Advertisement

ಶಿಕ್ಷಕಿಗೆ ಪ್ರಶ್ನೆ ಕೇಳಿ ಬೆಪ್ಪಾದ ಸಚಿವ

09:58 AM Sep 16, 2017 | Team Udayavani |

ಹೊಸದಿಲ್ಲಿ: ಉತ್ತರಾಖಂಡ ಶಿಕ್ಷಣ ಸಚಿವರ ಜ್ಞಾನದ ಮಟ್ಟ ತೋರುವಂತಹ ವೀಡಿಯೋವೊಂದು ಈಗ ವೈರಲ್‌ ಆಗಿದೆ. ಈ ವೀಡಿಯೋದಲ್ಲಿ ಸಚಿವ ಅರವಿಂದ್‌ ಪಾಂಡೆ ಶಾಲೆಯೊಂದಕ್ಕೆ  ತಪಾಸಣೆ ನಡೆಸಲು ಹೋದ ವೇಳೆ, ರಸಾಯನ ಶಾಸ್ತ್ರ ಶಿಕ್ಷಕಿಯೊಬ್ಬರಿಗೆ ಮೈನಸ್‌ ಪ್ಲಸ್‌ ಮೈನಸ್‌ ಎಷ್ಟು? ಎಂದು ಪ್ರಶ್ನಿಸಿದ್ದರು. ಶಿಕ್ಷಕಿ “ಮೈನಸ್‌’ ಎಂದು ಉತ್ತರಿಸಿದರು. ಆದರೆ ಅದನ್ನು ಅಲ್ಲಗಳೆದ ಸಚಿವ ಸರಿ ಉತ್ತರ “ಪ್ಲಸ್‌’. ನಮಗೆ ಇಷ್ಟು ಸುಲಭದ ಉತ್ತರ ಗೊತ್ತಿಲ್ಲವೇ ಎಂದು ಹರಿಹಾಯ್ದರು. ಆದರೆ ಶಿಕ್ಷಕಿ ರಸಾಯನ ಶಾಸ್ತ್ರದನ್ವಯ ಸರಿ ಉತ್ತರವನ್ನೇ ನೀಡಿದ್ದರು. ಇಷ್ಟಲ್ಲದೇ ಕೈಲಿದ್ದ ರಾಜ್ಯ ಶಿಕ್ಷಣ ಮಂಡಳಿಯ ಪುಸ್ತಕವನ್ನು, ಗೈಡ್‌ ಪುಸ್ತಕ ಎಂದು ಆರೋಪಿಸಿದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next