Advertisement

IPL: ಸನ್‌ ರೈಸರ್ಸ್‌ ಆದ ಡೆಕ್ಕನ್‌ ಚಾರ್ಜಸ್‌

01:20 PM May 29, 2024 | Team Udayavani |

ಐಪಿಎಲ್‌ ಎಂಬ ಭಾರತೀಯ ಕ್ರಿಕೆಟ್‌ ಹಬ್ಬ ಶುರುವಾಗಿದ್ದು 2008ರಲ್ಲಿ. ಈ ಹಬ್ಬ ಆರಂಭವಾದ ಮೊದಲ ಆವೃತ್ತಿಯಲ್ಲಿ ಒಟ್ಟು ಎಂಟು ತಂಡಗಳು ಚುಟುಕು ಸಮರಕ್ಕೆ ಕಣಕ್ಕಿಳಿದಿದ್ದವು. ಆ ತಂಡಗಳ ಪೈಕಿ ಡೆಕ್ಕನ್‌ ಚಾರ್ಜಸ್‌ ಸಹ ಒಂದು.

Advertisement

ನಮ್ಮಲ್ಲಿ ಐಪಿಎಲ್‌ ತಂಡಗಳೆಂದರೆ ಪ್ರಸ್ತುತ ಇರುವ ತಂಡಗಳಷ್ಟೇ ನೆನಪಿಗೆ ಬರುತ್ತವೆ. ಆದರೆ ಐಪಿಎಲ್‌ ಶುರುವಿನಲ್ಲಿ ಡೆಕ್ಕನ್‌ ಚಾರ್ಜಸ್‌ ಎಂಬ ತಂಡವೊಂದಿತ್ತು ಎಂಬುದು ಕೆಲವೇ ಕೆಲವು ಮಂದಿಗೆ ಮಾತ್ರ ಗೊತ್ತು. ಐಪಿಎಲ್‌ನ ಮ್ಯಾನೇಜ್ಮೆಂಟ್‌ ಸಹ ಡೆಕ್ಕನ್‌ ಚಾರ್ಜಸ್‌ ಹೆಚ್ಚು ಬಲಶಾಲಿಯಾದ ತಂಡ ಎಂದು ಹೇಳಿತ್ತು. ಹೀಗೆ ಕರೆಯಲ್ಪಡುತ್ತಿದ್ದ ಡೆಕ್ಕನ್‌ ಚಾರ್ಜಸ್‌ ಐಪಿಎಲ್‌ನಿಂದ ದೂರ ಸರಿಯಲು ಕಾರಣವೇನು ಎಂಬುದನ್ನು ನೋಡೋಣ.

ಡೆಕ್ಕನ್‌ ಚಾರ್ಜಸ್‌ ವಿಶ್ವದ ಶ್ರೇಷ್ಠ ಹಾಗೂ ಬಲಿಷ್ಠ ಆಟಗಾರರನ್ನೊಳಗೊಂಡ ತಂಡವಾಗಿತ್ತು. ತಂಡದ ಮೊದಲ ಕ್ಯಾಪ್ಟನ್‌ ಆಗಿ ವಿವಿಎಸ್‌ ಲಕ್ಷ್ಮಣ್‌ ನಾಯಕತ್ವವನ್ನು ವಹಿಸಿದ್ದರು. ಆಡಂ ಗಿಲ್‌ಕ್ರಿಸ್ಟ್ ಉಪ ನಾಯಕರಾಗಿದ್ದರು. ತಂಡದಲ್ಲಿ ಆಂಡ್ರ್ಯೂ ಸೈಮಂಡ್ಸ್, ಹರ್ಷಲ್‌ ಗಿಬ್ಸ್, ಶಾಹಿದ್‌ ಅಫ್ರಿದಿ, ರೋಹಿತ್‌ ಶರ್ಮಾ, ರುದ್ರ ಪ್ರತಾಪ್‌ ಸಿಂಗ್‌, ಸ್ಕಾಟ್‌ ಸ್ಟೈರಿಸ್‌, ಚಾಮಿಂದಾ ವಾಸ್‌, ನುವಾನ್‌ ಜೊಯಾÕ, ಪ್ರಗ್ಯಾನ್‌ ಓಜಾ, ಇದ್ದರು. ‌

ಐಪಿಎಲ್‌ನ ದ್ವಿತೀಯ ಆವೃತ್ತಿಯಲ್ಲಿಯೇ (2009) ಆರ್‌ಸಿಬಿ ತಂಡವನ್ನು ಫೈನಲ್‌ನಲ್ಲಿ ಸೋಲಿಸಿ ಕಪ್‌ ಗೆದ್ದಿತ್ತು. ಬಳಿಕ 2010ರಲ್ಲಿ ಸೆಮಿಫೈನಲ್‌ ತಲುಪಿ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ಸೋಲು ಅನುಭವಿಸಬೇಕಾಯಿತು. ಬಳಿಕ 2011 ಮತ್ತು 2012ರಲ್ಲಿ ಡೆಕ್ಕನ್‌ ಚಾರ್ಜಸ್‌ ತಂಡದ ನಾಯಕನಾದ ಕುಮಾರ್‌ ಸಂಗಕ್ಕಾರ್‌ ಯಶಸ್ಸು ಪಡೆಯಲಿಲ್ಲ.

ಡೆಕ್ಕನ್‌ ಚಾರ್ಜಸ್‌ ತಂಡವು ಡೆಕ್ಕನ್‌ ಕ್ರಾನಿಕಲ್‌ ಸಂಸ್ಥೆಯ ಒಡೆತನದಲ್ಲಿತ್ತು. 2012ರಲ್ಲಿ ಈ ಸಂಸ್ಥೆ ಆರ್ಥಿಕ ಮುಗ್ಗಟ್ಟಿನಲ್ಲಿ ಸಿಲುಕಿಕೊಂಡ ಕಾರಣ ಆಟಗಾರರ ಸಂಬಳವನ್ನು ನೀಡದ ಪರಿಸ್ಥಿತಿಗೆ ತಲುಪಿತು. ಈ ವೇಳೆ ಬಿಸಿಸಿಐ ತಂಡದ ಮಾಲಕರಿಗೆ ಆಟಗಾರರ ಸಂಬಳದ ಹಣವನ್ನು ಆಗಸ್ಟ್‌ 10ರೊಳಗೆ ನೀಡುವಂತೆ ನೋಟಿಸ್‌ ಜಾರಿಗೊಳಿಸಿತು. ತಪ್ಪಿದಲ್ಲಿ ಬಿಸಿಸಿಐನ ನಿಯಮಾವಳಿಗಳ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿತ್ತು.

Advertisement

ಆದರೆ ಡೆಕ್ಕನ್‌ ಚಾರ್ಜಸ್‌ ಫ್ರಾಂಚೈಸಿಯು ನಿಗದಿತ ಗಡುವಿನಲ್ಲಿ ಹಣ ಪಾವತಿಸಲಾಗದೆ ಆಗಸ್ಟ್‌ 14ರಂದು ತಂಡದ ಮಾಲಕರು ಹಾಗೂ ತಂಡದ ಚೇರ್ಮನ್‌ ಆಗಿದ್ದ ವೆಂಕಟ್ರಾಮ ರೆಡ್ಡಿ ಬಿಸಿಸಿಐ ಹಾಗೂ ಐಪಿಎಲ್‌ನ ಗೌರ್ನರ್‌ ಕೌನ್ಸಿಲ್‌ ಜತೆ ಮಹತ್ವದ ಮಾತುಕತೆ ನಡೆಸಿ ಗಡುವನ್ನು ಸೆಪ್ಟಂಬರ್‌ 15ರ ವರೆಗೆ ವಿಸ್ತರಣೆ ಮಾಡಲಾಯಿತು. ನಿಗದಿತ ಸಮಯಕ್ಕೆ ಹಣ ಪಾವತಿಸಲು ಡೆಕ್ಕನ್‌ ಕ್ರಾನಿಕಲ್‌ ಸಂಸ್ಥೆಯು ಎಸ್‌ ಬ್ಯಾಂಕ್‌ನ ಸಹಾಯ ಪಡೆದು ಹಣದ ಸಿದ್ಧತೆಯನ್ನು ಮಾಡಿಕೊಂಡಿತು.

ಆದರೆ ಬಿಸಿಸಿಐ ಗಡುವು ಮುಗಿಯುವುದಕ್ಕಿಂತ ಒಂದು ದಿನ ಮೊದಲೇ ಗುಪ್ತವಾದ ಸಭೆಯೊಂದನ್ನು ಏರ್ಪಡಿಸಿ ಡೆಕ್ಕನ್‌ ಚಾರ್ಜಸ್‌ ತಂಡವನ್ನು ಐಪಿಎಲ್‌ ನಿಂದ ಹೊರಗಿಡುವುದಾಗಿ ತೀರ್ಮಾನಿಸಿ ಆದೇಶ ನೀಡಿತು. ಇದರಿಂದ ಬಿಸಿಸಿಐ ವಿರುದ್ಧ ಡೆಕ್ಕನ್‌ ಕ್ರಾನಿ ಕಲ್‌ ಸಂಸ್ಥೆಯು ನ್ಯಾಯಾಲಯದ ಮೆಟ್ಟಿಲೇರಿತು. ವಿಚಾರಣೆಯ ಅನಂತರ ಬಾಂಬೆ ಹೈಕೋರ್ಟ್‌ ಬಿಸಿಸಿ

ಐಗೆ ಸುಮಾರು 4,800 ಕೋ. ರೂ. ದಂಡವನ್ನು ವಿಧಿ ಸುತ್ತದೆ. ಇದು 35 ಕೋ. ರೂ. ಗೆ ಇಳಿಕೆಯಾಯಿತು. ಬಳಿಕ ಡೆಕ್ಕನ್‌ ಕ್ರಾನಿಕಲ್‌ ಸಂಸ್ಥೆ ತನ್ನ ಫ್ರಾಂಚೈಸಿಯನ್ನು ಮಾರಾಟಕ್ಕಿಡುತ್ತದೆ. ಆಗ ಪಿಯುಪಿ ವೆಂಚರ್‌ ಲಿಮಿ ಟೆಡ್‌ ಹಾಗೂ ಸನ್‌ ನೆಟ್ವರ್ಕ್ ಎಂಬ ಕಂಪೆನಿಗಳು ಡೆಕ್ಕನ್‌ ತಂಡದ ಖರೀದಿಗೆ ಮುಂದೆ ಬರುತ್ತವೆ. ಕೊನೆಗೆ

ಡೆಕ್ಕನ್‌ ಚಾರ್ಜಸ್‌ ತಂಡ ಸನ್‌ ನೆಟ್ವರ್ಕ್ ಖರೀದಿ ಮಾಡುತ್ತದೆ. ಬಳಿಕ 2013ರಲ್ಲಿ ಡೆಕ್ಕನ್‌ ಚಾರ್ಜಸ್‌ ತಂಡ

ಸನ್‌ ರೈಸರ್ಸ್‌ ಹೈದರಾಬಾದ್‌ ಆಗಿ ಬದಲಾಗುತ್ತದೆ. ಕ್ಯಾಮ ರಾನ್‌ ವೈಟ್‌, ಶಿಖರ್‌ ಧವನ್‌ ಇದರ ನಾಯಕತ್ವವನ್ನು ವಹಿಸಿ ದರು. ಅನಂತರ ಡೇವಿಡ್‌ ವಾರ್ನರ್‌ ತಂಡದ ನಾಯಕತ್ವವನ್ನು ವಹಿಸಿಕೊಂಡು 2016ರಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ಫೈನಲ್‌ನಲ್ಲಿ ಆರ್‌ಸಿಬಿಯನ್ನು ಮಣಿಸಿ ಐಪಿಎಲ್‌ ಟ್ರೋಪಿಯನ್ನು ತನ್ನದಾಗಿಸಿಕೊಳ್ಳುತ್ತದೆ. ಪ್ರಸ್ತುತ ಪ್ಯಾಟ್‌ ಕಾಮಿನ್ಸ್‌ ತಂಡದ ನಾಯಕನಾಗಿದ್ದಾರೆ.

-ಸಂತೋಷ್‌ ಇರಕಸಂದ್ರ

ತುಮಕೂರು

Advertisement

Udayavani is now on Telegram. Click here to join our channel and stay updated with the latest news.

Next