Advertisement

ಡ್ರಾಪ್ ಬಾಕ್ಸ್‌ : ಹೆಡ್‌ಫೋನ್‌ಗಿಂತ ಒಳ್ಳೆಯ ಗೆಳೆಯನಿಲ್ಲ

09:27 PM May 30, 2020 | Hari Prasad |

ಸಂಗಾತಿಗಳ ಇನ್ನೊಂದು ಸಂಗತಿಯೆಂದರೆ ಹೆಡ್‌ಫೋನ್‌. ನಮ್ಮ ದೈನಂದಿನ ಜೀವನದಲ್ಲಿ ನಾವು ಗಮನಿಸುತ್ತಾ ಹೋದರೆ ಕಿವಿಗೆ ಹೆಡ್‌ಫೋನ್‌ ಹಾಕಿಕೊಂಡು ಅದೆಷ್ಟೋ ಮಂದಿ ಸಂಗೀತ ಸಂಭ್ರಮದಲ್ಲಿ ತೇಲುತ್ತಾರೆ.

Advertisement

ಇಂದಿನ ತಲೆಮಾರಿಗೆ ಇಯರ್‌ ಫೋನ್‌ ಎಂಬುದು ಜೀವನದ ಅವಿಭಾಜ್ಯ ಅಂಗವಾಗಿ ಬದಲಾಗಿದೆ.

ತಮ್ಮ ಕಷ್ಟ ಸುಖಗಳಿಗೆ ಅವುಗಳು ಕಿವಿಯಾಗುತ್ತಿದೆ. ನಾವು ಒಂಟಿಯಾಗಿದ್ದಾಗ ಇದರ ಅನಿವಾರ್ಯತೆ ನಮಗೆ ಕಾಡುತ್ತದೆ. ಪ್ರಯಾಣದ ಸಂದರ್ಭ, ಜೋರಾಗಿ ಮಳೆ ಬೀಳುತ್ತಿರುವ ವೇಳೆ ಕಿವಿಗೆ ಪುಟ್ಟ ಇಯರ್‌ ಫೋನ್‌ ಇಟ್ಟುಕೊಂಡು ಹಾಯಾಗಿ ಇದ್ದು ಬಿಡುತ್ತಾರೆ.

ಮೊದಲೆಲ್ಲ ಮಾರುದ್ದ ಅಳತೆಯ ಇಯರ್‌ ಫೋನ್‌ಗಳು ನಮ್ಮ ನಡುವೆ ಇದ್ದವು. ಆದರೆ ಇಂದು ಟ್ರೆಂಡ್‌ ಸಂಪೂರ್ಣ ಬದಲಾಗಿ ಬಿಟ್ಟಿದೆ. ವಯರ್‌ಗಳ ಗಾತ್ರ ಪುಟ್ಟದಾಯಿತು. ಬಳಿಕ ಬ್ಲೂಟೂತ್‌ ತಂತ್ರಜ್ಞಾನದಿಂದ ಕೆಲಸ ಮಾಡುವ ಇಯರ್‌ ಫೋನ್‌ಗಳು ಬಂದವು.

ಈ ವಯರ್‌ಲೆಸ್‌ ತಂತ್ರಜ್ಞಾನದ ಪರಿಚಯವಾದ ಬಳಿಕ ಹೆಚ್ಚು ಬಳಕೆಯಾಗಲು ಆರಂಭವಾದವು. ಯಾರಿಗೂ ಕಾಣದಂತೆ ಕಿವಿಯಲ್ಲಿ ಇರುತ್ತದೆ. ಇದರಿಂದ ಅವರು ಒಬ್ಬರೇ ಮಾತನಾಡಿಕೊಂಡು ಹೋಗುತ್ತಿದ್ದಾರೆ ಎಂದು ಆರಂಭದ ದಿನಗಳಲ್ಲಿ ಅನ್ನಿಸಿದ್ದಿದೆ.

Advertisement

ಆದರೆ ಇಂದು ಕಾಲ ಬದಲಾದಂತೆ ಎಲ್ಲರೂ ತಮ್ಮನ್ನು ಅಪ್‌ಡೇಟ್‌ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಇಂದು ನಾವೂ ವಯರ್‌ಲೆಸ್‌ ಇಯರ್‌ ಫೋನ್‌, ಹೆಡ್‌ಫೋನ್‌ಗಳನ್ನು ಬಳಸಿ ಮಾತನಾಡುತ್ತೇವೆ. ಅಂದು ಅವರು ಒಬ್ಬರೇ ಮಾತನಾಡಿಕೊಳ್ಳುತ್ತಿದ್ದಾರೆ ಎಂದ ನಾವೂ ಅವರದೇ ದಾರಿ ಕಂಡುಕೊಂಡಿದ್ದೇವೆ.

ಹಗಲು-ಇರುಳೆನ್ನದೆ ಇಯರ್‌ ಫೋನ್‌ ಮೊರೆ ಹೋದ ಬಹುತೇಕ ಯುವಕರು ರಾತ್ರಿ ನಿದ್ದೆಗೆಡುತ್ತಾರೆ. ಆರಂಭದಲ್ಲಿ ಹವ್ಯಾಸವಾಗಿದ್ದ ಹಾಡು ಕೇಳುವುದು ಬಳಿಕ ಅದು ಒಂದು ಮಾನಸಿಕತೆಯಾಗಿ ಬೆಳೆಯಿತು. ಮುಂಜಾನೆ ಎದ್ದ ಕೂಡಲೇ ನಿಮ್ಮ ಎದುರಿನವರ ಕಣ್ಣು ಅಥವಾ ನಿಮ್ಮ ಕಣ್ಣನ್ನು ನೀವು ಒಮ್ಮೆ ಕನ್ನಡಿಯಲ್ಲಿ ನೋಡಿಕೊಂಡರೆ ಸಾಕು. ಕಣ್ಣು ಎಷ್ಟು ಕೆಂಪಾಗಿದೆ ಎಂಬುದರ ಮೇಲೆ ಮೊಬೈಲ್‌ ಮತ್ತು ಹೆಡ್‌ ಪೋನ್‌ ಎಷ್ಟು ಕೆಲಸ ಮಾಡಿದೆ ಎಂಬುದನ್ನು ಅದು ತೋರಿಸುತ್ತದೆ.

ಲಾಲಿತ್ಯ, ಡಿಜೆ, ರ್ಯಾಪ್‌, ಚಲನ ಚಿತ್ರಗೀತೆ ಮೊದಲಾದ ಹತ್ತು ಹಲವು ವೈವಿಧ್ಯದ ಹಾಡುಗಳನ್ನು ಆಲಿಸುತ್ತಾ ಹೋಗುತ್ತಾರೆ. ಹಾಡಿನ ಜಾಡನ್ನು ಹಿಡಿಯಲು ಉಪಯೋಗಕ್ಕೆ ಬರುವ ಈ ಹೆಡ್‌ ಫೋನ್‌ನ ಬೆಲೆ 100 ರೂಪಾಯಿಯಿಂದ ಹಿಡಿದು ಒಂದು ಲಕ್ಷದ ವರೆಗೂ ಇದೆ. ಒಟ್ಟಾರೆಯಾಗಿ ಹೇಳುವುದಾದರೆ ಇಯರ್‌ ಫೋನ್‌ ನಮ್ಮ ಜೀವನದಲ್ಲಿ ಒಂದು ಗೆಳೆಯನ ಸ್ಥಾನವನ್ನು ತುಂಬುತ್ತದೆ.


– ಪ್ರಶಾಂತ್‌ಎಸ್‌. ಕೆಳಗೂರ್‌, ಎಸ್‌.ಡಿ.ಎಂ. ಕಾಲೇಜು, ಉಜಿರೆ

Advertisement

Udayavani is now on Telegram. Click here to join our channel and stay updated with the latest news.

Next