ಪಿತ್ರೋಗಡ: ಉತ್ತರಾಖಂಡದ ಪಿತ್ರೋಗಡ ಜಿಲ್ಲೆಯ ಧಾರ್ಚುಲ ಎಂಬಲ್ಲಿ ಭಾನುವಾರ ತಡರಾತ್ರಿ ಮೇಘಸ್ಫೋಟ ಉಂಟಾಗಿದೆ. ಇದರಿಂದಾಗಿ ಮೂವರು ಮಕ್ಕಳು ಸೇರಿದಂತೆ ಐವರು ಅಸುನೀಗಿದ್ದಾರೆ.
ಇಬ್ಬರು ನಾಪತ್ತೆಯಾಗಿದ್ದಾರೆ. ಧಾರಾಕಾರ ಮಳೆ, ಪ್ರವಾಹದಿಂದಾಗಿ ಮೂರು ಮನೆಗಳು ಕುಸಿದ ಕಾರಣ ಈ ದುರಂತ ಸಂಭವಿಸಿದೆ ಎಂದು ಸಶಸ್ತ್ರ ಸೀಮಾ ಬಲದ ಕಮಾಂಡೆಂಟ್ ಎಂ.ಪಿ.ಸಿಂಗ್ ಹೇಳಿದ್ದಾರೆ.
ಈ ಪ್ರದೇಶದಲ್ಲಿ ಗಾಯಾಳುಗಳನ್ನು ಸುರಕ್ಷಿತವಾಗಿ ಮತ್ತು ಕ್ಷಿಪ್ರವಾಗಿ ಆಸ್ಪತ್ರೆಗೆ ದಾಖಲಿಸಲು ಅನುಕೂಲವಾಗುವಂತೆ ತಾತ್ಕಾಲಿಕ ಹೆಲಿಪ್ಯಾಡ್ ಅನ್ನು ನಿರ್ಮಿಸಲಾಗಿದೆ ಎಂದರು.
ನಾಪತ್ತೆಯಾಗಿರುವ ಇಬ್ಬರು ಪತ್ತೆಯಾಗುವ ವರೆಗೆ ಶೋಧ ಕಾರ್ಯಾಚರಣೆ ಮುಂದುವರಿಯಲಿದೆ. ರಾಜ್ಯ ವಿಪತ್ತು ನಿರ್ವಹಣಾ ದಳ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳದ ಸಿಬ್ಬಂದಿಯನ್ನು ಸ್ಥಳಕ್ಕೆ ಕಳುಹಿಸಲಾಗಿದೆ.
ಇದನ್ನೂ ಓದಿ :ಮಹಾ ಮಳೆಗೆ ಹಳ್ಳ ಉಕ್ಕಿ ಎರಡು ಸೇತುವೆ ಮುಳುಗಡೆ : ನಗರ ರಸ್ತೆ ಸಂಪರ್ಕ ಕಡಿತ