Advertisement

Uttarkashi: ಕೈಯಿಂದಲೇ ಕೊರೆಯಲು ಮುಂದಾದ ತಂಡ, ಕ್ರಿಸ್ಮಸ್ ವೇಳೆಗೆ ಕಾರ್ಮಿಕರ ರಕ್ಷಣೆ…?

10:51 AM Nov 26, 2023 | Team Udayavani |

ಉತ್ತರಕಾಶಿ: ಸಿಲ್ಕ್ಯಾರಾ ಸುರಂಗದಲ್ಲಿ ರಕ್ಷಣಾ ಕಾರ್ಯಾಚರಣೆಗೆ ಅಡೆತಡೆಗಳು ಎದುರಾದ ನಂತರ, ಒತ್ತಡವನ್ನು ಕಡಿಮೆ ಮಾಡಲು ಇಲ್ಲಿನ ಅಧಿಕಾರಿಗಳು ಒಳಗೆ ಸಿಕ್ಕಿಬಿದ್ದ 41 ಕಾರ್ಮಿಕರಿಗೆ ಮೊಬೈಲ್ ಫೋನ್ ಮತ್ತು ಕ್ಯಾರಮ್ ಬೋರ್ಡ್ ಗೇಮ್‌ಗಳನ್ನು ನೀಡಿದ್ದಾರೆ ಎಂದು ಅಧಿಕಾರಿಯೊಬ್ಬರು ಶನಿವಾರ ಮಾಹಿತಿ ನೀಡಿದ್ದಾರೆ.

Advertisement

ಸಿಲ್ಕ್ಯಾರಾದಲ್ಲಿ ನಿರ್ಮಾಣ ಹಂತದಲ್ಲಿರುವ ಸುರಂಗದಲ್ಲಿ ಕೊರೆಯಲು ಬಳಸಲಾಗಿದ್ದ ಆಗರ್ ಯಂತ್ರದ ಬ್ಲೇಡ್ ಅವಶೇಷಗಳಲ್ಲಿ ಸಿಲುಕಿದ್ದರಿಂದ ಕಾಮಗಾರಿಗೆ ಅಡ್ಡಿಯುಂಟಾಗಿದ್ದು, ಕಾರ್ಮಿಕರನ್ನು ಸ್ಥಳಾಂತರಿಸಲು ಇನ್ನೂ ಹಲವು ದಿನಗಳು ಬೇಕಾಗಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.

ಕಳೆದ 15 ದಿನಗಳಿಂದ 41 ಕಾರ್ಮಿಕರು ಸಿಕ್ಕಿಬಿದ್ದಿರುವ ಉತ್ತರಾಖಂಡದ ಉತ್ತರಕಾಶಿಯಲ್ಲಿ ಕುಸಿದ ಸುರಂಗದಲ್ಲಿ ಕೈಯಿಂದ ಕೊರೆಯುವ ಕೆಲಸ ಭಾನುವಾರ ಪ್ರಾರಂಭವಾಗುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕೈಯಿಂದಲೇ ಕೊರೆಯಲು ಮುಂದಾದರೆ ಕಾರ್ಯಾಚರಣೆ ವಿಳಂಬವಾಗಲಿದ್ದು ಹೆಚ್ಚು ಸಮಯ ತೆಗೆದುಕೊಳ್ಳುವುದರಿಂದ ಮುಂದಿನ ತಿಂಗಳು ಕ್ರಿಸ್ಮಸ್ ವೇಳೆಗೆ ಕಾರ್ಮಿಕರನ್ನು ರಕ್ಷಣೆ ಮಾಡಿ ಹೊರತೆಗೆಯುವ ಕೆಲಸ ನಡೆಯಲಿದೆ ಎಂದು ಹೇಳಲಾಗಿದೆ. ಈ ನಡುವೆ ಮೇಲಿನಿಂದ ಕೊರೆಯುವ ಸಾಹಸಕ್ಕೂ ರಕ್ಷಣಾ ತಂಡ ಕೆಲಸ ಮಾಡುತ್ತಿದ್ದು ಯಾವುದು ಯಶಸ್ಸು ಸಿಗಲಿದೆ ಎಂಬುದು ಅಧಿಕಾರಿಗಳಿಗೂ ಪ್ರಶ್ನೆಯಾಗಿ ಉಳಿದಿದೆ.

ಸುರಂಗದ ಒಳಗೆ ಸಿಲುಕಿರುವ ಕಾರ್ಮಿಕರ ಮನಸ್ಥಿತಿ ಹತೋಟಿಗೆ ತರಲು ಸುರಂಗದೊಳಗೆ ಸಿಲುಕಿರುವ ಕಾರ್ಮಿಕರಿಗೆ ಮೊಬೈಲ್ ಫೋನ್, ಲೂಡೋ ಗೇಮ್ಸ್ ಆಡಲು ಬೋರ್ಡ್ ಕಳುಹಿಸಿ ಕೊಟ್ಟಿದ್ದಾರೆ ಇದರಿಂದ ಕಾರ್ಮಿಕರು ಮಾನಸಿಕವಾಗಿ ಸ್ತಿಮಿತದಲ್ಲಿರಲು ಸಹಕಾರಿಯಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Advertisement

ರಕ್ಷಣಾ ಕಾರ್ಯಾಚರಣೆ ವಿಳಂಬವಾದ ಹಿನ್ನೆಲೆಯಲ್ಲಿ ಕಾರ್ಮಿಕರು ಕುಗ್ಗದಂತೆ ಈ ನಿರ್ಧಾರಕ್ಕೆ ಬಂದಿದ್ದು, ಒಂದೆಡೆ ಕಾರ್ಯಾಚರಣೆ ಮುಂದುವರೆಸಲು ಬೇಕಾದ ವ್ಯವಸ್ಥೆಗಳನ್ನು ಮಾಡಿಕೊಳ್ಳುತ್ತಿದ್ದು ಇನ್ನೊಂದೆಡೆ ಕಾರ್ಮಿಕರ ಸುರಕ್ಷತೆಯ ದೃಷ್ಟಿಯಿಂದ ಅವರ ಮಾನಸಿಕ ನೆಮ್ಮದಿಗೆ ಬೇಕಾದ ಮೂಲಭೂತ ಸೌಲಭ್ಯವನ್ನು ಒದಗಿಸುವತ್ತ ಅಧಿಕಾರಿಗಳು ಗಮನಹರಿಸಿದ್ದಾರೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next