ಬಾಲ್ಯ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ? ಬಾಲ್ಯದ ದಿನಗಳನ್ನು ನೆನೆಸಿಕೊಂಡರೆ ಥಟ್ಟನೆ ಕಣ್ಣ ಮುಂದೆ ಬಂದುಬಿಡುತ್ತದೆ. ಬಾಲ್ಯದ ದಿನಗಳು ಎಷ್ಟು ಸುಂದರವಾಗಿತ್ತು. ಆ ದಿನಗಳಲ್ಲಿ ನಾವು ನಾವಾಗಿಯೇ ಇದ್ದ ಕ್ಷಣಗಳಿವು… ಬಾಲ್ಯವು ಸದಾ ಉಲ್ಲಾಸದಿಂದ ಕೂಡಿತ್ತು. ಅಲ್ಲಿ ಯಾವಾಗಲೂ ಪ್ರೀತಿ ಎಂಬ ಭಾವನೆಯು ನೆಲೆಸಿತ್ತು. ಅಜ್ಜ,ಅಜ್ಜಿ, ಅಪ್ಪ, ಅಮ್ಮ, ಮುಂತಾದವರು ಕೊಡುತ್ತಿದ್ದ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ .
ಶಾಲೆಗೆ ಹೋಗುವ ದಾರಿಯಲ್ಲಿ ಅಲ್ಲೇ ಹತ್ತಿರದಲ್ಲಿದ್ದ ಅಂಗಡಿಗಳಿಗೆ ಓಡೋಡಿ ಹೋಗಿ ರಾಶಿ ಚಾಕಲೇಟುಗಳನ್ನು ಬ್ಯಾಗಿಗೆ ತುಂಬಿಸಿ ದಾರಿಯಲ್ಲಿ ಹೋಗುವಾಗ ನಮ್ಮ ಗೆಳೆಯರು ಎಲ್ಲಿ ಚಾಕಲೇಟುಗಳನ್ನು ಕೇಳುತ್ತಾರೋ.. ಎಂಬ ಭಯದಲ್ಲಿ ಅರ್ಧ ಚಾಕಲೇಟುಗಳನ್ನು ದಾರಿಯಲ್ಲಿ ಹೋಗುತ್ತಾ ಇದ್ದಂತೆ ಖಾಲಿ ಮಾಡಿ ಹೋಗುತ್ತಿದ್ದೆವು.
ಅನಂತರ ಶಾಲೆಗೆ ತಲುಪಿದ ಮೇಲೆ ತರಗತಿ ಕೊನೆಗೆ ಹೋಗಿ ಬ್ಯಾಗ್ ಇಟ್ಟು ಗೆಳೆಯರ ಜತೆ ಸಮಯ ಕಳೆಯುತ್ತಿದ್ದೆವು. ಒಂದು ಲಾಂಗ್ ಬೆಲ್ ಆದ ಅನಂತರ ತರಗತಿಗಳು ಪ್ರಾರಂಭವಾಗುತ್ತಿದ್ದವು. ತರಗತಿಗಳು ಪ್ರಾರ್ಥನೆಯ ಮೂಲಕ ಪ್ರಾರಂಭವಾಗುತ್ತಿದ್ದವು. ಅನಂತರ ಕನ್ನಡ ಮೇಷ್ಟ್ರು ಪ್ರಶ್ನೆಯನ್ನು ಕೇಳುತ್ತೇನೆ ನೀವು ಹೇಳದಿದ್ದರೆ ನಾಗರ ಬೆತ್ತ ತರಿಸುತ್ತೇನೆ ಎಂದು ಹೇಳಿ ಪ್ರಶ್ನೆಯನ್ನು ಕೇಳಲು ಶುರು ಮಾಡಿದಾಗ ನನಗೆ ಎಲ್ಲಿ ಪ್ರಶ್ನೆ ಕೇಳುತ್ತಾರೆ ಎಂಬ ಭಯದಲ್ಲಿ ಅವರ ಮುಖವನ್ನು ನೋಡದೆ ಹೆದರಿಕೆಯಿಂದ ಬೆಂಚಿನ ಕೆಳಗೆ ತಲೆ ಬಗ್ಗಿಸಿ ಕುಳಿತುಕೊಳ್ಳುತ್ತಿದ್ದೆವು. ಒಂದು ವೇಳೆ ಪ್ರಶ್ನೆ ಕೇಳದಿದ್ದಾಗ ಹಬ್ಬ ನಾನು ಬದುಕಿದೆ ಎಂಬ ಸಂತೋಷದ ಭಾವನೆ ಕಾಡುತ್ತಿತ್ತು.
ಶಾಲೆ ಬಿಟ್ಟ ಅನಂತರ ಮನೆಗೆ ಹೋಗುವಾಗ ಅಮ್ಮ ಇವತ್ತು ಕೋಳಿ ಸಾರ ಮಾಡಿರುತ್ತಾರೆ ಎಂದು ಬೇಗ-ಬೇಗ ಓಡೋಡಿ ಹೋಗುತ್ತಿದ್ದೆವು. ಬ್ಯಾಗನ್ನು ಬಿಸಾಡಿ ಕೈಕಾಲುಗಳನ್ನು ತೊಳೆದು ಅಮ್ಮ ಮಾಡಿದ ಬಿಸಿ ಬಿಸಿ ಕೋಳಿಸಾರನ್ನು ಅನ್ನದೊಂದಿಗೆ ಸವಿಯುತ್ತಾ. ತಿನ್ನುತ್ತಿದ್ದ ಆ ಖುಷಿಯೇ ಬೇರೆ ಇತ್ತು.
ಶಾಲೆಗೆ ರಜೆ ಸಿಕ್ಕಿದ ಮೇಲೆ ಅಜ್ಜಿ ಮನೆಗೆ ಪ್ರಯಾಣ ಬೆಳೆಸುತ್ತಿದ್ದ ಆ ಕ್ಷಣಗಳು. ಈಗಲೂ ಬಾಲ್ಯವನು ನೆನೆಸಿಕೊಂಡರೆ ಮುಖದಲ್ಲಿ ನಗು ಮರುಕಳಿಸುತ್ತದೆ. ನಾವು ದೊಡ್ಡವರಾದಂತೆ ಹೋದಂತೆಲ್ಲಾ ಜವಾಬ್ದಾರಿಗಳು ನಮ್ಮ ಬೆನ್ನು ಹತ್ತಿಬಿಡುತ್ತದೆ.
ಆ ಸಂದರ್ಭದಲ್ಲಿ ಬಾಲ್ಯದ ನೆನಪುಗಳು ಎಷ್ಟೋ. ಸುಖವಾಗಿತ್ತು ಎಂಬ ಭಾವನೆ ಕಾಡುತ್ತದೆ. ಬಾಲ್ಯಯದಲ್ಲಿ ಇದ್ದ ಖುಷಿಯೂ ಯೌವನಕ್ಕೆ ಬಂದಾಗ ಮರೆಮಾಚಿ ಹೋಗುತ್ತದೆ. ಏನೇ ಆಗಲಿ ಬಾಲ್ಯದ ದಿನಗಳು ನಮ್ಮ ಜೀವನದಲ್ಲಿ ಕಳೆದ ಒಂದು ಒಳ್ಳೆಯ ಅದ್ಭುತವಾದ ಸುಂದರ ಕ್ಷಣಗಳು. ನಮ್ಮ ಬಾಲ್ಯದ ದಿನಗಳು ಈಗ ನಾವು ನೆನೆಯುತ್ತೇವೆ ಆದರೆ ಆದಿನಗಳನ್ನು ಈಗ ಮತ್ತೆ ಮರುಕಳಿಸಲು ಸಾಧ್ಯವಿಲ್ಲ. ಬಾಲ್ಯ ದಿನಗಳ ಆಟಿಕೆ, ಶೈಕ್ಷಣಿಕ ಪರಿಕರ ಸಂಗ್ರಹ ಮಾಡಿಟ್ಟು ಮತ್ತೆ ಬಾಲ್ಯ ಮೆಲುಕು ಹಾಕುವುದರಲ್ಲಿ ಒಂದು ವಿಧ ವಾದ ಖುಷಿ ಇದೆ ಎಂದು ಹೇಳಬಹುದು.
-ಮೌಲ್ಯ ಶೆಟ್ಟಿ
ಪುಂಜಾಲಕಟ್ಟೆ