ಉತ್ತರಾಖಂಡ್: ಮಹಿಳಾ ಕ್ರಿಕೆಟ್ ಆಟಗಾರ್ತಿಯರೊಂದಿಗೆ ಆಕ್ಷೇಪಾರ್ಹ ಹಾಗೂ ಆಶ್ಲೀಲವಾಗಿ ಮಾತನಾಡಿದ ಆಡಿಯೋ ವೈರಲ್ ಆದ ಬೆನ್ನಲ್ಲೇ ಕ್ರಿಕೆಟ್ ತರಬೇತುದಾರರೊಬ್ಬರು ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಉತ್ತರಾಖಂಡ್ ನಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.
ಉತ್ತರಾಖಂಡ್ ನ ಕ್ರಿಕೆಟ್ ಅಕಾಡೆಮಿಯೊಂದರಲ್ಲಿ ತರಬೇತು ನೀಡುವ ನರೇಂದ್ರ ಶಾ ಆರೋಪಿ.
ನರೇಂದ್ರ ಶಾ ಅವರ ತರಬೇತಿ ಕೇಂದ್ರಕ್ಕೆ ಬರುವ ಮಹಿಳಾ ಆಟಗಾರ್ತಿಯೊಬ್ಬಳ ಜೊತೆಗೆ ಅಶ್ಲೀಲ ಭಾಷೆ ಮತ್ತು ಆಕೆಯ ಜಾತಿಯ ಬಗ್ಗೆ ನಿಂದನೀಯ ಪದಗಳನ್ನು ಬಳಸಿದ್ದಾರೆ. ಈ ಕುರಿತ ಆಡಿಯೋ ಹೊರಬಂದು ವೈರಲ್ ಆಗಿದೆ.
ಯುವತಿ ಈ ಬಗ್ಗೆ ತನ್ನ ಮನೆಯವರಿಗೆ ತಿಳಿಸಿದ್ದು, ಮನೆಯವರು ಪೊಲೀಸರಲ್ಲಿ ದೂರು ನೀಡಿದ್ದಾರೆ. ಈ ಹಿಂದೆಯೂ ಕೋಚ್ ನರೇಂದ್ರ ಅವರ ವಿರುದ್ಧ ಬೇರೆ ಮಹಿಳಾ ಆಟಗಾರ್ತಿಯರು ಕೂಡ ದೂರು ನೀಡಿದ್ದರು.
Related Articles
ದೂರಿನ ಮೇರೆಗೆ ಶಾ ವಿರುದ್ಧ ಭಾರತೀಯ ದಂಡ ಸಂಹಿತೆ, ಪೋಕ್ಸೊ ಕಾಯ್ದೆ ಮತ್ತು ಎಸ್‌ಸಿ/ಎಸ್‌ಟಿ ಕಾಯ್ದೆಯ ಸೆಕ್ಷನ್ 354 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ.
ದೂರು ದಾಖಲಾಗುತ್ತಿದ್ದಂತೆ ಶಾ ಶುಕ್ರವಾರ ವಿಷ ಸೇವಿಸಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಿದ್ದು, ಅವರೀಗ ಅಪಾಯದಿಂದ ಪಾರಾಗಿದ್ದಾರೆ.
ನರೇಂದ್ರ ಶಾ ಟೀಮ್ ಇಂಡಿಯಾದ ಖ್ಯಾತ ಆಟಗಾರ್ತಿ ಸ್ನೇಹ ರಾಣಾ ಅವರು ಕೋಚ್ ಆಗಿದ್ದರು.