ಜಗತ್ತಿನಲ್ಲಿ ಯಾವ ಸಾಧನೆಯು ಸುಮ್ಮನೆಯಾದದ್ದಲ್ಲ. ಎಷ್ಟೋ ದಿನಗಳ, ವರ್ಷಗಳ ಶ್ರಮ ಅದರಲ್ಲಿ ಅಡಕವಾಗಿರುತ್ತದೆ. ಮೊದಲ ಪ್ರಯತ್ನದಲ್ಲಿ ವಿಫಲವಾದೆವೆಂದು ಕೈ ಕಟ್ಟಿ ಕುಳಿತರೆ ಕಾಲ ಉರುಳಿ ಹೋಗುತ್ತದೆ.
ಆಯಸ್ಸು ಕಳೆದು ಹೋಗುತ್ತದೆ. ಸೋತ ಜಾಗದಲ್ಲೇ ಮತ್ತೆ ಪ್ರಯತ್ನಿಸಿದಾಗ ಮಾತ್ರ ಗೆಲುವಿಗೆ ದಾರಿ. ಒಂದು ಸಸಿಯನ್ನು ನೆಟ್ಟ ಮೇಲೆ ಅದು ಬೆಳೆದು ಎಲೆ, ಹೂ, ಕಾಯಿ, ಬಳಿಕ ಹಣ್ಣು ಬಿಡಲು ಸಮಯ ಬೇಕಲ್ಲವೆ? , ಅದಕ್ಕಾಗಿ ನಾವು ತಾಳ್ಮೆ ಮೀರದೆ ಕಾಯುವುದೇ ಸರಿಯಲ್ಲವೆ?
ಅಂತೆಯೇ, ಒಳ್ಳೆಯ ನಿರೀಕ್ಷೆಯ ಇಟ್ಟುಕೊಂಡು ಎಂದುಮನವನ್ನು ಕುಗ್ಗಿಸದೆ, ಕಾಲಬರಲೆಂದು ಕಾಯದೆ ಪುನಃ ಪ್ರಯತ್ನಸಿದರೆ ಎಂದೋ ಒಂದು ದಿನ ಫಲ ದೊರೆಯುವುದು ಖಂಡಿತ. ನಮ್ಮ ಎಷ್ಟೋ ದಿನಗಳ ಕನಸು ನನಸಾಗುವುದು ಖಚಿತ.
ಇದು ಸಾಧ್ಯವಾಗಲು ಎಲ್ಲದಕ್ಕಿಂತ ಮೊದಲು ನಾವು ಮನಸ್ಸು ಮಾಡುವುದು ಮುಖ್ಯ. ಇದೆ ಮುಂದಿನ ದೊಡ್ಡ ಸಾಧನೆಗೆ ಇಂದಿನ ಸಣ್ಣ ಹೆಜ್ಜೆಯನ್ನಾಗಿಸುವುದೇ ಪ್ರಾಮುಖ್ಯ. ಈ ಮೂಲಕ ಮತ್ತೆ ಮತ್ತೆ ಸೋತ ಜಾಗದಲ್ಲೇ ಗೆಲ್ಲಲು ಪ್ರಯತ್ನಿಸುವಂತೆ ನಮ್ಮ ಮನಸನ್ನು ಬದಲಾಯಿಸೋಣ ನಂತರ ಬದುಕನ್ನು ಹೊಸ ರೂಪದಲ್ಲಿ ಸುಂದರವಾಗಿ ಚಿತ್ರಿಸುವಲ್ಲಿ ಯಶಸ್ವಿಯಾಗೋಣ.
-ಪೂಜಾ ಹಂದ್ರಾಳ
ಶಿರಸಿ