Advertisement

Uttarkashi; ಸುರಂಗ ಕಾರ್ಮಿಕರನ್ನು ರಕ್ಷಿಸುವ ಸಂಪೂರ್ಣ ಭರವಸೆ ಇದೆ: ವಿ.ಕೆ. ಸಿಂಗ್

05:55 PM Nov 16, 2023 | Team Udayavani |

ಉತ್ತರಕಾಶಿ (ಉತ್ತರಾಖಂಡ): ಇಲ್ಲಿನ ಸಿಲ್ಕ್ಯಾರಾದಲ್ಲಿ ನಿರ್ಮಾಣ ಹಂತದಲ್ಲಿರುವ ಸುರಂಗದಲ್ಲಿ ಸಿಲುಕಿರುವ 40 ಕಾರ್ಮಿಕರನ್ನು ಹೊರ ತರುವ ರಕ್ಷಣಾ ಕಾರ್ಯಾಚರಣೆ ಐದನೇ ದಿನವೂ ಮುಂದುವರೆದಿದ್ದು,ಸ್ಥಳ ಪರಿಶೀಲನೆಗಾಗಿ ಕೇಂದ್ರ ಸಚಿವ ಜನರಲ್ (ನಿವೃತ್ತ) ವಿ.ಕೆ. ಸಿಂಗ್ ಆಗಮಿಸಿದ್ದಾರೆ.

Advertisement

“ಪಾರುಗಾಣಿಕಾ ಕಾರ್ಯಾಚರಣೆ ನಡೆಯುತ್ತಿದೆ. ನಮಗೆ ಕಾರ್ಮಿಕರನ್ನು ರಕ್ಷಿಸುವ ಸಂಪೂರ್ಣ ಭರವಸೆ ಇದೆ. ನಾವು ನಮ್ಮ ಕೈಲಾದಷ್ಟು ಪ್ರಯತ್ನಿಸುತ್ತಿದ್ದೇವೆ” ಎಂದು ವಿ.ಕೆ. ಸಿಂಗ್ ಅವರು ಸುದ್ದಿ ಸಂಸ್ಥೆ ANI ಗೆ ಹೇಳಿಕೆ ನೀಡಿದರು.

ಅವಶೇಷಗಳ ಮೂಲಕ ಅಗೆಯುವ ಮತ್ತು ಜನರನ್ನು ರಕ್ಷಿಸುವ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಆಗರ್ ಡ್ರಿಲ್ಲಿಂಗ್ ಯಂತ್ರ ಕಾರ್ಯನಿರ್ವಹಿಸಲು ಪ್ರಾರಂಭಿಸಿದೆ.

ರಕ್ಷಣ ಕಾರ್ಯಕರ್ತರು ನಿರಂತರ ಸಂವಹನದ ಮೂಲಕ ಸಿಲುಕಿಕೊಂಡಿರುವ ಕಾರ್ಮಿಕರ ಮಾನಸಿಕ ಆರೋಗ್ಯದ ಮೇಲೆ ನಿಗಾ ಇಡುತ್ತಿದ್ದಾರೆ.

24 ಟನ್ ತೂಕದ ಅತ್ಯಾಧುನಿಕ ಕಾರ್ಯಕ್ಷಮತೆಯ ಆಗರ್ ಡ್ರಿಲ್ಲಿಂಗ್ ಯಂತ್ರವು ತನ್ನ ಸಾಮರ್ಥ್ಯಕ್ಕೆ ಸರಿಯಾಗಿ ಕಾರ್ಯನಿರ್ವಹಿಸಿದರೆ, ಅದು ಗಂಟೆಗೆ 5 ಮಿಮೀ ವೇಗದಲ್ಲಿ ಸುರಂಗವನ್ನು ಕತ್ತರಿಸಲು ಸಾಧ್ಯವಾಗುತ್ತದೆ.

Advertisement

ಚಿನ್ಯಾಲಿಸೌರ್ ಹೆಲಿಪ್ಯಾಡ್‌ನಿಂದ ಭಾರತೀಯ ವಾಯುಪಡೆಯ ಹರ್ಕ್ಯುಲಸ್ ವಿಮಾನದಿಂದ ದೆಹಲಿಯಿಂದ ತರಲಾದ ಡ್ರಿಲ್ಲಿಂಗ್ ಯಂತ್ರ ಮೂರು ಸರಕುಗಳು ಸುರಂಗವನ್ನು ತಲುಪಿದೆ. ಚಿನ್ಯಾಲಿಸೌರ್‌ನಿಂದ ಸುರಂಗದ ಅಂತರ ಸುಮಾರು 35 ಕಿಲೋಮೀಟರ್‌ಗಳು.

ನಾರ್ವೆ ಮತ್ತು ಥೈಲ್ಯಾಂಡ್‌ನ ತಜ್ಞರನ್ನು ಪರಿಗಣಿಸಿ ಸುರಂಗ ಇರುವ ಪರ್ವತಗಳ ಸ್ಥಿತಿಯ ವಿವರ ನೀಡಲಾಗಿದೆ. 800 ಎಂಎಂ ಮತ್ತು 900 ಎಂಎಂ ಸ್ಥಳಾಂತರಿಸುವ ಟ್ಯೂಬ್‌ಗಳನ್ನು ನುಗ್ಗಿಸಲು ಸುಮಾರು 50 ಮೀಟರ್ ಶಿಲಾಖಂಡರಾಶಿಗಳನ್ನು ಭೇದಿಸಬೇಕಾಗಿದೆ. ಇದರ ನಂತರ ಅವಶೇಷಗಳ ಇನ್ನೊಂದು ಬದಿಯಲ್ಲಿ ಸಿಕ್ಕಿಬಿದ್ದ ಕಾರ್ಮಿಕರು ಸುರಕ್ಷಿತವಾಗಿ ತೆವಳಿಕೊಂಡು ಹೊರ ಬರಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next