ಡೆಹ್ರಾಡೂನ್: ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳ ನಡುವೆಯೂ ಹರಿದ್ವಾರದಲ್ಲಿ ಕುಂಭಮೇಳ ನಡೆಯುತ್ತಿದೆ. ಉತ್ತರಾಖಂಡ್ ಮುಖ್ಯಮಂತ್ರಿ ತೀರತ್ ಸಿಂಗ್ ರಾವತ್ ಇದನ್ನು ಸಮರ್ಥಿಸಿಕೊಂಡಿದ್ದು, ಜನರ ಆರೋಗ್ಯ ಮುಖ್ಯ ಆದರೆ ನಂಬಿಕೆಗಳನ್ನು ಕಡೆಗಣಿಸಬಾರದು ಎಂದಿದ್ದಾರೆ.
ಹರಿದ್ವಾರದಲ್ಲಿ ನಡೆಯುತ್ತಿರುವ ಈ ಕುಂಭಮೇಳವನ್ನು ಕಳೆದ ವರ್ಷದ ನಿಜಾಮುದ್ದೀನ್ ಮರ್ಕಜ್ ಗೆ ಹೋಲಿಸಬಾರದು ಎಂದಿದ್ದಾರೆ. ನಿಜಾಮುದ್ದೀನ್ ಮರ್ಕಜ್ ಮುಚ್ಚಿದ ಸಭಾಂಗಣದಲ್ಲಿ ನಡೆದಿತ್ತು. ಆದರೆ ಕುಂಭ ಮೇಳವು ಬಯಲು ಪ್ರದೇಶದಲ್ಲಿ ನಡೆಯುತ್ತಿದೆ ಎಂದು ತೀರತ್ ಸಿಂಗ್ ರಾವತ್ ಹೇಳಿದ್ದಾರೆ.
ಇದನ್ನೂ ಓದಿ:ನಾಳೆಯಿಂದ ಮಹಾರಾಷ್ಟ್ರಾದ್ಯಂತ ಸೆಕ್ಷನ್ 144 ಜಾರಿ : ಸಿಎಂ ಉದ್ದವ್ ಠಾಕ್ರೆ
ಮರ್ಕಜ್ ನಡೆಯುವಾಗ ಕೋವಿಡ್ ಬಗ್ಗೆ ಹೆಚ್ಚಿನ ಅರಿವಿರಲಿಲ್ಲ. ಯಾವುದೇ ಗೈಡ್ ಲೈನ್ಸ್ ಇರಲಿಲ್ಲ. ಅದರಲ್ಲಿ ವಿದೇಶಿಗರೂ ಭಾಗವಹಿಸಿದ್ದರು. ಆದರೆ ಕುಂಭಮೇಳದಲ್ಲಿ ಭಾಗವಹಿಸುವವರು ನಮ್ಮವರೇ. ಅಷ್ಟೇ ಅಲ್ಲದೆ ಸಾಕಷ್ಟು ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.
ಕುಂಭ ಮೇಳ ಕೇವಲ 12 ವರ್ಷಕ್ಕೆ ಒಮ್ಮೆ ಮಾತ್ರ ಬರುತ್ತದೆ. ಹಾಗಾಗಿ ಲಕ್ಷಾಂತರ ಜನರ ನಂಬಿಕೆ ಮತ್ತು ಭಾವನೆಗಳನ್ನು ಗೌರವಿಸಬೇಕಾಗುತ್ತದೆ ಎಂದು ತೀರತ್ ಸಿಂಗ್ ಹೇಳಿದರು.