ಆ್ಯಸಿಡ್ ದಾಳಿ, ಇದು ಅತಿಯಾದ ವಿಷಕಾರಿಯದ ದ್ರವವಾಗಿದೆ. ನೋಡಲು ನೀರಿನಂತಿದ್ದರು ಒಂದು ಹನಿಯಲ್ಲಿಯೂ ದೇಹಕ್ಕೆ ಹೆಚ್ಚಿನ ದುಷ್ಪರಿಣಾಮಕಾರಿಯಾಗಿದೆ. ಇತ್ತೀಚಿನ ದಿನಗಳಲ್ಲಿ ಅತೀ ಹೆಚ್ಚು ಆ್ಯಸಿಡ್ ಬಳಕೆಯಾಗುವುದನ್ನು ಕಾಣುತ್ತಿದ್ದೇವೆ. ಇದರಿಂದ ಹೆಣ್ಣುಮಕ್ಕಳ ಜೀವನದ ಮೇಲೆ ಕೆಟ್ಟ ಪರಿಣಾಮವನ್ನುಂಟು ಮಾಡುತ್ತದೆ. ಈ ರೀತಿ ಘಟನೆಗಳು ನಡೆಯಲು ಕಾರಣವೇನೆಂದರೆ? ಪ್ರೀತಿ ಎಂಬ ಎರಡು ಪದವನ್ನು ಬಳಸಿಕೊಂಡು ಹಿಂಸೆ, ಅನ್ಯಾಯ, ಕಿರಿಕಿರಿಯನ್ನು ಮಾಡುತ್ತಿದ್ದು ಅವರನ್ನು ಹಿಂಬಾಲಿಸಿಕೊಂಡು ಹೋಗುತ್ತಿದ್ದಾರೆ.
ಸಣ್ಣ ವಯಸ್ಸಿನಲ್ಲಿಯೇ ಪ್ರೀತಿ ಎಂಬ ಹುಚ್ಚು ತನ್ನ ಜೀವನವನ್ನೇ ಹಾಳು ಮಾಡಿಕೊಂಡು, ಇತರರ ಕುಟುಂಬದ ಹೆಣ್ಣುಮಕ್ಕಳ ಭವಿಷ್ಯವನ್ನು ಹಾಗೂ ಅವರ ಕನಸನ್ನು ಹಾಳುಮಾಡುತ್ತಿದೆ.
ನಮ್ಮ ಭಾರತದಲ್ಲೇ ಅತೀ ಹೆಚ್ಚು ಆ್ಯಸಿಡ್ ದಾಳಿಯು ನಡೆಯುತ್ತಿರುವುದನ್ನು ನಾವು ಕಾಣುತ್ತೇವೆ. ಇದು ಮುಖದ ಸೌಂದರ್ಯವನ್ನು ಕ್ಷಣಾರ್ಧದಲ್ಲಿ ಸುಟ್ಟುಹಾಕುತ್ತದೆ. ಹಾಗೆಯೇ ಇದನ್ನು ಯಾವುದೇ ಚಿಕಿತ್ಸೆಗಳಿಂದ ಗುಣಪಡಿಸಲು ಕಷ್ಟವಾದ ಮಾತಾಗಿದೆ.
ಇದರಿಂದ ಆಕೆಯ ಮನಸ್ಸಿನಲ್ಲಿ ತನ್ನ ಸೌಂದರ್ಯ ಹಾಳಾಯಿತು. ಸಮಾಜ ಏನು ಹೇಳಬಹುದು? ಎಷ್ಟು ಜನ ನಗಬಹುದು? ಎಂಬ ಪ್ರಶ್ನೆಗಳು ಅವರ ಜೀವನವನ್ನೆ ಸಾಯುವ ಸ್ಥಿತಿಗೆ ತರಬಹುದು. ಆ್ಯಸಿಡ್ ದಾಳಿಯಿಂದ ಅನೇಕ ಹೆಣ್ಣುಮಕ್ಕಳು ಆತ್ಮಹತ್ಯೆಯನ್ನು ಮಾಡಿದ್ದಾರೆ. ಅವರು ಕಂಡ ಕನಸನ್ನು ನನಸು ಮಾಡಲು ಆಗದೇ ಕತ್ತಲ ಕೋಣೆಯಲ್ಲಿ ಒಬ್ಬಂಟಿಯಾಗಿ ಕಣ್ಣೀರಿಡುತ್ತಿದ್ದಾರೆ.
ಈ ಸನ್ನಿವೇಶದಿಂದ ತನ್ನ ಮನೆಯವರಿಗೂ ನೆಮ್ಮದಿಯಿಂದ ಇರಲು ಆಗದೇ ನೋವಿನಲ್ಲಿದ್ದರು ಆಕೆಗೆ ಸ್ಫೂರ್ತಿದಾಯಕ ಮಾತುಗಳನ್ನು ಆಡುತ್ತಾರೆ. ಪ್ರೀತಿ-ಪ್ರಮಕ್ಕಾಗಿ ಯಾಕೆ ಆ್ಯಸಿಡ್ ದಾಳಿ ಮಾಡುತ್ತಿದ್ದೀರಿ? ಇದರಿಂದ ನಿಮಗೇನಾದರೂ ಉಪಯೋಗ ಅಥವಾ ಸಂತೋಷ ಸಿಗುತ್ತದೆಯಾ? ಆ್ಯಸಿಡ್ ದಾಳಿ ಮಾಡುವುದೇ ದೊಡ್ಡ ಅಪರಾಧ.
ಅದನ್ನು ಪ್ರಯೋಗಿಸುವ ಮೊದಲು ಅಂಥವರು ತಮ್ಮ ಹೆತ್ತ ತಾಯಿ ಮತ್ತು ಅಕ್ಕ-ತಂಗಿಯನ್ನು ನೆನಪಿಸಿಕೊಳ್ಳಿ ಆಗ ತಪ್ಪುಮಾಡುತ್ತಿದ್ದೇವೆ ಎಂದು ಮನಸ್ಸಿಗೆ ಅರಿಯಬಹುದು. ಹೆಣ್ಣಿಗೆ ಗೌರವ ನೀಡಿ. ದ್ವೇಷಿಸುವುದನ್ಮು ನಿಲ್ಲಿಸಿ. ಮೊದಲು ನಮ್ಮ ನಮ್ಮ ಜೀವನವನ್ನು ನಾವು ಪ್ರೀತಿಸಬೇಕು. ಅನ್ಯರಿಗೆ ಕೇಡನ್ನು ಬಯಸದೆ ಖುಷಿಯಿಂದ ಜೀವನ ಸಾಗಿಸಬೇಕು.
ನಮ್ಮನ್ನು ನಾವೇ ಪ್ರೀತಿಸುತ್ತಿಲ್ಲ ಎಂದ ಮೇಲೆ ಜಗತ್ತು ನಮ್ಮನ್ನು ಗೌರವಯುತವಾಗಿ ಕಾಣಬೇಕು ಎಂದು ಬಯಸುವುದಾದರೂ ಹೇಗೆ?, ಮೊದಲು ನಮಗೆ ಯಾವುದು ಈ ವಯಸ್ಸಿಗೆ ಅಗತ್ಯ, ಯಾವುದು ನಮಗೆ ಘನತೆ ನೀಡುತ್ತದೆ, ಜ್ಞಾನದ ಸಂಪತ್ತನ್ನು ವೃದ್ಧಿಸುತ್ತದೆ, ಯಾವುದು ನಮ್ಮ ಓದಿನ ಹಾದಿಗೆ ತೊಡಕಾಗಲಿದೆ ಎಂಬ ಅರಿವು ನಮಗೆ ಮೂಡುವುದು ಅತ್ಯವಶ್ಯಕವಾಗಿದೆ. ಹಾಗಾಗಿ ಇರುವ ಜೀವನವನ್ನು ಪ್ರೀತಿಸು ವುದನ್ನು ಎಲ್ಲರೂ ಕಲಿಯೋಣ.
ರಶ್ಮಿತಾ ಎನ್.
ಎಂ.ಪಿ.ಎಂ. ಕಾಲೇಜು ಕಾರ್ಕಳ