Advertisement
ತಂದೆ ಮತ್ತು ಮಗನ ನಡುವಿನ ಬಾಂಧವ್ಯ, ಕುಟುಂಬದ ಬಾಂಧವ್ಯವನ್ನು ಇಷ್ಟಪಡುವವರು ಈ ಸಿನಿಮಾ ನೋಡಲೇಬೇಕು. ಅದೂ ಈಗ ಮುಂಗಾರು ಆರಂಭವಾಗಿದೆ. ಮಳೆ ಸುರಿಯ ತೊಡಗಿದೆ. ಈ ಹೊತ್ತಿನಲ್ಲಿ ಈ ಸಿನಿಮಾ ನೋಡಿದರೆ ಆಪ್ಪನ ಬೆಚ್ಚನೆಯ ಅಪ್ಪುಗೆ ಹಿತವೆನಿಸುತ್ತದೆ. ಸಿನಿಮಾದಲ್ಲಿ ಬಹಳ ಸರ್ಕಸ್ ಗಳಿಲ್ಲ.
Related Articles
Advertisement
ಆಪ್ಪನಿಗೆ ಮಗ ಬೆಳೆದಿದ್ದಾನೆ ಎನಿಸುತ್ತದೆ, ಮಗನಿಗೆ ಅಪ್ಪ ದಿ ಗ್ರೇಟ್ ಎನಿಸುತ್ತಾನೆ. ನಿರ್ದೇಶಕ ಅತ್ಯಂತ ನಾಜೂಕಿನಿಂದ ಕಥೆಯನ್ನು ದೃಶ್ಯಗಳಿಗೆ ಅಳವಡಿಸಿದ್ದಾನೆ. ಕೆಲವು ದೃಶ್ಯಗಳಂತೂ ಮನಸ್ಸಿಗೆ ತೀವ್ರವಾಗಿ ತಟ್ಟುತ್ತದೆ. ಭಾವುಕರನ್ನಾಗಿಸುತ್ತದೆ. ಕಣ್ಣುಗಳ ಅಂಚಿನಲ್ಲಿ ನೀರಿನ ಹನಿಗಳು ಬಂದು ನಿಲ್ಲುತ್ತವೆ. ಅಪ್ಪ ಮಕ್ಕಳ ಬಾಂಧವ್ಯ ಬಂಧವನ್ನು ನಿಖರವಾಗಿ ಕಟ್ಟಿಕೊಡುವ ಪ್ರಯತ್ನ ನಿರ್ದೇಶಕನದ್ದು. ಅದರಲ್ಲಿ ಯಶಸ್ವಿಯಾಗಿದ್ದಾನೆ. ಈ ಭಾವನೆಗಳ ಓಘಕ್ಕೆ ತಕ್ಕಂತೆ ದೃಶ್ಯಗಳ ಹಿನ್ನೆಲೆ, ಭೂದೃಶ್ಯವೂ ಚೆನ್ನಾಗಿ ಹೊಂದಿಸಲಾಗಿದೆ. ಇದರ ಸಿನಿಮಾದ ಛಾಯಾಗ್ರಹಣ ಮಾಡಿದ ಝಾವೊಲೆ ಗೂ (Zhao Lei) ಮೆಚ್ಚುಗೆ ಸಲ್ಲಲೇಬೇಕು.
ಸಿನಿಮಾ ಮುಗಿಸಿ ವೀಕ್ಷಿಸಿದ ಮೇಲೆ ನಮ್ಮ ಮನದೊಳಗೆ ಸಣ್ಣದೊಂದು ಭಾವನೆಯ ಮೋಡ ಆವರಿಸಿಕೊಳ್ಳುತ್ತದೆ. ಮೋಡ ಮೆಲ್ಲಗೆ ಹನಿಗಳಾಗುವ ಮಾದರಿ ನಿರ್ಮಾಣವಾಗುತ್ತದೆ. ಎರಡು ಕ್ಷಣದ ಮೌನ ಆಯಾಚಿತವಾಗಿ ಕಣ್ಣನ್ನು ಮುಚ್ಚಿ ಅನುಭವಿಸುವ ಸುಖ ತಂದುಕೊಡುತ್ತದೆ. ಎಲ್ಲರೂ ನೋಡಲೇಬೇಕಾದ ಚಿತ್ರ.
ಮಾಂಟ್ರಿಯಲ್ ವರ್ಲ್ಡ್ ಸಿನಿಮಾ ಉತ್ಸವದ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಈ ಸಿನಿಮಾಕ್ಕೆ ಸಂದಾಯವಾಗಿವೆ.
ಡ್ಯುಯಲ್
ಡ್ಯುಯಲ್ ಸಿನಿಮಾ ಬಹಳ ಸರಳ. ಅದರ ಕಥೆಯ ಎಳೆಯೂ ಅಷ್ಟೇ ಸರಳ, ಸೀದಾಸಾದ. ಈ ಚಿತ್ರ ರೂಪಿಸಿದ್ದು ಅಮೆರಿಕದ ಟೆಲಿವಿಷನ್ ಗೆ. 1973 ರಲ್ಲಿ. ಇದರ ನಿರ್ದೇಶಕ ಸ್ಟೀವನ್ ಸ್ಪಿಲ್ ಬರ್ಗ್. ಈಗ ಆ ಚಿತ್ರಕ್ಕೆ ಸರಿಯಾಗಿ 50ವರ್ಷ ಮುಗಿದು, 51 ನೇ ವರ್ಷದ ಸಂಭ್ರಮ. ಆದರೆ ಚಿತ್ರ ಈಗಲೂ ಮನಸ್ಸಿಗೆ ರಂಜನೆ ನೀಡುವಷ್ಟು ಸಮರ್ಥ.
ಸೇಲ್ಸ್ ಮ್ಯಾನ್ ಡೇವಿಡ್ ಕ್ಯಾಲೊಫೋರ್ನಿಯಾದ ಗ್ರಾಮೀಣ ಭಾಗದಲ್ಲಿರುವ ತನ್ನ ಗ್ರಾಹಕನೊಬ್ಬನನ್ನು ಭೇಟಿಯಾಗಲು ಕಾರಿನಲ್ಲಿ ಹೊರಡುತ್ತಾನೆ. ಒಂದಿಷ್ಟು ದೂರ ಕ್ರಮಿಸುವಾಗ ಕಾರಿನ ಕನ್ನಡಿಯಲ್ಲಿ ಟ್ರಕ್ಕೊಂದು ಹಿಂಬಾಲಿಸುತ್ತಿರುವಂತೆ ಭಾಸವಾಗುತ್ತದೆ. ಅದನ್ನು ಅಷ್ಟೊಂದು ಗಂಭೀರವಾಗಿ ತೆಗೆದುಕೊಳ್ಳದೇ ಅವನು ಕಾರು ಚಾಲನೆಯಲ್ಲಿ ಮುಳುಗುತ್ತಾನೆ. ಮತ್ತೂಂದಿಷ್ಟು ದೂರ ಹೋದ ಮೇಲೆ ಮತ್ತೆ ಕಾರಿನ ಕನ್ನಡಿಯಲ್ಲಿ ನೋಡುವಾಗ ಟ್ರಕ್ ಹಿಂಬಾಲಿಸುವುದು ದೃಢವಾಗುತ್ತದೆ. ಅಲ್ಲಿಂದ ಸಿನಿಮಾಕ್ಕೂ ವೇಗ ದೊರಕುತ್ತದೆ.
ವಾಸ್ತವವಾಗಿ 74 ನಿಮಿಷಗಳ ಸಿನಿಮಾ ವೀಕ್ಷಕರಾದ ನಮ್ಮನ್ನು ಕುತೂಹಲದ ತುತ್ತತುದಿಗೆ ತಂದು ನಿಲ್ಲಿಸುತ್ತದೆ. ಡೇವಿಡ್ ನೊಳಗೆ ಹುಟ್ಟಿಕೊಳ್ಳುವ ಉದ್ವೇಗ, ಆತಂಕ, ಅವ್ಯಕ್ತ ಭಯ ಎಲ್ಲವೂ ವೀಕ್ಷಕನ ಮುಖದ ಮೇಲೆ ತೋರುತ್ತದೆ. ಸಂಪೂರ್ಣ ಥ್ರಿಲ್ಲಿಂ-ಗ್ – ಮಕಾನುಭವ ನೀಡುವ ಚಿತ್ರದಲ್ಲಿಇಬ್ಬರೇ ಪಾತ್ರಧಾರಿಗಳು.
ಪಾತ್ರ ಒಂದು -ಡೇವಿಡ್ ಕಾರು.
ಎರಡನೆಯದು ಟ್ರಕ್.
ಎರಡೇ ಪಾತ್ರಗಳನ್ನು ನಿರ್ವಹಿಸಿದ ಬಗೆ ಅದ್ಭುತ. ಕಥೆಯಲ್ಲಿ ಇರುವ ಸಂಕೀರ್ಣತೆಯನ್ನು ಕತೆಯ ಬಿಗಿತ ಹೋಗದಂತೆ ಹೇಳಿದ ಬಗೆಯೂ ಅನನ್ಯ.
ಒಬ್ಬ ನಿರ್ದೇಶಕ ಪಾತ್ರಗಳನ್ನು ನಿರ್ವಹಿಸಬೇಕೋ ಅಥವಾ ಅದರೊಳಗೆ ಇರಬಹುದಾದ ಕಥೆಯನ್ನು ಹೇಳಬೇಕೋ ಎಂಬ ದ್ವಂದ್ವಕ್ಕೆ ಸಿಲುಕುವುದು ಉಂಟು. ಅದನ್ನು ಸ್ಪಷ್ಟವಾಗಿ ನಿಭಾಯಿಸಿದ್ದಾನೆ ನಿರ್ದೇಶಕ.
ಮನಸ್ಸಿಗೆ ಬೋರ್ ಆದರೆ ಈ ಸಿನಿಮಾ ನೋಡಬಹುದು.
-ಅಪ್ರಮೇಯ