ಉತ್ತರಾಖಾಂಡ್: ಇಲ್ಲಿನ ಮಾಜಿ ಸಿಎಂ ತ್ರಿವೇಂದ್ರ ಸಿಂಗ್ ರಾವತ್ ಅವರ ಬೆಂಗಾವಲು ಪಡೆ ವಾಹನವನ್ನು ಆನೆಯೊಂದು ಅಡ್ಡಗಟ್ಟಿದ್ದು, ಇದನ್ನು ಅರಿತ ಅವರು ಪ್ರಾಣಾಪಾಯದಿಂದ ಪಾರಾಗಲು ಬಂಡೆಯೊಂದರ ಮೇಲೆ ಏರಿದ ವಿಡಿಯೋ ಭಾರಿ ವೈರಲ್ ಆಗುತ್ತಿದೆ.
ಇದನ್ನೂ ಓದಿ:ಬಿಆರ್‌ಟಿಯಲ್ಲಿ ವಿಭಿನ್ನ ಪ್ರಭೇದದ ಕುಬ್ಜ ಹಲ್ಲಿ ಪತ್ತೆ! ಕೇವಲ 2.57 ಸೆಂ.ಮೀ
ಮಾಜಿ ಸಿಎಂ ತ್ರಿವೇಂದ್ರ ಸಿಂಗ್ ಅವರು ಪೌರಿಯಿಂದ ಕೋಟ್ವಾರ್‌ಗೆ ತೆರಳುತ್ತಿದ್ದರು. ಈ ವೇಳೆ ರಸ್ತೆ ಮಧ್ಯೆ ಆನೆಯೊಂದು ಅವರ ಬೆಂಗಾವಲು ವಾಹನವನ್ನು ಅಡ್ಡಗಟ್ಟಿದೆ. ಭಯಭೀತರಾದ ಮಾಜಿ ಸಿಎಂ ಜೀವ ಉಳಿಸಿಕೊಳ್ಳಲು ಹತ್ತಿರದಲ್ಲೇ ಇದ್ದ ದೊಡ್ಡ ಬಂಡೆಯೊಂದನ್ನು ಹತ್ತಿದ್ದಾರೆ.
ಈ ವೇಳೆ ರಸ್ತೆಯಲ್ಲಿ ನೆರೆದಿದ್ದ ಜನರನ್ನು ಗಮನಿಸಿದ ಆನೆ, ಅವರನ್ನು ಓಡಿಸಿಕೊಂಡು ಹೋಗಿದೆ. ಪ್ರಾಣ ಉಳಿಸಿಕೊಳ್ಳಲು ಜನರು ಎತ್ತರದ ಪ್ರದೇಶಗಳಿಗೆ ಓಡಿದ್ದಾರೆ, ಇದರಿಂದಾಗಿ ಆನೆಗೆ ಹಿಂಬಾಲಿಸಿಕೊಂಡು ಹೋಗಲು ಕಷ್ಟವಾಗಿ ಹಿಂದೇಟು ಹಾಕಿದೆ.
ಕಾರನ್ನು ಆನೆ ಅಡ್ಡಗಟ್ಟಿದ್ದರಿಂದ ಸಮಾರು ಅರ್ಧಗಂಟೆ ಬಂಡೆಮೇಲೆ ಉಳಿಯಬೇಕಾಯಿತು. ಆನೆಯನ್ನು ಓಡಿಸಲು ಗಾಳಿಯಲ್ಲಿ ಗುಂಡುಹಾರಿಸಲಾಯಿತು ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.