Advertisement

Renukaswamy Case: ಮಗ ಬೇಡಿಕೊಂಡ ಫೋಟೋ ನೋಡಲಾರೆ: ತಾಯಿ ರತ್ನಪ್ರಭಾ ಕಣ್ಣೀರು

12:54 AM Sep 06, 2024 | Team Udayavani |

ಚಿತ್ರದುರ್ಗ: ಮಗನ ಭಯಾನಕವಾಗಿ ಕೊಲೆಯಾಗಿದ್ದನ್ನು ನೋಡಿ ಗಾಬರಿಯಾಗಿದ್ದೆ. ಈಗ ಬಂದಿರುವ ಫೋಟೋಗಳನ್ನು ಮಗಳು ತೋರಿಸಲು ಬಂದರೂ ನಾನು ಬೇಡ ಎಂದು ಹೇಳಿದೆ ಎಂದು ರೇಣುಕಾಸ್ವಾಮಿ ತಾಯಿ ರತ್ನಪ್ರಭಾ ಕಣ್ಣೀರು ಹಾಕಿದರು.

Advertisement

ಸುದ್ದಿಗಾರರ ಜತೆ ಮಾತನಾಡಿ, ನನ್ನ ಮಗ ತಪ್ಪು ಮಾಡಿದ್ದರೆ ಒದ್ದು ಬಿಟ್ಟು ಕಳಿಸಿದ್ದರೆ ಅವನು ಹೇಗೆ ಬಂದಿದ್ದರೂ ನಾವು ಸ್ವೀಕರಿಸಿ ಜೀವನ ಮಾಡಿಕೊಳ್ಳುತ್ತಿದ್ದೆವು. ಕೊಂದೇ ಹಾಕಿದ್ದಾರೆ. ಈಗಲೂ ಸ್ವಾಮಿ ಊಟಕ್ಕೆ ಬಾರಪ್ಪ ಎಂದು ಕೂಗುತ್ತೇನೆ. ಇಲ್ಲ ಎನ್ನುವುದು ಗೊತ್ತಾದಾಗ ದುಃಖವಾಗುತ್ತದೆ. ಅನುಕ್ಷಣವೂ ನೆನಪಾಗುತ್ತಾನೆ. ನಾವು ಅತ್ತರೆ ಮನೆಯವರು ಕುಗ್ಗಿ ಹೋಗುತ್ತಾರೆ ಎಂದು ಒಳಗೇ ನುಂಗಿಕೊಳ್ಳುತ್ತೇವೆ. ರೇಣುಕಾಸ್ವಾಮಿಯ ಅಜ್ಜಿ ಈಗಲೂ ಆತ ಎಲ್ಲಿ ಹೋಗಿದ್ದಾನೆ ಎಂದು ಕೇಳುತ್ತಾರೆ. ಅವರಿಗೆ ನೆನಪಿನ ಶಕ್ತಿ ಇಲ್ಲ. ನಾವು ಬೇರೆ ಊರಿಗೆ ಕೆಲಸಕ್ಕೆ ಹೋಗಿದ್ದಾನೆ ಎನ್ನುತ್ತೇವೆ ಎಂದರು.

ದರ್ಶನ್‌ ಸಹಚರರು ಮನುಷ್ಯರಲ್ಲ , ರಾಕ್ಷಸರು
ಚಿತ್ರದುರ್ಗ: ದರ್ಶನ್‌ ಮತ್ತು ಸಹಚರರು ಎಷ್ಟು ಕ್ರೂರವಾಗಿ ನಡೆದುಕೊಂಡಿದ್ದಾರೆ ಎನ್ನುವುದು ಮಗನ ಕೊನೆಯ ಫೋಟೋ ನೋಡಿದಾಗ ಗೊತ್ತಾಗುತ್ತದೆ. ನಿಜಕ್ಕೂ ಇವರು ಮನುಷ್ಯರಲ್ಲ, ರಾಕ್ಷಸರು ಎಂದು ರೇಣುಕಾಸ್ವಾಮಿ ತಂದೆ ಶಿವಣ್ಣ ಗೌಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುದ್ದಿಗಾರರ ಜತೆ ಮಾತನಾಡಿ, ನನ್ನ ಮಗ ಸಾಯುವ ಕೊನೆ ಕ್ಷಣದಲ್ಲಿ ಎಷ್ಟು ಒದ್ದಾಡಿದ್ದಾನೋ, ಎಷ್ಟು ಕಿರುಚಾಡಿದ್ದಾನೋ ಎಂದು ನೆನೆದು ನೋವು ಪಡುತ್ತೇನೆ. ನನ್ನ ಆರೋಗ್ಯ ಕ್ಷೀಣಿಸುತ್ತಿದೆ. ನಿಜ ಜೀವನದಲ್ಲಿ ಎಳ್ಳು ಕಾಳಷ್ಟು ಮಾನವೀಯತೆ ಇಲ್ಲದ ಇಂತಹ ವ್ಯಕ್ತಿಗಳಿಗೆ ದೇವರೇ ಶಿಕ್ಷೆ ಕೊಡಬೇಕು. ನನ್ನ ಮಗ ಎಷ್ಟು ನೋವುಂಡು ಮೃತಪಟ್ಟನೋ ಅಂಥದ್ದೇ ಶಿಕ್ಷೆ ಆಗಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.