Advertisement
ಕಲಶ ಮಹೋತ್ಸವದ ಬಳಿಕ ಯಾವುದೇ ಕಳಿಯಾಟಗಳು, ದೈವಕಟ್ಟುಗಳು ನಡೆಯುವುದಿಲ್ಲ. ಮುಂದಿನ ತುಲಾ 10 ಬರುವ ತನಕ. ಆದರೆ ಈ ನಡುವೆಯೂ ಕೂಡ ಒಂದು ವಿಶಿಷ್ಟವಾದ ದೈವರಾಧನೆಯೊಂದು ನಡೆಯುತ್ತದೆ. ಆದರೆ ಇದು ವಯಸ್ಕರು ಕಟ್ಟಿ ಆಡುವ ದೈವಗಳಾಗಿರದೆ ಬಾಲಕರು ಕಟ್ಟುವ ದೈವವಾಗಿರುವುದು ವಿಶೇಷ.
Related Articles
Advertisement
ಆ ಕ್ಷಣದಲ್ಲಿ ಅರ್ಜುನ ಧ್ಯಾನದಿಂದ ಏಳುತ್ತಾನೆ. ಇತ್ತ ಶಿವನು ಬೇಡರೂಪದಾರಿಯಾಗಿ ಕಾಡು ಹಂದಿಯ ಮೇಲೆ ಬಾಣವನ್ನು ಪ್ರಯೋಗಿಸಿದ ಆ ಸಮಯದಲ್ಲೇ ಅರ್ಜುನನು ಕೂಡ ಬಾಣವನ್ನು ಪ್ರಯೋಗಿಸಿದ್ದ. ಇದೇ ಸಮಯ ಅರ್ಜುನ ಮತ್ತು ಬೇಡನ ನಡುವೆ ವಾಕ್ ಸಮರವೇ ನಡೆಯುತ್ತದೆ. ಅರ್ಜುನನು ತನ್ನ ಬಾಣದಿಂದ ಹಂದಿಯು ಮೃತಪಟ್ಟಿತೆಂದು ಹೇಳಿದರೆ ಇತ್ತ ಬೇಡನು ನನ್ನಿಂದ ಎನ್ನುತ್ತಾನೆ. ಹೀಗಿರುವಾಗ ಅಲ್ಲೇ ಇದ್ದ ಶಿವಮೂರ್ತಿಗೆ ಅಡಿಗೆರೆದ ಅರ್ಜುನನಿಗೆ ಸತ್ಯದರ್ಶನವಾಗುತ್ತದೆ.
ಕಣ್ಣನ್ನು ಮುಚ್ಚಿದ ಬೇಡರೂಪದಾರಿಯಾಗಿ ಬಂದವನು ಸಾಕ್ಷಾತ್ ಪರಮ ಶಿವನೇ ಆಗಿದ್ದಾನೆ. ಕಾಡು ಕೋಣದ ರೂಪದಲ್ಲಿ ದಂಪತಿ ಬಂದದ್ದು, ಹಂದಿಯನ್ನು ಕೊಂದದ್ದು ತಿಳಿಯುತ್ತದೆ.ಹಾಗೆ ಶಿವ ನಿಜ ರೂಪ ದಾರಿಯಾಗಿ ‘ಪಾಶು ಪಥಾಸ್ತಮ್ ‘ (ಪಾಶುಪತಾಸ್ತ್ರ) ಎಂಬ ಬಾಣವನ್ನು ವರದ ರೂಪದಲ್ಲಿ ನೀಡುತ್ತಾರೆ.
ಆದಿ ಮತ್ತು ವೇಡನ್ ತೆಯ್ಯಂಗಳನ್ನು 2 ವಿಭಿನ್ನ ಸಮುದಾಯದವರು ಕಟ್ಟುತ್ತಾರೆ. ವನ್ನಾಣ್ ಸಮುದಾಯದ ಮಕ್ಕಳು ಆದಿಯಾಗಿಯೂ, ಮಲಯ ಸಮುದಾಯದ ಮಕ್ಕಳು ಬೇಡನಾಗಿಯು ದೈವವನ್ನು ಕಟ್ಟುತ್ತಾರೆ. ಕರ್ಕಾಟಕ ಮಾಸದ 7ನೇ ತಾರೀಖೀನಿಂದ ಮಾಸ ಮುಗಿಯುವ ತನಕ ಗ್ರಾಮಗಳಲ್ಲಿ ಸಂಚರಿಸುತ್ತಾರೆ. ಈ ದೈವ ಸಿಂಹ ಮಾಸದಲ್ಲಿ ಬರುವ ಓಣಂ ಹಬ್ಬವು ಶುಭದಾಯಕವಾಗಲೆಂದು ಹರಸುತ್ತದೆ.
ಈ ದೈವಗಳಿಗೆ ಮನೆಯಲ್ಲಿ ಬೆಳೆದ ತರಕಾರಿ, ಧನ ಧಾನ್ಯವ ಸಲ್ಪ ನೀಡಿ,ಒಂದಿಷ್ಟು ಆಚಾರ ಕ್ರಮಗಳನ್ನು ಮಾಡಬೇಕಾಗುತ್ತದೆ. ಆ ದೈವದ ಪಾಡ್ದನದಲ್ಲಿ ಮನೆಗೆ ಬಂದಿರುವ ಮಾರಿ ಹೊಗಲಿ ಅರ್ಥಾತ್ ಸಾಂಕ್ರಾಮಿಕ ರೋಗ ಬರದಿರಲಿ ಬಂದರೆ ನಿವಾರಣೆಯಾಗಲಿ, ಎಂದಿರುತ್ತದೆ. ಹಿಂದಿನ ವೈಭವದ ಕ್ಷಣಗಳು ತುಸು ಕಡಿಮೆಯಾದಂತೆ ತೋರಿದರೂ, ಹಳೇ ಆಚರಣೆಗಳು ಇಂದೂ ಮಲಬಾರ್ ಭಾಗದಲ್ಲಿ ಜೀವಂತವಾಗಿದೆ.
-ಗಿರೀಶ್ ಪಿ.ಎಂ., ಕಾಸರಗೋಡು