Advertisement
ಬಾಲ್ಯ ಎಂಬುದು ಪ್ರತಿಯೊಬ್ಬರ ಜೀವನದ ಅಮೂಲ್ಯವಾದ ಮತ್ತು ಎಲ್ಲರ ಹೃದಯದಲ್ಲಿ ಅಚ್ಚಳಿಯದೆ ಉಳಿದಿರುವ ಸಿಹಿ ನೆನಪು. ಬಾಲ್ಯದಲ್ಲಿ ಸ್ನೇಹಿತರೊಂದಿಗಿನ ತರ್ಲೆ-ತುಂಟಾಟ, ಅಮ್ಮನ ಮಾತು ಕೇಳದೆ ಅವಳಿಂದ ಬಂದ ಬೈಗುಳದ ಮಾತುಗಳು, ಶಾಲೆಯನ್ನು ಬಿಟ್ಟು ಹೊರಗೆ ಹೊಗಿದ್ದು ಎಲ್ಲವು ಒಂದು ಸಿಹಿ ಕನಸಾಗಿ ಉಳಿದು ಬಿಟ್ಟಿದೆ. ಇವಾಗ ನಾವೆಲ್ಲರೂ ದೊಡ್ಡವರಾಗಿ ನಮ್ಮದೇ ಆದ ಜವಬ್ದಾರಿಯನ್ನು ನಿರ್ವಹಿಸುತ್ತ ನಮ್ಮ ಕನಸುಗಳನ್ನು ಸಾಕಾರಗೊಳಿಸುವತ್ತ ನಿರತರಾಗಿದ್ದೇವೆ.
Related Articles
Advertisement
ಆದರೆ ಇಂದು ನಾವೆಲ್ಲರೂ ಒಂದೆಡೆ ಸೇರಿದ್ದೇವೆ, ಹರಟೆ ಹೊಡೆಯೋಣ ಮಜಾ ಮಾಡುತ್ತಾ ನಾವು ಕಳೆದ ಬಾಲ್ಯದ ದಿನಗಳನ್ನು ಮೆಲುಕು ಹಾಕೋಣ. ಆ ದಿನಗಳಲ್ಲಿ ಎಲ್ಲ ಗೆಳೆಯರು ಸೇರಿ ಯಾವೂದೇ ಭೇದ-ಭಾವವಿಲ್ಲದೆ ವಿಜೃಂಭಣೆಯಿಂದ ಆಚರಿಸುತ್ತಿದ್ದ ಸ್ನೇಹಿತರ ದಿನ ನನಗೆ ಸದಾ ಕನಸಿಲ್ಲಿ ಕಾಡುತ್ತದೆ. ಆ ದಿನ ನಾವಿಲ್ಲ ಶುಭ್ರವಾದ ಹೊಸ ಬಟ್ಟೆ ತೊಟ್ಟು, ಹೊಳೆಯುತ್ತಿದ್ದ ಆ ಮುಗ್ಧ ಮನಸ್ಸುಗಳು ಈಗಲೂ ನನ್ನ ಕಣ್ಮುಂದೆ ಬರುತ್ತದೆ.
ಅಂಗೈಯಿಂದ ಮುಂಗೈವರೆಗೂ ಕಟ್ಟಿಸಿಕೊಂಡ ಫ್ರೆಂಡ್‌ಶಿಪ್ ಬ್ಯಾಂಡ್‌ಗಳು ನಮ್ಮ ಸ್ನೇಹದ ಬಂಧನವನ್ನು ಇನಷ್ಟು ಗಟ್ಟಿಗೊಳಿಸಿದವು. ಹೀಗೆ ನೆನೆಯುತ್ತಾ ಹೋದರೆ ಹಲವಾರು ಘಟನೆಗಳು ಕಣ್ಮುಂದೆ ಬರುತ್ತವೆ. ಆದರೆ ಒಂದು ಕಣ್ಣೊರೆಸುವ ಮತ್ತು ತಲೆ ಸವರುವ ಕೈಗಳು, ಬಿದ್ದಾಗ ಮೇಲೆತ್ತುವ ಭುಜಗಳು, ಉತ್ತೇಜಿಸುವ, ಸಂತೈಸುವ ಒಳ್ಳೆಯ ಮನಸ್ಸು ನಿಮ್ಮದು.
ಗೆಳೆಯ ಎದ್ದಾಗ ಸಂಭ್ರಮಿಸುವ, ದಾರಿ ತಪ್ಪಿದಾಗ ಕೈ ಹಿಡಿದು ತಿದ್ದುವ, ದೇಹ ಎರಡು, ಆತ್ಮವೊಂದೇ ಎಂಬಷ್ಟರ ಮಟ್ಟಿಗೆ ನಮ್ಮ ಸ್ನೇಹ ಇದು. ಜೀವನ ಅದೆಷ್ಟು ಸುಂದರ ಎಂಬ ಭಾವನೆಯನ್ನು ನಮಗೆ ಬೊಗಸೆಯಲ್ಲಿ ಕಟ್ಟಿಕೊಡುವ ನೆರಳು ಪಡೆದು ನೆರಳು ನೀಡುವ ಆ ಗೆಳೆತನದ ವೃಕ್ಷಗಳು ನಮ್ಮ ಸ್ನೇಹ. ಯಾರೇ ಬಂದರು ಯಾರೇ ಹೋದರು ಚಿರಕಾಲ ಹೀಗೆ ಇರಲಿ ನಮ್ಮ ಸ್ನೇಹ ಎಂದು ಆ ದೇವರಲ್ಲಿ ನಾನು ಬೇಡಿಕೊಳ್ಳುತ್ತೇನೆ.
- ಶೃತಿ ಬೆಳ್ಳುಂಡಗಿ
ವಿಜಯಪುರ (ಕನ್ನೂರ)