Advertisement
ಅಲಕಾನಂದ ನದಿ ತೀರದಲ್ಲಿ “ನಮಾಮಿ ಗಂಗೆ’ ಯೋಜನೆಗಾಗಿ ಅವರೆಲ್ಲ ಕೆಲಸ ಮಾಡುತ್ತಿದ್ದರು. ಅಸುನೀಗಿದವರಲ್ಲಿ ಮೂವರು ಹೋಮ್ ಗಾರ್ಡ್‌ಗಳು, ಒಬ್ಬ ಪೊಲೀಸ್ ಸಿಬಂದಿ ಸೇರಿದ್ದಾರೆ. ಸ್ಫೋಟಕ್ಕೆ ಸಂಬಂಧಿಸಿ ಉನ್ನತ ಮಟ್ಟದ ತನಿಖೆ ನಡೆಸುವಂತೆ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಆದೇಶಿಸಿದ್ದಾರೆ. ಸ್ಫೋಟದ ತೀವ್ರತೆಯಿಂದಾಗಿ ಆರು ಮಂದಿ ಸುಟ್ಟು ಕರಕಲಾಗಿದ್ದಾರೆ ಎಂದು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಜಿಪಿ ವಿ.ಮುರುಗೇಶನ್ ತಿಳಿಸಿದ್ದಾರೆ.
ಸಿಯಾಚಿನ್ ಗ್ಲೆಷಿಯರ್‌ನಲ್ಲಿರುವ ಸೇನಾ ಟೆಂಟ್‌ನಲ್ಲಿ ಬುಧವಾರ ಬೆಂಕಿ ಅನಾಹುತ ಸಂಭವಿಸಿದೆ. ಪರಿಣಾಮ ಸೇನೆಯ ಅಧಿಕಾರಿಯೊಬ್ಬರು ಮೃತಪಟ್ಟು, 6 ಯೋಧರು ಗಾಯಗೊಂಡಿದ್ದಾರೆ. ಈ ಪೈಕಿ ಮೂವರ ಸ್ಥಿತಿ ಚಿಂತಾಜನಕವಾಗಿದೆ. ಹಲವು ಟೆಂಟ್‌ಗಳಿಗೆ ಹಾನಿಯಾಗಿದೆ. ಶಾರ್ಟ್ ಸರ್ಕ್ನೂಟ್‌ನಿಂದ ಅವಘಡ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.