ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಿಎಸ್‌ಟಿಯ ಸುತ್ತೋಲೆಗಳಲ್ಲಿ ಯಾವ ಉತ್ಪನ್ನಗಳಿಗೆ ಎಷ್ಟು ಜಿಎಸ್‌ಟಿ ಪ್ರಮಾಣ ನಿಗದಿಪಡಿಸಲಾಗಿದೆ ಎಂಬ ಮಾಹಿತಿ ನೀಡಲಾಗಿದೆ. ಯಾವ ಉತ್ಪನ್ನದ ಮೇಲೆ ಎಷ್ಟು ಜಿಎಸ್‌ಟಿ ಪ್ರಮಾಣ ಹಾಕಬಹುದು ಹಾಗೂ ಎಚ್‌ಎಸ್‌ಎನ್ ಕೋಡ್ ನೀಡಲಾಗಿದೆ. ಹೀಗಾಗಿ ಸುತ್ತೋಲೆಯನ್ನು ಪರಿಶೀಲಿಸಿದರೆ ನಿಮ್ಮ ಉತ್ಪನ್ನಗಳ ಜಿಎಸ್‌ಟಿ ಪ್ರಮಾಣ ತಿಳಿಯಲಿದೆ.
– ಕೆನರಾ ಆಗ್ರೋ ಅಂಡ್ ಕೆಮಿಕಲ್ಸ್, ಮಂಗಳೂರು
Advertisement
ನಾವು ಸಾಮಾನ್ಯವಾಗಿ ಉಡುಪಿ ಹೋಟೆಲ್ ಅಥವಾ ಇತರೆ ಸಣ್ಣ ಹೋಟೆಲ್‌ಗಳಿಗೆ ಭೇಟಿ ಕೊಡುತ್ತೇವೆ. ಹೋಟೆಲ್‌ಗಳು ತಿಂಡಿ-ತಿನಿಸುಗಳ ಮೇಲೆ ಶೇ.12ರಷ್ಟು ಜಿಎಸ್‌ಟಿ ಹಾಕುತ್ತಿದ್ದು, ಇಂತಹ ಹೋಟೆಲ್‌ಗಳಿಗೆ ಇಷ್ಟು ಪ್ರಮಾಣ ತೆರಿಗೆ ವಿಧಿಸಲು ಅವಕಾಶವಿದೆಯೇ? ಯಾವ ಹೋಟೆಲ್‌ಗಳು ಎಷ್ಟು ಪ್ರಮಾಣದ ಜಿಎಸ್‌ಟಿ ವಿಧಿಸಬಹುದು ಎಂಬ ಮಾಹಿತಿ ನೀಡಿ.ವಾರ್ಷಿಕ 20 ಲಕ್ಷ ರೂ. ಗಳಿಗಿಂತ ಅಧಿಕ ವಹಿವಾಟು ನಡೆಸುವಂತಹ ಹೋಟೆಲ್‌ಗಳು ಜಿಎಸ್‌ಟಿ ವ್ಯಾಪ್ತಿಗೆ ಒಳಪಡುತ್ತವೆ. ವಾರ್ಷಿಕ 75 ಲಕ್ಷ ರೂ. ಗಳಿಗಿಂತ ಕಡಿಮೆ ವಹಿವಾಟು ನಡೆಸುವ ಹೋಟೆಲ್‌ಗಳು ಶೇ.5ರಷ್ಟು ಸರಕು ಮತ್ತು ಸೇವಾ ಶುಲ್ಕ ತೆರಿಗೆ ಪಾವತಿಸಬೇಕು. ರಾಜ್ಯ ತೆರಿಗೆಗೆ ಒಳಪಡದಿರುವ ಹೋಟೆಲ್ ಮತ್ತು ರೆಸ್ಟೋರಂಟ್‌ಗಳು ಹವಾನಿಯಂತ್ರಿತ ವ್ಯವಸ್ಥೆ ಇಲ್ಲದಿದ್ದರೆ ಶೇ.12ರಷ್ಟು ಜಿಎಸ್‌ಟಿ (ಕೇಂದ್ರ ಜಿಎಸ್‌ಟಿ ಶೇ.6 ಮತ್ತು ರಾಜ್ಯ ಜಿಎಸ್‌ಟಿ ಶೇ.6) ಹಾಗೂ ಹವಾನಿಯಂತ್ರಿತ ವ್ಯವಸ್ಥೆ ಹೊಂದಿರುವ ಹೋಟೆಲ್‌ಗಳು ಶೇ.18ರಷ್ಟು (9/9) ಜಿಎಸ್‌ಟಿ ಮತ್ತು ಸಿಹಿ ತಿನಿಸು ಮಳಿಗೆಗಳು ಶೇ.5ರಷ್ಟು ಜಿಎಸ್‌ಟಿ ಹಾಕಬಹುದಾಗಿದೆ.
– ಆರ್.ಪಿ.ನಾಗರಾಜ್, ಮಾಜಿ ಭಾರತೀಯ ನೌಕಾಸೇನೆ ಅಧಿಕಾರಿ, ಮೈಸೂರು
– ಬಿ.ವಿ.ಮುರಳಿಕೃಷ್ಣ ಆಯುಕ್ತ, ವಾಣಿಜ್ಯ ತೆರಿಗೆ ಇಲಾಖೆ ►Part – 1►ನಿಮ್ಮ ಪ್ರಶ್ನೆಗಳಿಗೆ ತಜ್ಞರ ಉತ್ತರ: //bit.ly/2umBYnd
►Part – 2►GST ಗೊಂದಲಗಳಿಗೆ ಪರಿಹಾರ: //bit.ly/2tJrv7H
►ಉತ್ತರಾಯಣ-3►GST ಗೊಂದಲಗಳಿಗೆ ಪರಿಹಾರ: //bit.ly/2uLi2cW
Related Articles
Advertisement