Advertisement
ಈ ಭೂಮಿಯ ಮೇಲೆ ಯಾರು, ಯಾರಿಗೆ ಅಂತ ಮೇಲಿರುವ ಭಗವಂತ ಮೊದಲೇ ನಿರ್ಧರಿಸಿ ಬಿಡುತ್ತಾನೆ. ನಾವೇನಿದ್ದರೂ ಅವನ ಆಣತಿಯಂತೆ ನಡೆಯುತ್ತಿರುವುದು.
Related Articles
Advertisement
ಕೆಲವೊಮ್ಮೆ ಹೆಣ್ಣು ಮದುವೆಯಾದ ಮೇಲೆ ಸಣ್ಣ ಜಗಳಕ್ಕೂ ಒಂಟಿಯಾಗಿ ಬದುಕುವ ನಿರ್ಧಾರ ಮಾಡಿಬಿಡುತ್ತಾಳೆ. ಆದರೆ ಇದರ ಮಧ್ಯೆ ತಂದೆಯ ಪ್ರೀತಿಯಿಂದ ಮಕ್ಕಳು ವಂಚಿತರಾಗುದಿಲ್ಲವೇ ?
ಹಾಡಿನಲ್ಲಿ ಹೇಳಿರುವಂತೆ ಬಂಧು ಕೋಡಿಸೋ ಸೀರೆ ಬಣ್ಣ ಹೋಗೋ ವರೆಗೆ, ತಂದೆ ಕೋಡಿಸೋ ಸೀರೆ ಮದುವೆ ಆಗೋವರೆಗೆ, ಆದರೆ ಗಂಡ ಕೊಡಿಸೋ ಸೀರೆ ಹೆಣ್ಣಿನ ಕುಂಕುಮ ಇರುವ ವರೆಗೆ. ಧರಿಸುವ ಕಾಲುಂಗುರ, ಕರಿಮಣೆ ಉಂಗುರ ಇದೆಲ್ಲವೂ ಮದುವೆ ಆಗಿದೆ ಎನ್ನುವ ಸಂಕೇತವಾದರೆ, ಈ ಸಂಕೇತಗಳೆಲ್ಲವೂ ನಿನಗೆ ಬೇಕು ಆದರೆ ಈ ಸಂಕೇತಗಳಿಗೆ ಕಾರಣನಾದವನು ಮಾತ್ರ ಬೇಡವೆ?
ಗಂಡಿನ ಅವಶ್ಯಕತೆ ಇಲ್ಲದ ಬದುಕು ಹಿತ ಅನ್ನಿಸಬಹುದು ಕ್ರಮೇಣ ಅದು ಹೆಚ್ಚು ಪ್ರಿಯವಾಗಬಹುದು. ಆದರೆ ನೀನು ಜೀವನದಲ್ಲಿ ಕುಸಿದಾಗ ಧೈರ್ಯ ತುಂಬಿ ನಿನ್ನನ್ನು ಮೇಲೆತ್ತಲು ಗಂಡಿನ ಹೆಗಲು ಅಗತ್ಯ. ಯಾವುದೋ ಒಂದು ಸಣ್ಣ ವಿಚಾರದ ಜಗಳ ಗಂಡ ಹೆಂಡತಿಯ ಸಂಬಂಧವನ್ನೇ ಹಾಳುಮಾಡಿಬಿಡುತ್ತದೆ. ಇದಕ್ಕೆ ಒಬ್ಬರನ್ನೊಬ್ಬರು ಅರಿಯದ ಕಾರಣವೂ ಇರಬಹುದು.
ನಾನು ನೋಡಿದ ಮಟ್ಟಿಗೆ ಬಹುತೇಕರು ಮದುವೆ ಆಗಿಯೂ ಆಗದಂತೆ ಇರುತ್ತಾರೆ. ಗಂಡಿನ ಆಸರೆ ಇಲ್ಲದೆ ನಾನೊಬ್ಬಳೇ ಬದುಕುತ್ತೇನೆ, ಹೆಣ್ಣಿನ ಆಸರೆಯಿಲ್ಲದೇ ನಾನೊಬ್ಬನೇ ಬುದಕುತ್ತೇನೆ ಎನ್ನುವುದು ನಿನ್ನ ಆತ್ಮಸ್ಥೈರ್ಯವಾದರೆ, ಪರಂಪರಾನುಗತವಾಗಿ ಬಂದ ಸಂಸ್ಕೃತಿ ಏನು ಹೇಳುತ್ತದೆ?
ಒಟ್ಟಿನಲ್ಲಿ ಯಾವುದೇ ಹೆಣ್ಣಿಗೆ ಗಂಡನ, ಯಾವುದೇ ಗಂಡಿಗೆ ಹೆಂಡತಿಯ ಆಸರೆ ಮತ್ತು ಆಶ್ರಯ ಅವಶ್ಯಕ. ಹೆಂಡತಿ ಅರ್ಧಾಂಗಿ ಅಲ್ಲಾ, ಅವಳು ಪೂರ್ಣಾಂಗಿ ಎನ್ನುವಂತೆ, ಬದುಕಿನಲ್ಲಿ ಸಿಹಿ ಕಹಿ ಏನಾದರೂ ಪ್ರತಿ ಕ್ಷಣ ಜತೆಯಾಗಿರುವೆ ಎಂದಾಗ ಬದುಕು ಸುಂದರ.
-ಸುಜಯ ಶೆಟ್ಟಿ ಹಳ್ನಾಡು
ಡಾ| ಬಿ. ಬಿ. ಹೆಗ್ಡೆ ಕಾಲೇಜು ಕುಂದಾಪುರ