Advertisement
ಮನುಜರಾಗಿ ಬುದ್ಧಿ ಜೀವಿಗಳಾಗಿ ನಾವು ಹುಟ್ಟಿ ಏನನ್ನಾದರೂ ಸೃಷ್ಟಿಸುವಂತಹ ಕಲೆ ಉಳ್ಳ ನಾವುಗಳು ಏನು ಬೇಕಾದರೂ ಸಾಧಿಸು ಛಲವುಳ್ಳ ಮಾನವರಾದ ನಾವೇ ಅನ್ಯಮಾರ್ಗವನ್ನು ಅನುಸರಿಸಿದರೆ ಏನು ಪ್ರಯೋಜನ. ಮನುಷ್ಯ ಜೀವಿಯ ವಿಶೇಷತೆ ಏನೆಂದರೆ ಅವನು ಮನಸ್ಸು ಮಾಡಿದರೆ ಏನನ್ನಾದರೂ ಸೃಷ್ಟಿಸಬಲ್ಲ,ಏನನ್ನಾದರೂ ಸಾಧಿಸಬಲ್ಲವನಾಗಿದ್ದಾನೆ.
Related Articles
Advertisement
ಆದ್ದರಿಂದ ನಾವು ಅಂದುಕೊಳ್ಳುವುದು ಬಹಳ ಸುಲಭ ಆದರೆ ಅದನ್ನು ಕಾರ್ಯಗತಗೊಳಿಸಬೇಕೆಂದರೆ ನಿಷ್ಕಲ್ಮಷವಾದ ಮನಸ್ಸು ದೃಢ ನಿರ್ಧಾರ, ಮುಖ್ಯವಾಗಿ ಇರಲೇ ಬೇಕಾಗುತ್ತದೆ. ನಮ್ಮಯ ಪ್ರಯತ್ನ ಹೇಗಿರಬೇಕೆಂದರೆ ನಮ್ಮನ್ನು ಕಂಡು ಹೀಯಾಳಿಸಿ ನಕ್ಕವರೆಲ್ಲಾ ನಮ್ಮನ್ನು ಗೌರವಿಸುವ ತರದಲಿ ಇರಬೇಕು. ಜೀವನ ಎಂದಮೇಲೆ ಸಮಸ್ಯೆಗಳು ಸಹಜ, ಆದರೆ ಸಮಸ್ಯೆ ಬಂತೆಂದು ಚಿಂತಿಸುತ್ತಾ ಕುಳಿತರೆ ಸಮಸ್ಯೆ ಬಗೆಹರಿಯುತ್ತದೆಯೇ ಇಲ್ಲ.
ಅದರ ಬದಲಿಗೆ ಆರೋಗ್ಯ ಹಾನಿಯಾಗುತ್ತದೆ ಮನಸ್ಸು ಒಡೆದ ಕನ್ನಡಿಯಂತಾಗುತ್ತದೆ.ಅದರಿಂದ ಮಾನಸಿಕವಾಗಿ ಹೆಚ್ಚಿನತೊಂದರೆಯೇ ಹೊರತು ಅದರಿಂದ ಲಾಭವೇನು ಕಾಣದಾಗುತ್ತದೆ. ಆದ್ದರಿಂದ ಜೀವನದಿ ಬಂದ ಸಮಸ್ಯೆಗೆ ಪರಿಹಾರ ಹುಡುಕುವ ಅದನ್ನು ಪರಿಹರಿಸುವ ಮನೋಭಾವ ನಮ್ಮಲ್ಲಿ ಬೆಳೆಯಬೇಕು,ನಾವು ನಿಶ್ಚಿಂತೆಯಿಂದ ಇದ್ದರೆ ಉತ್ತಮ ಮನಸ್ಥಿತಿ ಹೊಂದಿದ್ದರೆ ಹಾಗೂ ಅಛಲವಾದ ಆತ್ಮವಿಶ್ವಾಸವನ್ನು ಹೊಂದಿದ್ದಾಗ ಮಾತ್ರ ಎಲ್ಲ ಸಮಸ್ಯೆಗಳಿಗೂ ಪರಿಹಾರವನ್ನು ಕಂಡುಹಿಡಿದು ಜೀವನದ ಹಾದಿಯನ್ನು ಸುಗಮಗೊಳಿಸಕೊಳ್ಳಬಹುದು.
ಆದ್ದರಿಂದ ಏನಾದರೂ ಆಗಲಿ ನಾವು ಮಾಡುವ ಕೆಲಸದಲ್ಲಿ ನಮ್ಮ ಪ್ರಯತ್ನವನ್ನು ಬಿಡಬಾರದು.ಹನಿಹನಿಗೂಡಿದರೆ ಹಳ್ಳ, ತೆನೆತೆನೆಗೂಡಿದರೆ ಬಳ್ಳ ಎಂಬ ಮಾತಿನಂತೆ ಪ್ರತಿದಿನದ ಸಣ್ಣಸಣ್ಣ ಪ್ರಯತ್ನವೇ ಮುಂದಿನ ಉತ್ತಮ ಯಶಸ್ಸಿಗೆ ಕಾರಣವಾಗಬಲ್ಲದು.ಆದ್ದರಿಂದ ಪ್ರಯತ್ನವನ್ನು ಬಿಡಬಾರದು ಪ್ರಯತ್ನಂ ಸರ್ವತ್ರ ಸಾಧನಂ ಎಂಬ ಮಾತೇ ತಿಳಿಸುವಂತೆ ಪ್ರಯತ್ನ ಒಂದಿದ್ದರೆ ಏನಾದರೂ ಸಾಧಿಸಬಹುದು.
ಜೀವನದಲ್ಲಿ ಕಷ್ಟಗಳು ಬರುವುದು ನಮ್ಮಲ್ಲಿನ ಸಾಮರ್ಥ್ಯವನ್ನು ಹೊರಹಾಕುವುದಕ್ಕಾಗಿ ಎಂದು ಅರಿತು ನಮ್ಮ ಸಾಮರ್ಥ್ಯವನ್ನು ನಾವು ಅರಿತು ನಿರಂತರ ಪ್ರಯತ್ನದಿಂದ ಜೀವನದಿ ಮುಂದೆ ಸಾಗೋಣ. ಇಂದಿನ ಜನರ ಮನಸ್ಥಿತಿ ಹೇಗಾಗಿದೆ ಎಂದರೆ ಏನಾದರೂ ಒಂದು ಕೆಲಸವನ್ನು ಪ್ರಾರಂಭ ಮಾಡಿದರೆ (ವ್ಯಾಯಾಮವಾಗಲಿ, ಪರೀಕ್ಷೆಗೆ ಸಿದ್ಧತೆ ನಡೆಸುವುದಾಗಲಿ, ವಾಕಿಂಗ್, ಯೋಗ, ಬೇಗ ಏಳುವ ಅಭ್ಯಾಸ ಇತ್ಯಾದಿ) ಅದನ್ನು ಒಂದೆರಡು ದಿನವಷ್ಟೇ ಮಾಡಿ ನಂತರ ಮೊದಲ ಸ್ಥಿತಿಗೆ ಬಂದುಬಿಡುತ್ತಾರೆ.
ಇಲ್ಲ ಹಾಗಾಗಬಾರದು ನಮ್ಮ ಯೋಜನೆ ನಮ್ಮ ತಯಾರಿ ಎರಡು ದಿನಗಿಳಿಗಷ್ಟೇ ಮೀಸಲಾದ ತಯಾರಿಯಾಗಬಾರದು. ನಿತ್ಯ ನಿರಂತರ ಸಾಗಿ ನಾವು ಅಂದುಕೊಂಡ ಗುರಿಯನ್ನು ಸಾಧಿಸುವಂತದ್ದಾಗಬೇಕು.ಇದೆಲ್ಲ ಸಾಧ್ಯವಾಗಬೇಕು ಎಂದರೆ ನಮ್ಮ ಪ್ರಯತ್ನ ಉತ್ತಮವಾಗಿರಬೇಕು.ಉತ್ತಮ ಪ್ರಯತ್ನದೊಂದಿಗೆ ಸಾಗಿ ನಮ್ಮ ಜೀವನದ ಗುರಿಯ ಮುಟ್ಟೋಣ ಏನಂತೀರಾ…
-ಭಾಗ್ಯ ಜೆ.
ಬೋಗಾದಿ, ಮೈಸೂರು