ನವದೆಹಲಿ:ಉತ್ತರಾಖಂಡ್ ಸರ್ಕಾರದ ಸಾರಿಗೆ ಸಚಿವ, ಬಿಜೆಪಿ ಮುಖಂಡ ಯಶ್ ಪಾಲ್ ಆರ್ಯ ಮತ್ತು ಅವರ ಪುತ್ರ ಸಂಜೀವ್ ಆರ್ಯ ಬಿಜೆಪಿಗೆ ರಾಜೀನಾಮೆ ನೀಡಿ ಸೋಮವಾರ(ಅಕ್ಟೋಬರ್ 11) ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.
ಇದನ್ನೂ ಓದಿ:ಪ್ರಮುಖ ಪಂದ್ಯಕ್ಕೂ ಮೊದಲೇ ಆರ್ ಸಿಬಿ ತಂಡದಿಂದ ಹೊರನಡೆದ ಇಬ್ಬರು ಸ್ಟಾರ್ ಆಟಗಾರರು!
ಉತ್ತರಾಖಂಡ್ ನ ಬಿಜೆಪಿ ನೇತೃತ್ವದ ಸರ್ಕಾರದಲ್ಲಿ ಯಶ್ ಪಾಲ್ ಆರ್ಯ ಸಾರಿಗೆ ಸಚಿವರಾಗಿದ್ದು, ಮಗ ಸಂಜೀವ್ ಪಾಲ್ ಅವರು ನೈನಿತಾಲ್ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದಾರೆ ಎಂದು ವರದಿ ತಿಳಿಸಿದೆ.
ಕಾಂಗ್ರೆಸ್ ಪಕ್ಷದ ಮುಖಂಡರಾದ ಹರೀಶ್ ರಾವತ್, ರಣದೀಪ್ ಸುರ್ಜೇವಾಲ್ ಹಾಗೂ ಕೆ.ಸಿ,ವೇಣುಗೋಪಾಲ್ ಸಮ್ಮುಖದಲ್ಲಿ ಯಶ್ ಪಾಲ್ ಆರ್ಯ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿರುವುದಾಗಿ ವರದಿ ಹೇಳಿದೆ.
ಭಾರತೀಯ ಜನತಾ ಪಕ್ಷಕ್ಕೆ ರಾಜೀನಾಮೆ ನೀಡಿದ ನಂತರ ಯಶ್ ಪಾಲ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಸಚಿವ ಸ್ಥಾನಕ್ಕೂ ರಾಜೀನಾಮೆ ನೀಡಿರುವುದಾಗಿ ಕಾಂಗ್ರೆಸ್ ಮುಖಂಡ ರಣದೀಪ್ ಸುರ್ಜೇವಾಲಾ ತಿಳಿಸಿರುವುದಾಗಿ ಎಎನ್ ಐ ನ್ಯೂಸ್ ಏಜೆನ್ಸಿ ತಿಳಿಸಿದೆ.
ತಂದೆ ಮತ್ತು ಮಗ ಇಬ್ಬರೂ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಇದೊಂದು ಮತ್ತೆ ಮನೆಗೆ ಮರಳಿ ಬಂದಂತೆ ಆಗಿದೆ. ಯಾಕೆಂದರೆ ಈ ಮೊದಲು ಯಶ್ ಪಾಲ್ ಅವರು ಉತ್ತರಾಖಂಡ್ ಪ್ರದೇಶ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿದ್ದರು ಎಂದು ಕೆಸಿ ವೇಣುಗೋಪಾಲ್ ತಿಳಿಸಿದ್ದಾರೆ.