ಜಗತ್ತು ವಿಶಾಲವಾಗಿದ್ದು ಇಲ್ಲಿ ವಿಧವಿಧದ ಹೂಗಳಂತೆ, ಕಾಮನಬಿಲ್ಲಿನ ಬಣ್ಣದಂತೆ ವಿವಿಧ ರೀತಿಯ ಜನರಿದ್ದಾರೆ. ಎಲ್ಲರೂ ಒಂದು ರೀತಿಯ ಗೌರವಾರ್ಹ ವ್ಯಕ್ತಿಗಳಾಗಿದ್ದು, ವ್ಯಕ್ತಿಗಳ ಮುಖನೋಡಿ ಗೌರವ ನೀಡುವ ಬದಲು ಅವರಲ್ಲಿರುವ ಒಳ್ಳೆಯತನ ಹಾಗೂ ಸದ್ಗುಣ ಮತ್ತು ಜ್ಞಾನಕ್ಕೆ ಗೌರವ ನೀಡಬೇಕು. ನಮ್ಮನ್ನೆ ನಾವು ಅಂತಿಮ, ಶ್ರೇಷ್ಠವೆನ್ನುವ ಬದಲು ಇತರರಲ್ಲೂ ಆ ಭಾವನೆಯನ್ನು ಹುಡುಕುವ ಕೆಲಸ ಮಾಡದೆ ಅಹಂ ಪ್ರವೃತ್ತಿಯಲ್ಲಿ ಸಾಗುತ್ತಿದ್ದೇವೆ.
ಒಮ್ಮೆ ಒಬ್ಬ ಸಮಾಜ ಸುಧಾರಕರೊಬ್ಬರನ್ನು ಸಮ್ಮಾನಿಸುವ ಕಾರ್ಯಕ್ರಮ ನಡೆದಿತ್ತು. ಅಲ್ಲಿ ದೊಡ್ಡ ದೊಡ್ಡ ವ್ಯಕ್ತಿಗಳು ಆಗಮಿಸಿದ್ದರು. ಅಲ್ಲಿನ ದ್ವಾರಪಾಲಕ ಪ್ರತಿಯೊಬ್ಬರನ್ನು ಸೂಟು ,ಬೂಟು ಹಾಕಿದವರಿಗೆ ಸೆಲ್ಯೂಟ ಹೊಡೆದು ಒಳಗೆ ಕಳುಹಿಸುತಿದ್ದ ಅದೆ ಸಮಯದಲ್ಲಿ ಸಮ್ಮಾನಗೊಳ್ಳುವ ವ್ಯಕ್ತಿಯೆ ತನ್ನ ನಿತ್ಯದ ಕೊಳಕು ಬಟ್ಟೆಯಲ್ಲಿ ಆ ಸಮಾರಂಭಕ್ಕೆ ಆಗಮಿಸಿದ ಆ ದ್ವಾರಪಾಲಕ ಆತನನ್ನು ಒಳಕ್ಕೆ ಪ್ರವೇಶಿಸಲು ಬಿಡಲಿಲ್ಲ, ಕೆಲ ಹೊತ್ತಿನ ಬಳಿಕ ಅದೇ ವ್ಯಕ್ತಿ ಸೂಟುಬೂಟಿನೊಂದಿಗೆ ಬಂದಾಗ ದ್ವಾರಪಾಲಕ ಸೆಲ್ಯೂಟ ಹೊಡೆದು ಒಳಕ್ಕೆ ಕಳಿಸಿದ.
ಮುಂದೆ ಸಮಾರಂಭದಲ್ಲಿ ಆತ ನಡೆದ ಘಟನೆಯನ್ನು ತಿಳಿಸಿದಾಗ ದ್ವಾರಪಾಲಕನ ಅಹಂ ಇಳಿದಿತ್ತು. ವ್ಯಕ್ತಿಗಳನ್ನು ಬಟ್ಟೆಯಿಂದ ಅಳೆಯುವ ಬದಲು ಆತನಲ್ಲಿರುವ ಒಳ್ಳೆಯ ಮನಸ್ಸು ಮತ್ತು ಗುಣಕ್ಕೆ ಬೆಲೆಕೊಡಬೇಕು. ದೂರ ತಳ್ಳುವುದು ಕೀಳಾಗಿ ಕಾಣುವುದು ಮನುಷ್ಯರ ಲಕ್ಷಣವಲ್ಲ. ಆ ದಿಸೆಯಲ್ಲಿ ಇತರರನ್ನು ಗೌರವಿಸುತ್ತ ನಮ್ಮನ್ನು ನಾವು ಗೌರವಿಸಿಕೊಂಡು ಸಮಾಜಜೀವಿಗಳಾಗಿ ಬಾಳ್ಳೋಣ.
-ಶಂಕರಾನಂದ
ಹೆಬ್ಟಾಳ