ಕೃಷಿ ಮೂಲ ದೇಶವಾಗಿರುವ ನಮ್ಮಲ್ಲಿ ಕಾಂಕ್ರೀಟ್ ಹಾಗೂ ಡಾಂಬರು ರಸ್ತೆಗಳ ನಡುವಿನ ಅಲ್ಪ ಜಾಗದಲ್ಲೇ ತಲೆ ಎತ್ತಿರುವ ತಾರಸಿ ಮನೆಯ ಮೇಲ್ಛಾವಣಿಯಲ್ಲಿ ಸ್ವಲ್ಪಮಟ್ಟಿಗೆ ಕೃಷಿ ನಡೆಸುವ ಕೆಲಸ ಇತ್ತೀಚೆಗೆ ಜನಪ್ರಿಯವಾಗುತ್ತಿದೆ.
ಈ ತಾರಸಿ ಕೃಷಿಯನ್ನು ಯೋಜನಾ ಬದ್ಧವಾಗಿ ನಡೆಸಿದರೆ ಅದರಿಂದ ಹೆಚ್ಚಿನ ಫಸಲನ್ನು ಆದಾಯವನ್ನು ಗಳಿಸಬಹುದೆಂಬ ಹೆಚ್ಚಿನ ತಿಳುವಳಿಕೆ ಜನಕ್ಕಿಲ್ಲ. ತಾರಸಿ ಕೃಷಿಯ ಮೂಲಕ ಮನಸ್ಸನ್ನು ಹೆಚ್ಚು ಸಂತೋಷ ಆದಾಯಕವಾಗಿಯೂ ಆರೋಗ್ಯದಾಯಕವಾಗಿಯೂ ಇಡುವುದೇ ಒಂದು ಹೆಚ್ಚಿನ ಲಾಭ.
ಹೂವುಗಳು ಮತ್ತು ಸಸ್ಯಗಳು ನಿಮ್ಮ ಅಪಾರ್ಟ್‌ಮೆಂಟ್ ಅನ್ನು ಬೆಳಗಿಸಲು ಮತ್ತು ಮನೆಯ ಅಂದವನ್ನು ಹೆಚ್ಚು ಮಾಡಲು ಉತ್ತಮ ಮಾರ್ಗವಾಗಿದೆ. ಹೂವುಗಳು ನಿಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಗಾಳಿಯನ್ನು ಸ್ವತ್ಛಗೊಳಿಸಲು ಸಹಾಯ ಮಾಡಬಹುದು.
ಕೆಲವು ಹೂವುಗಳು ಸುವಾಸನೆಯಿಂದ ಕೂಡಿರುತ್ತವೆ, ಇತರ ಹೂವುಗಳು ಜೇನುನೊಣಗಳು ಮತ್ತು ಇತರ ಪರಾಗಸ್ಪರ್ಶಕಗಳನ್ನು ಆಕರ್ಷಿಸುತ್ತವೆ, ಮತ್ತು ಜೇನುನೊಣ ಅಥವಾ ಚಿಟ್ಟೆ ಮಕರಂದವನ್ನು ಹುಡುಕುತ್ತಿರುವಾಗ ಹೂವುಗಳ ಮೇಲೆ ಬೀಸುವುದನ್ನು ವೀಕ್ಷಿಸಲು ಇದು ಸುಂದರವಲ್ಲವೇ.
ತಾರಸಿ ಕೃಷಿ ಎಂದರೆ ಸಾಮಾನ್ಯ ವಾಗಿ ಸೊಪ್ಪು ತರಕಾರಿ ಹಣ್ಣು ಇದಿಷ್ಟು ಕಣ್ಣ ಮುಂದೆ ಬರುತ್ತದೆ. ಆದರೆ ಮರ ಸ್ವರೂಪದ ಗಿಡಗಳನ್ನು ಕೂಡ ಟೆರೆಸ್ ನಲ್ಲಿ ಬೆಳೆಯಲು ಸಾಧ್ಯವಿದೆ. ಪಾಟ್‌ನಲ್ಲಿ ಬೆಳೆಸಿದ ಹಲಸಿನ ಗಿಡಗಳು ನೆಲದಲ್ಲಿ ಬೆಳೆಸಿದ ಹಲಸಿನ ಮರದ ರೀತಿಯಲ್ಲಿ ಹಣ್ಣು ನೀಡಿದ ಉದಾಹರಣೆಗಳಿವೆ.
ಬೆಂಗಳೂರಿನ ಶಾಖಕ್ಕೆ ಏರ್ ಕೂಲರ್ ಇದ್ದರೂ ಬೆಳಗ್ಗೆ 3 ರವರೆಗೆ ನಿದ್ರೆ ಬಾರದ ಪರಿಸ್ಥಿತಿಯಲ್ಲಿರುವ ಜನರಿಗೆ ತಂಪುದಾಯಕ ವಾತಾವರಣ ಬೇಕೆಂದಲ್ಲಿ ತಾರಸಿನ ಮೇಲೆ ಗಿಡ ನೆಡಲೇಬೇಕು! ಸಿಲಿಕಾನ್ ಸಿಟಿಯಲ್ಲಿ ದಿನೇ ದಿನೇ ಹೆಚ್ಚಾಗುತ್ತಿರುವ ಬಿಸಿಲಿನ ಬೇಗೆಯಿಂದ ಮುಕ್ತಿ ಬೇಕಿದ್ದಲ್ಲಿ ಟೆರೆಸ್ ಮೇಲೆ ಗಾರ್ಡನ್ ನಿರ್ಮಾಣ ಮಾಡಬಹುದು.
ತಾರಸಿ ತೋಟವು ಮೇಲ್ಛಾವಣಿ ಅಥವಾ ಬಾಲ್ಕನಿಯನ್ನು ಹಸಿರು ಓಯಸಿಸ್ ಆಗಿ ಪರಿವರ್ತಿಸುತ್ತದೆ. ಪ್ರಕೃತಿಯನ್ನು ನಗರ ಪ್ರದೇಶಗಳಿಗೆ ತರಲು ಇದು ಪರಿಪೂರ್ಣ ಮಾರ್ಗವಾಗಿದೆ, ನಿಮ್ಮ ಮನೆಯ ಆಕರ್ಷಣೆಯನ್ನು ಹೆಚ್ಚಿಸುತ್ತದೆ. ದೊಡ್ಡದಾಗಿರಲಿ ಅಥವಾ ಚಿಕ್ಕದಾಗಿರಲಿ, ತಾರಸಿ ತೋಟಗಳು ಮನೆಯಲ್ಲಿಯೇ ಸಸ್ಯಗಳು ಮತ್ತು ತಾಜಾ ಗಾಳಿಯನ್ನು ಆನಂದಿಸಲು ಅವಕಾಶವನ್ನು ಒದಗಿಸುತ್ತದೆ.
ಟೆರೇಸ್ ಗಾರ್ಡನ್ ಅನ್ನು ಮಕ್ಕಳಿಗೆ ಆಕರ್ಷಕವಾಗಿಸಲು ಕೆಲವು ಸರಳ ವಿಧಾನಗಳು ಇಲ್ಲಿವೆ:
- ವರ್ಣರಂಜಿತ ಸಸ್ಯಗಳು ಮತ್ತು ಮಡಕೆಗಳು : ಪ್ರಕಾಶಮಾನವಾದ ಮತ್ತು ವರ್ಣರಂಜಿತ ಹೂವುಗಳು ಮತ್ತು ಮಡಕೆಗಳನ್ನು ಬಳಸಿ.
- ಮಿನಿ ಗಾರ್ಡನ್ ಏರಿಯಾ: ಮಕ್ಕಳು ಸ್ವಂತ ಸಣ್ಣ ವಿಭಾಗವನ್ನು ನೆಡಲು ಮತ್ತು ಆರೈಕೆ ಮಾಡಲು ಅವಕಾಶ ಮಾಡಿಕೊಡಿ.
- ಮಕ್ಕಳನ್ನು ಆಕರ್ಷಿಸಲು ಪಕ್ಷಿಗಳನ್ನ ನೇತುಹಾಕಿ.
- ಸಣ್ಣ ಸ್ಯಾಂಡಾºಕ್ಸ್ ಅಥವಾ ವಾಟರ್ ಪ್ಲೇ ಏರಿಯಾ ಸೇರಿಸಿ. ಈ ಆಲೋಚನೆಗಳು ಟೆರೇಸ್ ಗಾರ್ಡನ್ ಅನ್ನು ಮಕ್ಕಳಿಗೆ ಆಕರ್ಷಕವಾಗಿ ಮತ್ತು ವಿನೋದಮಯವಾಗಿ ಮಾಡಬಹುದು.
ತಾರಸಿ ಕೃಷಿಗೆ ಪ್ರಾರಂಭಿಕ ಸಿದ್ಧತೆ
1 ತಾರಸಿಯಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು.
2 ಸೂರ್ಯನ ಬೆಳಕು ಸರಿಯಾದ ರೀತಿಯಲ್ಲಿ ಬೀಳುವಂತಿರಬೇಕು.
3 “ನೀರಿನ ವ್ಯವಸ್ಥೆಗೆ ಮೊದಲ ಆದ್ಯತೆ ನೀಡಬೇಕು.
4 “ನೀರು ಶೇಖರಣೆಯಾಗದೆ ತಾರಸಿಯಲ್ಲಿ ಸರಾಗವಾಗಿ ಹರಿದು ಹೋಗುವಂತ ವ್ಯವಸ್ಥೆ ಇರಬೇಕು.
5 “ಒಂದು ವೇಳೆ ನೀರು ನಿಲ್ಲುವಂತೆ ಅಥವಾ ಸೋರಿಕೆ ಸಾಧ್ಯತೆ ಇದ್ದರೆ ಟಾರ್ಪಲ್ ಸಿಗುತ್ತದೆ ಅದನ್ನು ತರಿಸಿನ ಮೇಲೆ ಹಾಕಿ ನಂತರ ಅದರ ಮೇಲೆ ಗಿಡ ನೆಡಲು ಬೇಕಾದ ವ್ಯವಸ್ಥೆ ಮಾಡಬಹುದು ಇದರಿಂದ ನೀರು ನೇರವಾಗಿ ತಾರಸಿಗೆ ತಲುಪುವುದು ತಪ್ಪುತ್ತದೆ.
6 “ಮಳೆಗಾಲದಲ್ಲಿ ಮಾತ್ರ ಕೃಷಿ ಮಾಡ ಬಯಸುವವರು ಗೋಣಿಚೀಲವನ್ನು ಸಹ ಬಳಸಬಹುದು.
7 “ಪಾಟ್, ಉದ್ದ ಚಟ್ಟಿ, ಉದ್ದನೆಯ ಬಾಕ್ಸ್ ಮಾದರಿಯ ಚಟ್ಟಿ, ಡಬ್ಬಿ, ಪ್ಲಾಸ್ಟಿಕ್ ಬಾಕ್ಸ್, ಪ್ಲಾಸ್ಟಿಕ್ ಬ್ಯಾಗ್, ಬಾಟಲ್ , ಮಾರುಕಟ್ಟೆ ಗಾರ್ಡನಿಂಗ್ ಪ್ಲಾಸ್ಟಿಕ್ ಬ್ಯಾಗ್ಗಳು ಲಭ್ಯವಿದೆ.
8 “ತಾರಸಿ ಮೇಲೆ ಪಾಲಿಹೌಸ್ ಹಾಕುವ ಮೂಲಕ ಕೃಷಿ ಮಾಡುವುದು ಮತ್ತೂಂದು ಬಗ್ಗೆ.