Advertisement
ಇನ್ನು ನಮ್ಮ ಡಿಪಾರ್ಟ್‌ಮೆಂಟ್ ವಿವಿಯಲ್ಲೇ ವಿಶೇಷ. ಸಮಯ ಪಾಲನೆ ಮುಖ್ಯ. ಹಾಗಾಗಿ ಮೊದಲ ದಿನ ದಿಂದಲೇ ನಾವೆಲ್ಲಾ ಐದು ನಿಮಿಷ ಮುಂಚಿತವಾಗಿಯೆ ಬಂದು ಕುಳಿತಿದ್ದೆವು. ಎರಡನೆ ಅವಧಿ ಮುಗಿಯುತ್ತಿದ್ದಂತೆ ಕೆಲ ಸೀನಿಯರ್ಸ್, ಜೂನಿಯರ್ಸ್ ಯಾರೆಂದು ತಿಳಿದುಕೊಳ್ಳುವ ಕುತೂಹಲದಿಂದ ನಮ್ಮ ಕ್ಲಾಸ್ ರೂಂನತ್ತ ಲಗ್ಗೆ ಇಟ್ಟಿದ್ದರು.
Related Articles
Advertisement
ಇನ್ನು ತಡ ಮಾಡಬಾರದೆಂದು ಎಲ್ಲರೂ ಮಾತನಾಡಿ ಬೀಳ್ಕೊಡುಗೆ ಸಮಾರಂಭದ ದಿನಾಂಕವನ್ನು ನಿಗದಿಪಡಿಸಿದೆವು. ನಮಗೆ ಉಳಿದಿರುವುದು ಕೇವಲ ಮೂರು ದಿನ. ಹಾಗಾಗಿ ಎಲ್ಲರೂ ಒಂದೊಂದು ಕೆಲಸ ಹಂಚಿಕೆ ಮಾಡಿಕೊಂಡು ಹಿಂದಿನ ದಿನ ಸೀನಿಯರ್ಸ್‌ಗಳನ್ನು ಆಹ್ವಾನಿಸಿದೆವು.ಎಲ್ಲರ ಮನದಲ್ಲೂ ವಿದಾಯದ ನೋವು, ಹೊರಗೆ ಅನಿವಾರ್ಯದ ಮಂದಹಾಸ. ನೆಚ್ಚಿನ ಗುರುಗಳ ಮಾತು ಕೇಳಿ ಏನನ್ನಾದರೂ ಸಾಧಿಸಬೇಕೆಂದು ಛಲಕ್ಕೆ ಹನಿ ನೀರೆರೆದಂತಾಗಿತ್ತು. ವಿದಾಯದ ನೋವಿನಲ್ಲಿರುವ ಅವರನ್ನು ರಂಜಿಸಲು ಕೆಲವು ಯೋಜನೆಗಳನ್ನು ಮೊದಲೇ ಸಿದ್ಧ ಪಡಿಸಿದ್ದರಿಂದ ಅವರನ್ನು ಸ್ವಲ್ಪ ಮಟ್ಟಿಗಾದರೂ ನಗಿಸಿದೆವು. ಇನ್ನು ಕೊನೆಯ ಒಂದು ತಿಂಗಳು ಬಾಕಿ ಇರುವಾಗ ಸೀನಿಯರ್ಸ್ ಗಳೊಂದಿಗಿನ ಒಡನಾಟ ಮತ್ತಷ್ಟು ಹೆಚ್ಚಿತ್ತು. ಇಂಟರ್‌ನಲ್ಸ್ ಮುಗಿದು ಸೆಮ್ ನಮ್ಮ ಕಣ್ಣೆದುರಲ್ಲೆ ಇತ್ತು. ಡಿಪಾರ್ಟ್‌ಮೆಂಟ್‌ನಲ್ಲಿ ಮಾತನಾಡಿದ್ದು ಸಾಲದೆ ಕೆಲವೊಮ್ಮೆ ಸೀನಿಯರ್ಸ್ ಜತೆ ಕಾನ್ಫರೆನ್ಸ್ ಕಾಲ್ ಮಾಡಿಕೊಂಡು ಸಾಕಷ್ಟು ಹರಟುತ್ತಿದ್ದೆವು. ಸೆಮ್ ಎಕ್ಸಾಮ್ ಕೂಡಾ ಮುಗಿಯಿತು. ಕೆಲವರಿಗೆ ಹೈದರಬಾದ್‌ನಲ್ಲಿ ಉದ್ಯೋಗ ಲಭಿಸಿತ್ತು. ಇನ್ನು ಕೆಲ ವರು ಇಂಟೆನ್‌ಶಿಪ್‌ಗಾಗಿ ಬೆಂಗಳೂರಿಗೆ ಹೊರಡಲು ಸಿದ್ಧರಾಗಿದ್ದರು. ಅಂತೂ ಎರಡು ವರ್ಷಗಳ ಹಲವು ನೆನಪುಗಳಿಗೆ ಸಾಕ್ಷಿಯಾದ ಕ್ಯಾಂಪಸ್‌ನನ್ನು ಬಿಟ್ಟು ಹೋಗು ವಾಗ ನೋವು ಎದೆಗೆ ತಟ್ಟು ತಿತ್ತು. ಸುಂದರ ಕ್ಷಣಗಳಿಗೆ ಕಾರಣರಾದ ಸೀನಿಯರ್ಸ್‌ಗೆ ಮನದಾಳದ ವಿದಾಯ. ಮಿಸ್ ಯೂ ಸೀನಿಯರ್ಸ್. ಆಲ್ ದಿ ಬೆಸ್ಟ್.