Advertisement
ಭಿನ್ನಧರ್ಮದ ಜೋಡಿ ನೆಹರು ನಗರದ ವಸತಿ ಗೃಹದಲ್ಲಿ ಉಳಿದುಕೊಂಡಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಮಾಹಿತಿಯಂತೆ ಸ್ಥಳಕ್ಕೆ ತೆರಳಿ ದಾಖಲೆಗಳನ್ನು ಪರಿಶೀಲಿಸಿ ಕೊಠಡಿ ಬಾಡಿಗೆಗೆ ಪಡೆದು ಉಳಿದುಕೊಂಡಿದ್ದ ಜೋಡಿಯನ್ನು ವಿಚಾರಣೆ ನಡೆಸಿದಾಗ ಅವರು ಒಂದೇ ಧರ್ಮಕ್ಕೆ ಸೇರಿದ ಬೆಂಗಳೂರು ಮೂಲದ ದಂಪತಿಗಳೆಂದು ತಿಳಿದುಬಂದಿದೆ ಎನ್ನಲಾಗಿದೆ.ಈ ಬಗ್ಗೆ ಲಾಡ್ಜ್ ನ ಮಾಲಕರು ಪ್ರತಿಕ್ರಿಯೆ ನೀಡಿದ್ದು, 4 ವರ್ಷಗಳ ಹಿಂದೆಯೇ ಅಗ್ರಿಮೆಂಟ್ ಮೂಲಕ ಲಾಡ್ಜ್ ನಡೆಸಲು ಬೇರೊಂದು ಸಂಸ್ಥೆಗೆ ಕೊಟ್ಟಿರುತ್ತೇವೆ. ಘಟನೆಯ ಬಗ್ಗೆ ನಮಗೆ ಹೆಚ್ಚೇನು ತಿಳಿದಿಲ್ಲ ಎಂದಿದ್ದಾರೆ.