Advertisement

Uttarakhand; ಲಿವ್‌ ಇನ್‌ ಜೋಡಿ ಬಗ್ಗೆ ಹೆತ್ತವರಿಗೂ ಮಾಹಿತಿ!

12:00 AM Jul 14, 2024 | Team Udayavani |

ಡೆಹ್ರಾಡೂನ್‌: ಉತ್ತರಾಖಂಡದಲ್ಲಿ ಏಕರೂಪ ನಾಗರಿಕ ಸಂಹಿತೆ ಕಾಯ್ದೆ ಜಾರಿಗೆ ನೇಮಿಸಿರುವ 9 ಮಂದಿಯ ಸಮಿತಿಯು ಸಹ ಜೀವನ ಸೇರಿದಂತೆ ಹಲವು ವಿಚಾರಗಳಿಗೆ ಸಂಬಂಧಿಸಿ ಹಲವು ನಿಯಮಗಳನ್ನು ರೂಪಿಸಿದೆ.

Advertisement

ಹೊಸ ಸಂಹಿತೆಯಲ್ಲಿ ಲಿವ್‌ ಇನ್‌ ಸಂಬಂಧದಲ್ಲಿರುವವರು ತಮ್ಮ ಸಂಬಂಧವನ್ನು ನೋಂದಣಿ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ. ನೋಂದಣಿ ವೇಳೆ ಆ ಜೋಡಿ ನೀಡುವ ಎಲ್ಲ ಮಾಹಿತಿಗಳನ್ನೂ ಗೌಪ್ಯವಾಗಿಡಲಾಗುವುದು ಎಂದು ಸಮಿತಿ ಹೇಳಿದೆ. ಆದರೆ ಲಿವ್‌ ಇನ್‌ ಸಂಬಂಧದಲ್ಲಿರುವ ಜೋಡಿಯು 18-21ರ ವಯೋಮಾನದವರಾಗಿದ್ದರೆ, ಅವರ ಬಗೆಗಿನ ಮಾಹಿತಿಯನ್ನು ಅವರ ಹೆತ್ತವರಿಗೆ ನೀಡಲಾಗುವುದು ಎಂದೂ ಸಮಿತಿ ಹೇಳಿದೆ. ಈ ಜೋಡಿ ಇನ್ನೂ ನಿಗದಿತ ಪ್ರಬುದ್ಧ ವಯೋಮಾನಕ್ಕೆ ಬಾರದೇ ಇರುವುದರಿಂದ, ಅವರ ಸುರಕ್ಷೆಯ ದೃಷ್ಟಿಯಿಂದ ಪೋಷಕರಿಗೆ ವಿಚಾರ ತಿಳಿಸಬೇಕಾಗುತ್ತದೆ ಎಂದಿದೆ.

ಅಕ್ಟೋಬರ್‌ನಿಂದ ಕಾಯ್ದೆ ಜಾರಿಯಾಗಲಿದ್ದು, ಅದಕ್ಕೆ ಸಂಬಂಧಿಸಿದ ನಿಯಮ, ಪ್ರಕ್ರಿಯೆ, ಇತರ ಸಂಗತಿ ರೂಪಿಸುವ ಅಧಿಕಾರ ಈ ಸಮಿತಿಗೆ ನೀಡಲಾಗಿತ್ತು. ಶುಕ್ರವಾರ ಸಮಿತಿ ವರದಿ ಯನ್ನು ಅಪ್‌ಲೋಡ್‌ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next