Advertisement
ಕಾರ್ಮಿಕರಿಗೆ ಹೊರಬರುವ ಮಾರ್ಗವನ್ನು ನಿರ್ಮಿಸಬೇಕೆಂದರೆ ಬೆಟ್ಟದ ಮೇಲಿನಿಂದ ಲಂಬವಾಗಿ ಒಟ್ಟು 86 ಮೀಟರ್(1.2 ಮೀಟರ್ ವ್ಯಾಸದ ಪೈಪ್ ) ಕೊರೆಯಬೇಕಾಗುತ್ತದೆ. ಭಾನುವಾರವೇ ಈ ಪ್ರಕ್ರಿಯೆ ಆರಂಭವಾಗಿದ್ದು, ಸೋಮವಾರ ಸಂಜೆ ವೇಳೆಗೆ 31 ಮೀ.ಗಳಷ್ಟು ಕೊರೆಯಲಾಗಿದೆ.
6 ಮಂದಿ ರ್ಯಾಟ್ ಹೋಲ್ ಮೈನರ್‌ಗಳ ತಂಡವು ಸೋಮವಾರ ಸ್ಥಳಕ್ಕೆ ಆಗಮಿಸಿದೆ. ಈ ತಂಡದ ಪ್ರತಿ ಸದಸ್ಯನು ಒಂದು ಬಾರಿಗೆ ಒಬ್ಬನಂತೆ ಸುರಂಗದ ಅವಶೇಷಗಳ ಒಳಗೆ ತೂರಿಸಲಾಗಿರುವ 800 ಎಂಎಂ ವ್ಯಾಸದ ಪೈಪ್‌ನೊಳಕ್ಕೆ ಹೋಗಿ, ಸಲಿಕೆಯ ಮೂಲಕ ಕೈಯಿಂದಲೇ ಅಗೆಯಲಿದ್ದಾರೆ. ಇದು ಅತ್ಯಂತ ನಿಧಾನ ಹಾಗೂ ಕಷ್ಟಕರ ಕೆಲಸವಾಗಿದ್ದರೂ, ಕಾರ್ಮಿಕರನ್ನು ತಲುಪಲು ಕೇವಲ 10-12 ಮೀಟರ್ ದೂರವಿರುವ ಕಾರಣ, ಇದುವೇ ಸದ್ಯಕ್ಕಿರುವ ಉತ್ತಮ ಆಯ್ಕೆ ಎಂದು ತಜ್ಞರು ತಿಳಿಸಿದ್ದಾರೆ.
Related Articles
ಸುರಂಗ ಕೊರೆಯುವ ಪ್ರಕ್ರಿಯೆಯ ಮಧ್ಯೆಯೇ ಒಳಗೆ ಸಿಲುಕಿರುವ 41 ಕಾರ್ಮಿಕರು ಮಾನಸಿಕವಾಗಿ ಕುಗ್ಗದಂತೆ ನೋಡಿಕೊಳ್ಳುವ ಕೆಲಸವನ್ನೂ ಮಾಡಲಾಗುತ್ತಿದೆ. ವೈದ್ಯರು, ಮನಶಾÏಸ್ತ್ರಜ್ಞರು ಸೇರಿದಂತೆ ತಜ್ಞರ ತಂಡವು ದಿನಕ್ಕೆ 2 ಬಾರಿ(ಬೆಳಗ್ಗೆ 9ರಿಂದ 11 ಮತ್ತು ಸಂಜೆ 5ರಿಂದ 8) ಕಾರ್ಮಿಕರೊಂದಿಗೆ ಮಾತುಕತೆ ನಡೆಸುತ್ತಿದೆ. ಯಾವ ಕಾರಣಕ್ಕೂ ಧೈರ್ಯಗೆಡದಂತೆ, “ನಾವು ನಿಮ್ಮೊಂದಿಗಿದ್ದೇವೆ’ ಎಂದು ಹುರಿದುಂಬಿಸಲಾಗುತ್ತಿದೆ. ಕುಟುಂಬ ಸದಸ್ಯರೊಂದಿಗೆ ಮಾತುಕತೆ ನಡೆಸಲೂ ಅವಕಾಶ ಕಲ್ಪಿಸಲಾಗುತ್ತಿದೆ. ಕಾರ್ಮಿಕರ ಮನದಲ್ಲಿ ಭಯ, ಆತಂಕ, ನಕಾರಾತ್ಮಕ ಯೋಚನೆಗಳು ಬಾರದಂತೆ ನೋಡಿಕೊಳ್ಳಲಾಗುತ್ತಿದೆ ಎಂದು ವೈದ್ಯಕೀಯ ತಂಡದ ನೋಡಲ್ ಅಧಿಕಾರಿ ಡಾ. ಬಿಮಲೇಶ್ ಜೋಷಿ ಹೇಳಿದ್ದಾರೆ.
Advertisement