನ್ನಹಿಂದೆ ಎಲ್ಲಿಯತನಕ ಇರುತ್ತೆ ಅನ್ನೋದಷ್ಟೇ ಮುಖ್ಯ. ಇಂದು ಜತೆಯಲ್ಲಿ ಸ್ನೇಹಿತರ ದಿನ ಆಚರಿಸಿದವರು ಮುಂದಿನ ವರ್ಷವೂ ಜತೆಯಲ್ಲೇ ಇರುತ್ತಾರೆ ಎನ್ನಲಾಗದು . ಆಗ ಇನ್ಯಾರೋ ಆ ಜಾಗದಲ್ಲಿ ಇರಬಹುದು .
ನಮ್ಮ ಮನಸ್ಸೇ ಹಾಗೆ , ಕೆಲವೊಮ್ಮೆ ಯಾರೋ ? ಯಾಕೋ ? ಇಷ್ಟವಾಗ್ತಾರೆ . ಅವರೇ ನಮ್ಮ ಬೆಸ್ಟ್‌ಫ್ರೆಂಡ್ ಅಂತ ತಿಳಿತೀವಿ . ಅಂಥವರ ಜತೆ ಎಲ್ಲವನ್ನೂ ಹಂಚಿಕೊಳ್ಳುತ್ತೇವೆ. ಆದರೆ ಅವರು ಮುಂದೊಂದು ದಿನ ಕಾರಣ ಹೇಳದೆ ಕೈಕೊಟ್ಟುಬಿಡುತ್ತಾರೆ ಆಗ ಅದೆಷ್ಟು ನೋವು , ಅವಮಾನ ಅನುಭವಿಸುತ್ತೀವಿ. ಈಗಂತೂ ಕಾಲ ತುಂಬಾನೇ ಬದಲಾಗಿದೆ. ಸಾಮಾಜಿಕ ಜಾಲ ತಾಣಗಳು ಗೆಳೆತನ ಸಂಪಾದಿಸಲು ಸಾಕಷ್ಟು ದಾರಿಯನ್ನು ಮಾಡಿಕೊಟ್ಟಿವೆ . ಇಂದು ಕಾಲ ಬದಲಾಗಿದೆ , ಜತೆಗೆ ನಾವೂ ಬದಲಾಗಿದ್ದೇವೆ ಲೆಟರ್ ಬರೆಯೋಕೆ ಟೈಂ ಇಲ್ಲ , ಫೋನ್ ಮಾಡೋಕೆ ಕರೆದರಗಳು ಅನ್ ಲಿಮಿಟೆಡ್ ಜತೆ ವಿಪರೀತ ಏರಿಕೆಯಾಗಿವೆ . ಹೀಗಾಗಿ ಜನರಿಗೆ ಅಂತಜಾìಲ ತಾಣಗಳು ಕಡಿಮೆ ಖರ್ಚಿಗೆ ಲಾಭದಾಯಕ ಎಂಬಂತೆ ತೋರುತ್ತಿವೆ ಫೇಸ್ ಬು ಕ್, ಟ್ವಿಟರ್ ಖಾತೆ ತೆರೆದು ಅಲ್ಲಿರುವವರಿಗೆ ರಿಕ್ವೆಸ್ಟ್ ಕೊಟ್ಟರೆ ಕೆಲವೇ ಕ್ಷಣಗಳಲ್ಲಿ ನೂರಾರು ಸ್ನೇಹಿತರು ನಮ್ಮ ಸುತ್ತಮುತ್ತ ಹುಟ್ಟಿಕೊಳ್ಳುತ್ತಾರೆ . ಆದರೆ ಇವರೆಲ್ಲ ನಮ್ಮ ಬೆಸ್ಟ್ ಫ್ರೆಂಡ್ ಗಳ ಸ್ಥಾನ ತುಂಬುತ್ತಾರಾ? ಖಂಡಿತಾ ಅಲ್ಲ , ಸಾಮಾಜಿಕ ತಾಣಗಳು ಇಂದು ಸ್ನೇಹವನ್ನು ಬಿಕರಿ ಮಾಡುವ ತಾಣಗಳಾಗುತ್ತಿವೆಯೇ ಹೊರತು ಒಳ್ಳೆಯ ಸ್ನೇಹಿತರನ್ನು ಸೃಷ್ಟಿಸುವ ತಾಣಗಳಾಗುತ್ತಿಲ್ಲ . ಏನೇ ಇರಲಿ , ಈ ದಿನದ ಮಟ್ಟಿಗಾದರೂ ನಮ್ಮ ಜೀವನದಲ್ಲಿ ಸ್ನೇಹಿತರ ಜತೆ ಕಳೆದ ಅಮೂಲ್ಯ ದಿನಗಳನ್ನು ನೆನಪು ಮಾಡಿಕೊಳ್ಳೋಣ . ನಾನಾ ಕಾರಣಕ್ಕೆ ಮನಸ್ಸಿಗೆ ಹತ್ತಿರವಾದ ಗೆಳೆಯ ಗೆಳತಿಯರು . ಹೀಗೆ ಎಲ್ಲರಿಗೂ ಈ ದಿನದ ಶುಭಾಶಯ.
*ಭೂಮಿಕಾ ದಾಸರಡ್ಡಿ , ಬಿದರಿ